ಬೆಂಗಳೂರು ಸೇರಿ 4 ವಿಮಾನ ನಿಲ್ದಾಣಗಳಲ್ಲಿ ಅಪಾಯಕಾರಿ ಸರಕು ಪತ್ತೆ

ನವದೆಹಲಿ,ಜೂ.5- ಟರ್ಕಿಶ್ ವಿಮಾನಯಾನ ಸಂಸ್ಥೆಗಳಿಗೆ ಸೇರಿದ ವಿಮಾನಗಳ ಅನಿರೀಕ್ಷಿತ ತಪಾಸಣೆಯಲ್ಲಿ ಅಪಾಯಕಾರಿ ಸರಕುಗಳು ಬೆಂಗಳೂರು ಸೇರಿದಂತೆ ನಾಲ್ಕು ವಿಮಾನ ನಿಲ್ದಾಣಗಳಲ್ಲಿ ಪತ್ತೆಯಾಗಿದ್ದು ಮತ್ತಷ್ಟು ಆತಂಕ ಹೆಚ್ಚಿಸುವಂತೆ ಮಾಡಿದೆ


ಬೆಂಗಳೂರು ವಿಮಾನ ನಿಲ್ದಾಣವಲ್ಲದೆ, ದೆಹಲಿ, ಹೈದರಾಬಾದ್, ಚೆನ್ನೈ ವಿಮಾನ ನಿಲ್ದಾಣಗಳಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ತಪಾಸಣೆ ನಡೆಸಿದ ವೇಳೆ ಅಪಾಯಕಾರಿ ವಸ್ತುಗಳು ಪತ್ತೆಯಾಗಿದ್ದು ಇದರಿಂದ ಟಿರ್ಕಿ ವಿಮಾನಯಾನ ಸಂಸ್ಥೆಯ ಮೇಲೆ ಮತ್ತಷ್ಟು ತೂಗುಗತ್ತಿ ಬೀರುವಂತಾಗಿದೆ.


ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಭಾರತೀಯ ರಕ್ಷಣಾ ಪಡೆಗಳು ನಡೆಸಿದ “ಆಪರೇಷನ್ ಸಿಂಧೂರ್” ಕಾರ್ಯಾಚರಣೆ ನಂತರ ಭಾರತದ ಮೇಲೆ ಪಾಕಿಸ್ತಾನ ದಾಳಿ ನಡೆಸಲು ಟರ್ಕಿ, ಡ್ರೋನ್ ಸೇರಿದಂತೆ ಇನ್ನಿತರೆ ಯುದ್ದ ಸಾಮಗ್ರಿ ಕಳುಹಿಸಿತ್ತು. ಈ ಹಿನ್ನೆಲೆಯಲ್ಲಿ ಟರ್ಕಿ ವಿಮಾನಯಾನ ಸಂಸ್ಥೆಗಳಿಗೆ ದೇಶದಲ್ಲಿ ನಿರ್ಬಂಧ ಹೇರಲಾಗಿದೆ.


ಈ ನಡುವೆ ಇನ್ನೂ ಕೆಲವು ವಿಮಾನಗಳು ಕಾರ್ಯಾರಂಭ ಮಾಡುತ್ತಿರುವ ಹಿನ್ನೆಲೆಯಲ್ಲಿ ದೇಶದ ನಾಲ್ಕು ಪ್ರಮುಕ ವಿಮಾನ ನಿಲ್ದಾಣಗಳಾದ ಬೆಂಗಳೂರು, ದೆಹಲಿ, ಹೈದರಾಬಾದ್ ಮತ್ತು ಚೆನ್ನೈ ವಿಮಾನ ನಿಲ್ದಾಣಗಳಲ್ಲಿ ಟರ್ಕಿ ದೇಶಕ್ಕೆ ಸಂಬಂಧಿಸಿದ ವಿಮಾನಯಾನ ಸಂಸ್ಥೆಗಳ ಮೇಲೆ ನಡೆಸಿದ ದಾಳಿಯಲ್ಲಿ ಅಪಾಯಕಾರಿ ವಸ್ತುಗಳು ಪತ್ತೆಯಾಗಿವೆ.


ವಿಮಾನದಲ್ಲಿ ಸ್ಪೋಟಕಗಳನ್ನು ಸಾಗಿಸಲಾಗುತ್ತಿದೆ ಎನ್ನುವ ಅನುಮಾನದ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿದ ವೇಳೆ ಅಪಾಯಕಾರಿ ವಸ್ತು ಪತ್ತೆಯಾಗಿದೆ. ಈ ಸಂಬಂಧ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲ ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲು ಮುಂದಾಗಿದೆ.


ಮೇ 29 ರಿಂದ ಜೂನ್ 2 ರವರೆಗೆ ಮತ್ತು ಬೆಂಗಳೂರಿನಲ್ಲಿ ವಿಮಾನಯಾನ ಸಂಸ್ಥೆಯ ಪ್ರಯಾಣಿಕ ಮತ್ತು ಸರಕು ವಿಮಾನಗಳ “ಸುರಕ್ಷತಾ ಮೇಲ್ವಿಚಾರಣೆ ಮತ್ತು ರಾಂಪ್” ತಪಾಸಣೆ ನಡೆಸಿದ ವೇಳೆ ಅಪಾಯಕಾರಿ ವಸ್ತು ಪತ್ತೆಯಾಗಿದೆ


“ನಿರಂತರ ಸುರಕ್ಷತಾ ಮೇಲ್ವಿಚಾರಣೆ ಖಚಿತಪಡಿಸಿಕೊಳ್ಳಲು ಅಗತ್ಯವಿರುವಂತೆ” ಡಿಜಿಸಿಎ ತಪಾಸಣಾ ಕಾರ್ಯಮತ್ತು ಮತ್ತಷ್ಟು ಚುರುಕುಗೊಳಿಸಿದೆ ವಿಮಾನದಲ್ಲಿ “ಸರಕು ಅಪಾಯಕಾರಿ ಸರಕುಗಳನ್ನು ಹೊಂದಿದ್ದು, ಭಾರತದಾದ್ಯಂತ ಸ್ಫೋಟಕಗಳನ್ನು ಸಾಗಿಸಲು ಡಿಜಿಸಿಎಯಿಂದ ಅನುಮತಿ ಅಗತ್ಯವಿದೆ. ಅನುಮತಿ ಪಡೆಯದೆ ಈ ರೀತಿ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ ಎಂದು ವಾಯುಯಾನ ಸಚಿವಾಲಯ ತಿಳಿಸಿದೆ.