
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.06: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿನಡೆದ ಕಾಲ್ತುಳಿತದ 11 ಜನರ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಸರ್ಕಾರವೇ ಹೊಣೆ ಹೊತ್ತು, ಸಿಎಂ.ಡಿಸಿಎಂ, ಗೃಹ ಸಚಿವರು ರಾಜೀನಾಮೆ ನೀಡಬೇಕೆ ಹೊರತು, ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡುವುದಲ್ಲ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಅವರು ಇಂದು ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ, ಜನ ಸತ್ತರೂ ಲೆಕ್ಕಿಸದೇ ಕಪ್ ಗೆ ಮುತ್ತು ಕೊಟ್ಟ ಜನ ನಿನಗನೆ ಅತ್ತರೆ ಆಯ್ತಾ, ತಮ್ಮ ಸರ್ಕಾರಕ್ಕೆ ಕಪ್ ಗೆದ್ದವರಿಗೆ ಸನ್ಮಾನ ಮಾಡುವ ಮೂಲಕ ಮೈಲೇಜ್ ತೆಗೆದುಕೊಳ್ಳಲು, ಪುಕ್ಕಟೆ ಪಬ್ಲಿಸಿಟಿಗಾಗಿ ಪೂರ್ವ ಸಿದ್ದತೆ ಇಲ್ಲದೆ ಈ ರೀತಿ ಕಾರ್ಯಕ್ರಮ ಮಾಡಿ ಸರ್ಕಾರವೇ ಈ 11 ಜನರ ಮರಣಕ್ಕೆ ಕಾರಣವಾಗಿದೆ. ಅದಕ್ಕಾಗಿ ಅಧಿಕಾರ ಇದೆಂದು ಪೊಲೀಸರ ಮೇಲೆ ಕ್ರಮ ಜರುಗಿಸವುದು ಸರಿಯಲ್ಲ. ಈ ಕಾರ್ಯಕ್ರಮ ಮಾಡಲು ನಿರ್ಧಾರ ತೆಗೆದುಕೊಂಡ ಸಿ.ಎಂ. ಸಿದ್ದರಾಮಯ್ಯ, ಡಿಸಿಎಂ, ಡಿ.ಕೆ.ಶಿವಕುಮಾರ್ ಮತ್ತು ಗೃಹ ಸಚಿವ ಡಾ.ಪರಮೇಶ್ವರ ಅವರ ಮೇಲೆ ಪ್ರಕರಣ ದಾಖಲಿಸಬೇಕು, ಇವರನ್ನು ಅರೆಸ್ಟ್ ಮಾಡಬೇಕು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇದಕ್ಕೆಲ್ಲ ಕಾರಣ ಇವರೇ ಎಂದರು.
ಸಾಧನಾ ಸಮಾವೇಶಕ್ಕೆ ಎಷ್ಟೆಲ್ಲ ಸಿದ್ದತೆ, ಸಭೆ, ಪರಿಶೀಲನೆ ಮಾಡಿದ ಸಿಎಂ.ಡಿಸಿಎಂ ಕಪ್ ವಿಜಯೋತ್ಸವಕ್ಕೆ ಸಿದ್ಧತೆ ಇಲ್ಲದೆ ಮಾಡಿದ್ದೇಕೆ ಎಂದು ಪ್ರಶ್ನಿಸಿದರು.
ಅವಮಾನ:
ಸಾವಿಂದಾನಿಕ ಹುದ್ದೆಯ ರಾಜ್ಯಪಾಲರನ್ನೇ 20 ನಿಮಿಷಗಳ ಕಾಲ ಕ್ರಿಕೆಟ್ ಆಟಗಾರರಿಗೋಸ್ಕರ್ ಕಾಯುವಂತೆ ಮಾಡಿ ಅವರಿಗೆ ಅವಮಾನ ಮಾಡಿದೆಂದು ಆರೋಪಿಸಿದರು.
ವೆಚ್ಚ ಎಲ್ಲಿಯದು:
ಈಕಾರ್ಯಕ್ರಮ ಆಯೋಜನೆಯ ಆದೇಶ ಎಲ್ಲಿಯದು, ವೆಚ್ಚ ಮಾಡಿದ್ದು ಯಾವ ಬಾಬತ್ತಿನಲ್ಲಿ ಇದನ್ನು ಸ್ಪಷ್ಟಪಡಿಸಲಿ ಎಂದು ಶ್ರೀರಾಮುಲು ಆಗ್ರಹಿಸಿದರು.
ಅಧಿವೇಶನ ಕರೆಯಬೇಕು:
ಈ ಪ್ರಕರಣದ ಬಗ್ಗೆ ಮಾತ್ರ ಚರ್ಚೆಗೆ ಮೂರು ದಿನಗಳ ಕಾಲ ವಿಶೇಷ ಜಂಟಿ ಅಧಿವೇಶನ ಕರೆದು ಸತ್ಯಾಸತ್ಯತೆ ತಿಳಿಸಲಿ, ಜನರ ಕ್ಷಮೆ ಕೇಳಬೇಕು ಎಂದರು.
ಸಿಬಿಐ ತನಿಖೆಗೆ ಕೊಡಬೇಕು:
ಈ ಪ್ರಕರಣದ ತನಿಖೆಯನ್ನು ನಿವೃತ್ತ ನ್ಯಾಯಾಧೀಶ ರಿಂದ, ಸಿಐಡಿಯಿಂದ ತನಿಖೆ ಮಾಡಿದರೆ ಏನೂ ಆಗಲ್ಲ. ಇದಕ್ಕೆ ಕಾರಣರಾದವರಿಗೆ ಸೂಕ್ತ ಶಿಕ್ಷೆ ಆಗಬೇಕೆಂದರೆ ಸಿಬಿಐ ತನಿಖೆಗೆ ನೀಡಬೇಕೆಂದು ಆಗ್ರಹಿಸಿದರು.
ಇಂಟಲಿಜೆನ್ಸಿ ವಿಫಲ:
ಈ ಕಾರ್ಯಕ್ರಮ ಆಯೋಜನೆಯಾದರೆ ಹೇಗೆ ನಿರ್ವಹಿಸಬೇಕು, ಎಷ್ಟು ಜನ ಸೇರುತ್ತಾರೆ ಎಂಬುದರ ಬಗ್ಗೆ ಮಾಹಿತಿಪಡೆಯುವಲ್ಲಿ ಇಂಟೆಲಿಜೆನ್ಸ್ ವಿಫಲವಾಗಿದೆಂದರು.
ಸುದ್ದಿಗೋಷ್ಟಿಯಲ್ಲಿ ಪಾಲಿಕೆ ಸದಸ್ಯರಾದ ಸಿ.ಎಂ. ಇಬ್ರಾಹಿಂ ಬಾಬು, ಸುರೇಖ ಮಲ್ಲನಗೌಡ, ಶ್ರೀನಿವಾಸ್ ಮೋತ್ಕರ್, ಕೆ.ಎಸ್.ಅಶೋಕ್ ಕುಮಾರ್, ಕೆ.ಹನುಂಮತಪ್ಪ, ಎಂ.ಗೋವಿಂದರಾಜುಲು, ಎನ್.ಗೋವಿಂದರಾಜುಲು, ಮುಖಂಡರಾದ ಎಸ್.ಮಲ್ಲನಗೌಡ, ತಿಮ್ಮಪ್ಪ ಮೊದಲಾದವರು ಇದ್ದರು.