ನವದೆಹಲಿ,ಸೆ.೪- ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ- ಐಐಎಸ್ ಸಿ ಅತ್ಯುತ್ತಮ ವಿಶ್ವವಿದ್ಯಾಲಯಗಳ ವಿಭಾಗದಲ್ಲಿ ಮುಂಚೂಣಿಯಲ್ಲಿದೆ.
ಇದೇ ವೇಳೆ ಭಾರತೀಯ ತಂತ್ರಜ್ಞಾನ ಸಂಸ್ಥೆ- ಐಐಟಿ ಮದ್ರಾಸ್ ಮತ್ತೊಮ್ಮೆ ರಾಷ್ಟ್ರೀಯ ಶ್ರೇಯಾಂಕದಲ್ಲಿ ಪ್ರಥಮ ಸ್ಥಾನ ಪಡೆದಿದೆ.ಈ ಮೂಲಕ ಎಂಜಿನಿಯರಿಂಗ್ ವಿಭಾಗಗಳಲ್ಲಿ ಅಗ್ರ ಸ್ಥಾನ ಉಳಿಸಿಕೊಂಡಿದೆ.
ಐಐಟಿ ಮದ್ರಾಸ್ ಒಟ್ಟಾರೆ ಮತ್ತು ಎಂಜಿನಿಯರಿಂಗ್ ವಿಭಾಗಗಳಲ್ಲಿ ಪ್ರಾಬಲ್ಯ ಸಾಧಿಸಿದ್ದರೆ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ -ಐಐಎಸ್ ಸಿ ೨೦೨೫ ರಲ್ಲಿ ದೇಶದ ಅತ್ಯುತ್ತಮ ವಿಶ್ವವಿದ್ಯಾಲಯವೆಂದು ಘೋಷಿಸಲಾಗಿದೆ
ಶಿಕ್ಷಣ ಸಚಿವಾಲಯ ೧೦ ನೇ ಶ್ರೇಯಾಂಕಗಳ ಆವೃತ್ತಿ ಪ್ರಕಟಿಸಿದ್ದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ೨೦೨೫ ರ ಭಾರತ ಶ್ರೇಯಾಂಕ ಬಿಡುಗಡೆ ಮಾಡಿದ್ದುವಿಶ್ವವಿದ್ಯಾಲಯ ಶ್ರೇಯಾಂಕದಲ್ಲಿ ಬೆಂಗಳೂರಿನ ಐಐಎಸ್ ಸಿ ಬೆಂಗಳೂರಿನ ನಂತರ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ -ಜೆಎನ್‌ಯು ಮತ್ತು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಇವೆ.
ಸತತ ಏಳನೇ ವರ್ಷವೂ ಶ್ರೇಯಾಂಕದಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ. ೨೦೧೬ ರಲ್ಲಿ ಎನ್ ಐಆರ್ ಎಫ್ ಪ್ರಾರಂಭವಾದಾಗಿನಿಂದ ದಶಕದಿಂದ ಎಂಜಿನಿಯರಿಂಗ್ ಶ್ರೇಯಾಂಕಗಳಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದೆ.
ಎನ್‌ಐಆರೆಫ್ ಇಂಡಿಯಾ ಶ್ರೇಯಾಂಕಗಳು ೨೦೨೫ ಪಟ್ಟಿ:
ಭಾರತೀಯ ತಾಂತ್ರಿಕ ಸಂಸ್ಥೆ- ಐಐಟಿ- ಮದ್ರಾಸ್, ಭಾರತೀಯ ವಿಜ್ಞಾನ ಸಂಸ್ಥೆ- ಐಐಎಸ್ ಸಿ ಬೆಂಗಳೂರು,
ಭಾರತೀಯ ತಾಂತ್ರಿಕ ಸಂಸ್ಥೆ- ಐಐಟಿ-ಬಾಂಬೆ, ಭಾರತೀಯ ತಾಂತ್ರಿಕ ಸಂಸ್ಥೆ- ಐಐಟಿ-ದೆಹಲಿ, ಭಾರತೀಯ ತಾಂತ್ರಿಕ ಸಂಸ್ಥೆ- ಐಐಟಿ-ಕಾನ್ಪುರ, ಭಾರತೀಯ ತಾಂತ್ರಿಕ ಸಂಸ್ಥೆ- ಐಐಟಿ-ಖರಗ್‌ಪುರ, ಭಾರತೀಯ ತಾಂತ್ರಿಕ ಸಂಸ್ಥೆ- ಐಐಟಿ-ರೂರ್ಕಿ, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ, ದೆಹಲಿ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ಬನಾರಸ್ ಹಿಂದೂ ವಿಶ್ವವಿದ್ಯಾಲಯ.
ವಿಸ್ತೃತ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನ ಪಡೆದಿವೆ.೨೦೨೫ ರ ಎನ್‌ಐಆರೆಫ್ ಶ್ರೇಯಾಂಕಗಳು ಸುಸ್ಥಿರ ಅಭಿವೃದ್ಧಿ ಗುರಿಗಳು ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ೨೦೨೦ ಕ್ಕೆ ಅನುಗುಣವಾಗಿ ಹೊಸ ಮೌಲ್ಯಮಾಪನ ಮಾನದಂಡ ಒಳಗೊಂಡಿವೆ,ಭಾರತೀಯ ಜ್ಞಾನ ವ್ಯವಸ್ಥೆಗಳು ಮತ್ತು ಪ್ರಾದೇಶಿಕ ಭಾಷೆಗಳ ಅಳವಡಿಕೆಯೂ ಸೇರಿದೆ.


























