ಬೆಂಗಳೂರಿನಲ್ಲಿ ಕಟ್ಟಡದಿಂದ ಬಿದ್ದು ಬದಿಯಡ್ಕದ ಯುವಕ ಮೃತ್ಯು

ಕಾಸರಗೋಡು-ಬೆಂಗಳೂರಿನಲ್ಲಿ ಕಟ್ಟಡದಿಂದ ಬಿದ್ದು ಬದಿಯಡ್ಕ ಸಮೀಪದ ಕನ್ಯಾಪಾಡಿಯ ಯುವಕನೋರ್ವ ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.
ಕನ್ಯಾಪಾಡಿಯ ಉನೈಸ್ (೧೯) ಮೃತ ದುರ್ದೈವಿ. ಬೆಂಗಳೂರು ವೈಟ್ ಫೀಲ್ಡ್ ನ ಕಟ್ಟಡದಿಂದ ಬಿದ್ದು ಯುವಕ ಸಾವನ್ನಪ್ಪಿದ್ದಾನೆ. ಯುವಕನು ಈ ಕಟ್ಟಡದ ಮಾಲಕನ ವಸ್ತ್ರಲಾಯದ ನೌಕರನಾಗಿದ್ದನು. ಯುವಕ ಕಟ್ಟಡದ ನಾಲ್ಕನೇ ಅಂತಸ್ತಿನಲ್ಲಿ ವಾಸಿಸುತ್ತಿದ್ದನು. ಮೃತದೇಹವನ್ನು ಊರಿಗೆ ತಂದು ಅಂತ್ಯಕ್ರಿಯೆ ನಡೆಸಲಾಯಿತು ಎಂದು ತಿಳಿದುಬಂದಿದೆ.