
# 101 ಎಕರೆ , 1562 ನಿವೇಶನ
# ಜಮೀನು ನೀಡಿದ ರೈತರಿಗೆ ಅರ್ಧ ಪಾಲು
# ಒಳಚರಂಡಿ, ನೀರು, ರಸ್ತೆ ರೆಡಿ
# ವಿದ್ಯುತ್, ಹಸರೀಕರಣ ಬಾಕಿ
ಎನ್.ವೀರಭದ್ರಗೌಡ
ಬಳ್ಳಾರಿ, ಮೇ.12: ಇಲ್ಲಿನ ನಾಗರೀಕರು ಹಲವು ವರ್ಷಗಳಿಂದ ಬುಡಾ ನಿವೇಶನಗಳಿಗಾಗಿ ಕಾಯುತ್ತಿರುವ ಬಿ.ಗೋನಾಳು ಬಳಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ನಿರ್ಮಾಣ ಮಾಡಿರುವ ಸಿದ್ರಾಮೇಶ್ವರ ಬಡಾವಣೆಯ ನಿವೇಶನಗಳು ಈ ವರ್ಷಾಂತ್ಯದಲ್ಲಿ ಜನರಿಗೆ ದೊರೆಯುವ ಸಾಧ್ಯತೆ ಇದೆ.
ಕನಿಷ್ಟ ಲಾಭದಲ್ಲಿ:
ಖಾಸಗೀ ಲೇಔಟ್ ರಚಿಸುವವರು ಗರಿಷ್ಟ ಲಾಭದ ದೃಷ್ಟಿಯಿಂದ ಲೇಔಟ್ ರಚಿಸಿ ಹೆಚ್ಚಿನ ಬೆಲೆಗೆ ನಿವೇಶನ ಮಾರಾಟ ಮಾಡುವುದರಿಂದ ಬಡ ಮತ್ತು ಮಧ್ಯಮ ವರ್ಗದವರು ನಿವೇಶನ ಪಡೆಯುವ ಕನಸಿನಿಂದ ದೂರ ಉಳಿಯಬೇಕಾಗುತ್ತದೆ.
ಅದಕ್ಕಾಗಿ ನಗರಾಭಿವೃದ್ಧಿ ಪ್ರಾಧಿಕಾರ ಜಮೀನು ಪಡೆದು ಲೇಔಟ್ ರಚನೆ ಮಾಡಿ ಕನಿಷ್ಟ ಲಾಭದಲ್ಲಿ ಜನರಿಗೆ ನಿವೇಶನಗಳನ್ನು ಹಂಚುತ್ತದೆ. ಈ ರೀತಿ ನಗರದಲ್ಲಿ ವಾಜಪೇಯಿ ಬಡಾವಣೆ, ಕನಕದುರ್ಗಮ್ಮ ಬಡಾವಣೆ, ಕುವೆಂಪು ನಗರ, ರಾಘವೇಂದ್ರ ಕಾಲೋನಿ ಮೊದಲಾದವುಗಳನ್ನು ರಚಿಸಿ ಮಾರಾಟ ಮಾಡಿತ್ತು. ಇನ್ನು ಬುಡಾ ರಚನೆಯ ನಿವೇಶನಗಳನ್ನು ಖರೀದಿಸಿದರೆ ಬ್ಯಾಂಕ್ ಸಾಲ, ಇನ್ನಿತರೆ ಸೌಲಬ್ಯಗಳು ಸಹ ಸುಲಭವಾಗಿ ದೊರೆಯುತ್ತವೆ.
ಆಂಜನೇಯಲು ಪ್ರಯತ್ನ:
ಈ ನಿಟ್ಟಿನಲ್ಲಿ ಬುಡಾಗೆ .ಎಸ್.ಆಂಜನೇಯಲು ಅವರು ಈ ಹಿಂದೆ ಅಧ್ಯಕ್ಷರಾಗಿದ್ದಾಗ 2015 ರಲ್ಲಿ ರೈತರೊಂದಿಗೆ ಮಾತುಕತೆ ನಡೆಸಿ, ಜಮೀನು ಪಡೆದು ಈ ಲೆಔಟ್ ರಚನೆಗೆ ಮುಂದಾದರು. ಆದರೆ ಹಲವು ಅಡೆತಡೆಗಳಿಂದ ವಿಳಂಬವಾಗಿ 2023 ರಲ್ಲಿ ಇದರ ನಿರ್ಮಾಣ ಕಾಮಗಾರಿಗೆ ಅಧಿಕೃತವಾಗಿ ಚಾಲನೆ ಗೊಂಡಿತು. ಶೇ 50:50 ರ ಅನುಪಾತದಲ್ಲಿ ರೈತರು ಮತ್ತು ಬುಡಾಗೆ ನಿವೇಶನ ಹಂಚಿಕೆ ಒಪ್ಪಂದವಾಗಿದೆ.
ಸೈಟ್ ಸಂಖ್ಯೆ:
ಈ ಲೇಔಟ್ ನಲ್ಲಿ 30*40 ಅಳತೆಯ 343, 50*30 ಅಳತೆಯ 253, 60*40 ಅಳತೆಯ 56, 20*30 ಅಳತೆಯ 474, ಮತ್ತು 436 ಆಡ್ ಸೈಟ್ ಗಳಿವೆ ಒಟ್ಟಾರೆ 1562 ಅಲ್ಲದೆ ಸಿಎ 41 ಸಾವಿರ ಚದ ಮೀಟರ್ ಸಿಎ ಸೈಟ್ ಗಳಿವೆ.
ಅಭಿವೃದ್ಧಿ:
ಲೇಔಟ್ ನಲ್ಲಿ ರಸ್ತೆ ಡಾಂಬರೀಕರಣ, ಕುಡಿಯುವ ನೀರಿನವ್ಯವಸ್ಥೆ, ಒಳ ಚರಂಡಿ ಹಾಗು ತೆರೆದ ಚರಂಡಿ,
61 ಸಾವಿರ ಚದ ಮೀ ವಿಸ್ತೀರ್ಣದ ಉದ್ಯಾನವನಗಳಿಗೆ ಫೆನ್ಸಿಂಗ್ ನಿರ್ಮಾಣ ಕಾರ್ಯ ಆಗಿದೆ. ಆದರೆ ಇನ್ನೂ ವಿದ್ಯುತ್ ಸಂಪರ್ಕದ ಲೈನ್ ಆಗಿಲ್ಲ. ಗಿಡ ಮರಗಳನ್ನು ನೆಡುವ ಕಾರ್ಯವೂ ಬಾಕಿ ಇದೆ. ವಿದ್ಯುತ್ ಸೌಲಭ್ಯದ 13 ಕೋಟಿ ರೂ ವೆಚ್ಚದ ಕಾಮಗಾರಿಗೆ ಡಿಪಿಆರ್ ಸಿದ್ದಗೊಂಡಿದೆ ಅನುಮತಿಯ ಬಾಕಿ ಇದೆ.
ಅರ್ಜಿ, ಹಂಚಿಕೆ:
ಯಾವುದೇ ಬಡವಾಣೆ ರಚನೆಗೊಂಡು ಹಂಚಿಕೆಯಾದಾಗ ಹಲವಾರು ಆರೋಪಗಳು ಕೇಳಿ ಬರುತ್ತಿದ್ದವು. ಅದನ್ನು ತಪ್ಪಿಸಲೆಂದು ಸಂಪೂರ್ಣ ಆನ್ ಲೈನ್ ಮೂಲಕ ಅರ್ಜಿ ಕರೆದು, ಅದರಲ್ಲಿಯೇ ನಿಯಮಾವಳಿ ಪ್ರಕಾರ ಹಂಚಲು ಹಾಸನದ ನಗರಾಭಿವೃದ್ಧಿ ಪ್ರಾಧಿಕಾರ ಹೊಸ ತಂತ್ರಜ್ಞಾನದ ಆ್ಯಾಪ್ ಸಿದ್ದಪಡಿಸಿದೆ. ನೀವು ಸಹ ಅದರ ಮೂಲಕವೇ ಹಂಚಬೇಕು ಎಂದು ನಗರಾಭಿವೃದ್ಧಿ ಇಲಾಖೆ ಬುಡಾಗೆ ಸೂಚಿಸಿದೆಯಂತೆ.
ಬೆಲೆ ?
ಸುತ್ತಮುತ್ತಲಿನ ಬಡಾವಣೆಗಳಲ್ಲಿ 2200 ಪ್ರತಿ ಅಡಿಗೆ ಇದೆಯಂತೆ. ಇಲ್ಲಿ ಕನಿಷ್ಟ ಲಾಭದಲ್ಲಿ ಅಂದರೆ ಅಭಿವೃದ್ಧಿ ವೆಚ್ಚದ ಜೊತೆ ಕನಿಷ್ಡ ಲಾಭವನ್ನು ನಿಗಧಿಪಡಿಸಿ 1500 ಪ್ರತಿ ಚದರ ಅಡಿ ಆಗಬಹುದು ಎನ್ನಲಾಗುತ್ತಿದೆ.
:ಎರೆಡು ತಿಂಗಳಲ್ಲಿ ಅರ್ಜಿ ಆಹ್ವಾನ:
ನಿವೇಶನ ಹಂಚಿಕೆಗೆ ಬರುವ ಎರೆಡು ತಿಂಗಳಲ್ಲಿ ಜನರಿಂದ ಅರ್ಜಿ ಆಹ್ವಾನಿಸಲಿದೆ. ಇದಕ್ಕಾಗಿ ಹೊಸ ಆ್ಯ್ ಪ್ ಸಿದ್ದಗೊಂಡಿದ್ದು ಆ ಮೂಲಕವೇ ಹಂಚಿಕೆ ಆಗಲಿದೆ.
ಜೆ.ಎಸ್.ಆಂಜನೇಯಲು
ಅಧ್ಯಕ್ಷರು, ಬುಡಾ, ಬಳ್ಳಾರಿ.
:ವರ್ಷಾಂತ್ಯದಲ್ಲಿ ನಿವೇಶನ ಹಂಚಿಕೆ:
ಕಳೆದ ಹಲವು ವರ್ಷಗಳಿಂದ ನಗರದ ನಾಗರೀಕರು ಕಾಯುತ್ತಿರುವ ಸಿದ್ರಾಮೇಶ್ವರ ಬಡಾವಣೆಯು ಬಹುತೇಖ ಪೂರ್ಣಗೊಂಡಿದೆ. ಈ ವರ್ಷಾಂತ್ಯದಲ್ಲಿ ನಿವೇಶನ ಹಂಚಿಕೆ ಮಾಡಲಿದೆ.
ಕಲೀಲ್ ಸಾಬ್
ಆಯುಕ್ತರು, ಬುಡಾ, ಬಳ್ಳಾರಿ.
ಹಾಸನದಲ್ಲಿ ಹೊಸ ಆಪ್ ಮೂಲಕ ಅವರಯ ಮಾಡಿದ್ದಾರೆ.
ಸಧ್ಯ ಎರಡು ತಿಂಗಳಲ್ಲಿ ಅರ್ಜಿ ಕರೆ ಸಾಧ್ಯತೆ





























