ಬಿ.ಗೋನಾಳ್ ಶಾಲೆಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಮನವಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ನ.27:
ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿಯು ಇಂದು ಜಿಪಂ ಸಿಇಓ ಎಂ.ಡಿ.ಹ್ಯಾರೀಸ್ ಸುಮೇರ ಅವರಿಗೆ ಮನವಿ ಸಲ್ಲಿಸಿ. ಬಿ ಗೋನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಾಂಪೌಂಡ್ ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಒದಗೊಸುವಂತೆ ಕೋರಿದೆ.
ಈ ಶಾಲೆಯಲ್ಲಿ 160ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ಆಗಸ್ಟ್ ತಿಂಗಳಲ್ಲಿ ವಿಪರೀತವಾದ ಮಳೆ ಬಂದಿದ್ದರಿಂದ ಅದರ ಹೊಡೆತಕ್ಕೆ ಶಾಲೆಯ ಒಂದು ಭಾಗದ ಕಾಂಪೌಂಡ್ ಸಂಪೂರ್ಣವಾಗಿ ಬಿದ್ದಿದೆ. ಇದನ್ನು ಸರಿಪಡಿಸಬೇಕು. ಆಟದ ಮೈದಾನವು
ಸಮತಟ್ಟು ಮಾಡಬೇಕು.ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಿ ಕೊಡಬೇಕು. ಆವರಣದ ಒಳಗೆ ನೀರಿನ ಸಂಪು ನಿರ್ಮಾಣ ಮಾಡಬೇಕು. ನೀರಿನ ಟ್ಯಾಂಕ್ ನಿರುಪಯುಕ್ತವಾಗಿದ್ದು ನೀರು ಒಳ ಚರಂಡಿಗೆ ಹೋಗುತ್ತಿಲ್ಲ ಇದನ್ನು ಸರಿಪಡಿಸಬೇಕು ಎಂದು ಮನವಿ ಮಾಡಿದ್ದಾರೆ
ಶಂಕರ ನಂದಿಹಾಳ್, ಹನುಮೇಶ್ ಕಟ್ಟಿಮನಿ, ಮಾನಯ್ಯ ಬಿ.ಗೋನಾಳ್ ಮೊದಲಾದವರು ಮನವಿ ಸಲ್ಲಿಸಿದರು.