ಬಿಹಾರ ಎನ್‌ಡಿಎ ಗೆಲುವಿಗೆ ಪುತ್ತೂರಿನಲ್ಲಿ ವಿಜಯೋತ್ಸವ

oplus_2

ಪುತ್ತೂರು: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಅಭೂತಪೂರ್ವ ಗೆಲುವು ಪಡೆದ ಹಿನ್ನಲೆಯಲ್ಲಿ ಪುತ್ತೂರು ಬಿಜೆಪಿ ಕಚೇರಿ ಮುಂಭಾಗದಲ್ಲಿ ವಿಜಯೋತ್ಸವ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಂಎಲ್‌ಸಿ ಕಿಶೋರ್ ಕುಮಾರ್ ಬೊಟ್ಯಾಡಿ ದೇಶದ ಅಖಂಡತೆ ಮತ್ತು ಅಭಿವೃದ್ಧಿಗೆ ಮೋದಿ ಮಾತ್ರ ಪರಿಹಾರ. ಇದಕ್ಕೆ ಬಿಹಾರದ ಬಿಜೆಪಿ ಗೆಲುವು ಸ್ಪಷ್ಟವಾದ ಉದಾಹರಣೆಯಾಗಿದೆ.
ರಾಜ್ಯದಲ್ಲಿ ನಡೆಯಲಿರುವ ಚುನಾವಣೆಗಳಿಗೂ ಇದು ದಿಕ್ಸೂಚಿಯಾಗಲಿದೆ. ೭೦ ವರ್ಷದ ಕಾಂಗ್ರೇಸ್ ಆಡಳಿ ಹಾಗೂ ೧೨ ವರ್ಷದ ಮೋದಿ ಆಳ್ವಿಕೆಯನ್ನು ಜನತೆ ತುಲನೆ ಮಾಡುತ್ತಿದ್ದಾರೆ. ಭಯೋತ್ಪಾದನೆಗೆ ಬೆಂಬಲ ನೀಡುವ ಕಾಂಗ್ರೇಸ್ ಗೆ ಜನತೆ ಬೆಂಬಲ ನೀಡುವುದಿಲ್ಲ ಎಂದರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ದೇಶದಲ್ಲಿ ಓಟ್ ಚೋರಿ ಆಗಿಲ್ಲ, ನರೇಂದ್ರ ಮೋದಿ ಸಾಧನೆ ಕೆಲಸ ಮಾಡಿದೆ ಎಂಬುದನ್ನು ಬಿಹಾರ ಚುನಾವಣೆಯಲ್ಲಿ ಜನತೆ ತೋರಿಸಿಕೊಟ್ಟಿದ್ದಾರೆ. ಭಯೋತ್ಪಾದನೆಯನ್ನು ಹುಟ್ಟುಹಾಕಿ ಬೆಳೆಸಿದ್ದೇ ಹಾಕಿದ್ದೆ ಕಾಂಗ್ರೆಸ್ ಪಕ್ಷ. ಆದರೆ ಭಯೋತ್ಪಾದನೆ ವಿರುದ್ದ ಮೋದಿ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಕ್ಕೆ ಜನ ಬೆಂಬಲ ವ್ಯಕ್ತಪಡಿಸಿದ್ದಾರೆ. ದೇಶದ ಆಂತರಿಕ ಭದ್ರತೆ, ಪ್ರಗತಿಗಾಗಿ ಎನ್‌ಡಿಎ ಜತೆ ಜನತೆ ನಿಂತಿದ್ದಾರೆ ಎಂದರು.
ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರು, ಪ್ರಮುಖರಾದ ಚನಿಲ ತಿಮ್ಮಪ್ಪ ಶೆಟ್ಟಿ, ಗೋಪಾಲಕೃಷ್ಣ ಹೇರಳೆ, ಅಪ್ಪಯ್ಯ ಮಣಿಯಾಣಿ, ಚಂದ್ರಶೇಖರ್ ಬಪ್ಪಳಿಗೆ, ರಾಜೇಶ್ ಬನ್ನೂರು, ಸಾಜ ರಾಧಾಕೃಷ್ಣ ಆಳ್ವ, ಸೀತಾರಾಮ ರೈ ಕೆದಂಬಾಡಿಗುತ್ತು, ಯು. ಲೋಕೇಶ್ ಹೆಗ್ಡೆ, ರಾಧಾಕೃಷ್ಣ ಬೋರ್ಕರ್, ಯುವರಾಜ ಪೆರಿಯತ್ತೋಡಿ, ಹರಿಪ್ರಸಾದ್ ಯಾದವ್, ನಾಗೇಶ್ ಕೆಮ್ಮಾಯಿ, ನಾಗೇಶ್ ಬಾಳಿಗ, ವಿದ್ಯಾಧರ್ ಜೈನ್, ಶಶಿಧರ್ ನಾಯಕ್, ದೀಕ್ಷಾ ಪೈ, ವಸಂತಲಕ್ಷ್ಮೀ ಭಾಗವಹಿಸಿದ್ದರು.
ಸಾಲುಮರದ ತಿಮ್ಮಕ್ಕ ಅವರ ನಿಧನಕ್ಕೆ ಹಾಗೂ ದೆಹಲಿ ಬಾಂಬ್ ಸ್ಪೋಟದಲ್ಲಿ ಬಲಿಯಾದವರಿಗೆ ಪಕ್ಷದ ಕಚೇರಿಯಲ್ಲಿ ಮೌನ ಪ್ರಾರ್ಥನೆ ನಡೆಸಲಾಯಿತು. ಈ ಕಾರಣದಿಂದ ವಿಜಯೋತ್ಸವದ ಸಂದರ್ಭದಲ್ಲಿಯೂ ಸಿಹಿ ಹಂಚಿಕೆ ಹಾಗೂ ಸಿಡಿಮದ್ದಿಗೆ ಅವಕಾಶ ಇರಲಿಲ್ಲ.