Home ಜಿಲ್ಲೆ ಮೈಸೂರು ಬಿವೈ ವಿಜಯೇಂದ್ರ ಅಭಿಮಾನಿಗಳ ಮ.ಬೆಟ್ಟ ಪಾದಯಾತ್ರೆ ಯಶಸ್ವಿ

ಬಿವೈ ವಿಜಯೇಂದ್ರ ಅಭಿಮಾನಿಗಳ ಮ.ಬೆಟ್ಟ ಪಾದಯಾತ್ರೆ ಯಶಸ್ವಿ

ಸಂಜೆವಾಣಿ ವಾರ್ತೆ
ಹನೂರು.ಫೆ.24:-
ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಬಿ.ವೈ ವಿಜಯೇಂದ್ರ ಅಭಿಮಾನಿಗಳು ಕೈಗೊಂಡಿದ್ದ ಪಾದಯಾತ್ರೆ ಮೆರವಣಿಗೆ ಸತತ ಎಂಟು ದಿನಗಳನ್ನು ಪೂರೈಸಿ ಯಶಸ್ವಿಯಾಗಿ ಮಲೆ ಮಾದಪ್ಪನ ಸನ್ನಿಧಿಗೆ ತಲುಪಿದ್ದಾರೆ.


ಸನ್ಮಾನ್ಯ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸುಪುತ್ರರಾದ ಬಿ.ವೈ ವಿಜಯೇಂದ್ರ ಅಭಿಮಾನಿಗಳು ಕಳೆದ ದಿನಾಂಕ :- 15-02-2026 ರಂದು ಬೆಂಗಳೂರಿನಲ್ಲಿ ಪಾದಯಾತ್ರೆಯನ್ನು ಪ್ರಾರಂಭಿಸಿ ದಿನಾಂಕ :- 22-2-2006 ರ ಭಾನುವಾರ ಮಲೆ ಮಹದೇಶ್ವರ ಬೆಟ್ಟಕ್ಕೆ ತಲುಪಿದರು.


ಮಲೆ ಮಹದೇಶ್ವರ ಬೆಟ್ಟಕ್ಕೆ ತಲುಪಿದ ಬಿ.ವೈ ವಿಜಯೇಂದ್ರ ಅಭಿಮಾನಿಗಳ ಪಾದಯಾತ್ರಿಕರ ತಂಡ ವಿಜಯ ಸೇನೆ ರಾಜ್ಯಾಧ್ಯಕ್ಷ ದೀಪಕ್ ಸೇರಿದಂತೆ ಸ್ನೇಹಿತರು ಮಲೆ ಮಹದೇಶ್ವರ ಸ್ವಾಮಿಗೆ ಕರ್ಪೂರ ಹಚ್ಚಿ ಪ್ರಾರ್ಥಿಸಿ ಮಲೆ ಮಾದಪ್ಪನ ದೇವಾಲಯ ಸುತ್ತಲು ಉರುಳು ಸೇವೆ ಪ್ರದಕ್ಷಿಣೆ ಹಾಕಿ ಬಿ.ವೈ ವಿಜಯೇಂದ್ರ ಅವರು ಮುಂದಿನ ಮುಖ್ಯಮಂತ್ರಿ ಆಗಲಿ ಎಂದು ಪ್ರಾರ್ಥಿಸಿದರು.
ಮಲೆ ಮಾದಪ್ಪನ ದರ್ಶನ ಪಡೆದು ಉಘೇ ಉಘೇ ಮಾದಪ್ಪ ಜೈಂಕಾರ ಹಾಕುತ್ತಾ ಬಿ.ವೈ ವಿಜಯೇಂದ್ರ ಮುಂದಿನ ಮುಖ್ಯಮಂತ್ರಿ ಆಗಲಿ ಎಂದು ಮಲೆ ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಪಾದಯಾತ್ರೆಯ ಮೂಲಕ ವಿಶೇಷವಾಗಿ ಹರಕೆ ಸಲ್ಲಿಸಿದರು.


ಬೆಂಗಳೂರಿನ ಸುಮಾರು 250 ಹೆಚ್ಚು ಬಿ.ವೈ ವಿಜಯೇಂದ್ರ ಅಭಿಮಾನಿಗಳು ಪಾದಯಾತ್ರೆಯಲ್ಲಿ ಸಾಗುತ್ತಾ ವೀರಗಾಸೆ ಕುಣಿತ ತಮಟೆ ಡೋಲು ವಾದ್ಯ ಮೇಳಗಳೊಂದಿಗೆ ವಿಜೃಂಭಣೆಯಿಂದ ಮೆರವಣಿಗೆ ಸಾಗಿ ಪ್ರಮುಖ ನಗರ ಪಟ್ಟಣಗಳಲ್ಲಿ ವಾಸ್ತವ್ಯ ಹೂಡಿ ಕೊಳ್ಳೇಗಾಲದಲ್ಲಿ ಕಾಮಗೆರೆ ಮಾರ್ಗವಾಗಿ ಹನೂರು ಕೌದಳ್ಳಿ ತಾಳು ಬೆಟ್ಟವನ್ನು ತಲುಪಿದರು.
ತಾಳು ಬೆಟ್ಟದಲ್ಲಿ ಮಲೆ ಮಹದೇಶ್ವರ ಸ್ವಾಮಿಗೆ, ಧೂಪ ಕರ್ಪೂರ ಹಚ್ಚಿ ಕೈ ಮುಗಿದು ಪ್ರಾರ್ಥನೆ ಸಲ್ಲಿಸಿ ಮತ್ತೆ ಪಾದಯಾತ್ರೆಯನ್ನು ಪ್ರಾರಂಭಿಸಿ ತಾಳು ಬೆಟ್ಟದಿಂದ ರಂಗಸ್ವಾಮಿ ಒಡ್ಡು ಅನೆತಲೆ ದಿಂಬು ತಲುಪಿ ಮಲೆ ಮಹದೇಶ್ವರ ಸ್ವಾಮಿಗೆ ಉಘೇ ಉಘೇ ಮಾದಪ್ಪ ಎಂದು ಜೈಂಕಾರ ಮೊಳಗಿಸಿ ಮಲೆ ಮಾದಪ್ಪನ ಸನ್ನಿಧಿಗೆ ತಲುಪಿದರು.


ಕೆ.ಆರ್.ಐ.ಡಿ.ಎಲ್ ಮಾಜಿ ಅಧ್ಯಕ್ಷ ರುದ್ರೇಶ್, ವಿಜಯ ಸೇನೆ ರಾಜ್ಯಾಧ್ಯಕ್ಷ ದೀಪಕ್ ನೇತೃತ್ವದ 250 ಹೆಚ್ಚು ಪಾದಯಾತ್ರಿಕರ ತಂಡ ತಾಳುಬೆಟ್ಟಕ್ಕೆ ಆಗಮಿಸಿ ತೆರಳಿದರು. ಇವರ ಜೊತೆಗೆ ಜಿಲ್ಲಾ ಬಿ.ಜೆ.ಪಿ ಓ.ಬಿ.ಸಿ ಮೋರ್ಚಾ ಅಧ್ಯಕ್ಷ ಜನಧ್ವನಿ ಬಿ.ವೆಂಕಟೇಶ್, ಸಮಾಜ ಸೇವಕ ನಿಶಾಂತ್ ನೇತೃತ್ವದಲ್ಲಿ ಮುಖಂಡರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.


ಈ ಸಂದರ್ಭದಲ್ಲಿ ಕನಕಪುರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಜಗನ್ನಾಥ್( ಜಗಣ್ಣ), ಸೋಮಪುರ ಮಹೇಶ್, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಪೆÇನ್ನಾಚಿ ಮಹದೇವಸ್ವಾಮಿ, ರಾಮಾಪುರ ಬಿ.ಜೆ.ಪಿ ಮಂಡಲ ಅಧ್ಯಕ್ಷ ಮುರುಗ, ವೀರಶೈವ ಲಿಂಗಾಯತ ಮಹಾಸಭಾ ನಿರ್ದೇಶಕ ಕಿರಣ್ ಕಾಮಗೆರೆ, ನಾಗಭೂಷಣ್ ಎಸ್, ಲೋಕೇಶ್ ಜೆಟ್ಟಿ, ಆರ್.ಎಸ್ ದೊಡ್ಡಿಯ ಸುದರ್ಶನ್, ರಾಮಾಪುರ ಬಿ.ಜೆ.ಪಿ ಯುವ ಮೋರ್ಚಾ ಅಧ್ಯಕ್ಷ ನಾಗೇಂದ್ರ, ಅರವಿಂದ್, ತೆಳ್ಳನೂರು ವಿಜಯ್ ಕುಮಾರ್ ಸೇರಿದಂತೆ ಇನ್ನಿತರರು ಇದ್ದರು.