
ಎನ್.ವೀರಭದ್ರಗೌಡ
ಬಳ್ಳಾರಿ, ಸೆ.08: ರಾಜ್ಯ ಸರ್ಕಾರದ ಆಡಳಿತ ವೈಫಲ್ಯದ ವಿರುದ್ದ ಲಿಂಗಸೂಗೂರಿನಿಂದ ಆರಂಭಿಸಿರುವ ಬಿಜೆಪಿಯ ಬಳ್ಳಾರಿ ಚಲೋ ಪಾದಯತ್ರೆಯ ಸಮಾರೋಪ ಸಮಾರಂಭ ನಾಡಿದ್ದು ಸೆ.10 ರಂದು ನಗರದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿದ್ದು. ಸಮಾರಂಭದ ಸ್ಥಳಕ್ಕಾಗಿ ಬಿಜೆಪಿ ಪರದಾಡ ನಡೆಸಿದೆ.
ಪಕ್ಷದ ಜಿಲ್ಲಾ ಅಧ್ಯಕ್ಷ ಅನಿಲ್ ನಾಯ್ಡು ಅವರು ನಗರದ ಮುನಿಷಿಪಲ್ ಹೈಸ್ಕೂಲ್ ಮೈದಾನ ನೀಡುವಂತೆ ಡಿಡಿಪಿಯು ಅವರಿಗೆ ಮನವಿ ಮಾಡಿದ್ದಾರೆ. ಆದರೆ ಅವರು 2015 ರ ಮೇ ತಿಂಗಳಲ್ಲಿ ಇಲಾಖೆಯ ನಿರ್ದೇಶಕರು ಹೊಡಿಸಿರುವ ಆದೇಶವನ್ನು ಉಲ್ಲೇಖಿಸಿ ಮುನಿಷಿಪಲ್ ಹೈಸ್ಕೂಲ್ ಮೈದಾನ ನೀಡಲು ಆಗಲ್ಲ ಎಂದಿದ್ದಾರೆ. ಇದರಿಂದಾಗಿ ಬಿಜೆಪಿ ಸಮಾರಂಭದ ಸ್ಥಳಕ್ಕಾಗಿ ಪರದಾಡುವಂತಾಗಿದೆ.
ಈ ಬಗ್ಗೆ ಡಿಸಿಯವರಿಗೆ ತಿಳಿಸಿದರೂ. ಅವರು ಸಹ ಪೊಲೀಸರು ಸಹ ಇದಕ್ಕೆ ಟ್ರಾಫಿಕ್ ಸಮಸ್ಯೆ ಆಗಲಿದೆಂದು ಸಹಮತ ನೀಡಿಲ್ಲ ಅದಕ್ಕಾಗಿ ವಿಮ್ಸ್ ಗ್ರೌಂಡ್ ಇಲ್ಲ ಎಪಿಎಂಸಿ ಆವರಣದ ಆಯ್ಕೆ ಮಾಡಿಕೊಳ್ಳಿ ಇಲ್ಲದಿದ್ದರೆ ಖಾಸಗಿ ನಿವೇಶನದಲ್ಲಿ ಮಾಡಬಹುದು ಎಂದಿದ್ದಾರಂತೆ.
ಈ ವರಗೆ ಸಮಾರಂಭದ ಸ್ಥಳ ನಿಗಧಿಯಾಗಿಲ್ಲ. ಮಾಹಿತಿ ಪ್ರಕಾರ ಕೆಲ ಬಿಜೆಪಿ ಮುಖಂಡರು ಸರ್ಕಾರ ಮುನಿಷಿಪಲ್ ಹೈಸ್ಕೂಲ್ ಮೈದಾನ ನೀಡದಿದ್ದರೆ ಗಡಗಿ ಚೆನ್ನಪ್ಪ ಸರ್ಕಲ್ ನಲ್ಲಿಯೇ ಮಾಡುತ್ತೇವೆ. ನಮ್ಮನ್ನು ಬಂಧಿಸಿದರೆ ಬಂಧಿಸಲಿ ಎಂದಿದ್ದಾರಂತೆ.
ಈ ಮಧ್ಯೆ ಈ ಬಗ್ಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವ ಪಕ್ಷದ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು. ಈ ವರೆಗೆ ಪಾದಯಾತ್ರೆ ಶಾಂತಯುತವಾಗಿ ನಡೆದಿದೆ. ಸಮಾರಂಭ ಸಂಜೆ ನಡೆಯಲಿದೆ. ಕಾಲೇಜಿಗೆ ಸಮಸ್ಯೆ ಆಗದು. ನಾನು ಈ ಬಗ್ಗೆ ಡಿಸಿ ಅವರ ಬಳಿ ಮಾತನಾಡುವೆ. ಅವರು ಅವಕಾಶ ನೀಡಬೇಕು ಎಂದಿದ್ದಾರೆ.
ಈ ಹಿಂದೆ 2022 ರಲ್ಲಿ ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಗೆ ನೀಡಲಾಗಿದೆ. ಆಗ ಆದೇಶ ಇರಲಿಲ್ಲವೇ. ನಮಗೆ ಏಕೆ ನೀಡಲ್ಲ ಎಂಬ ಪ್ರಶ್ನೆ ಬಿಜೆಪಿಯದ್ದಾಗಿದೆ.
ನಗರದ ಮಧ್ಯೆದಲ್ಲಿ ಕೊಡಬಾರದು ಎಂಬುದು ರಾಜ್ಯ ಕಾಂಗ್ರೆಸ್ ನ ಉದ್ದೇಶ ವಿದ್ದಂತೆ ಇದೆ. ಶತಾಯ ಗತಾಯ ಮುನಿಷಿಪಲ್ ಮೈದಾನದಲ್ಲೇ ಮಾಡಬೇಕೆಂಬುದು ಬಿಜೆಪಿಯದ್ದಾಗಿದೆ. ಮುಂದೇನು ಆಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.























