Home ಜಿಲ್ಲೆ ಬಿಜೆಪಿ ಕಾಂಗ್ರೆಸ್ ಅಭ್ಯರ್ಥಿಗಳಿಂದ ಮತದಾರರಿಗೆ ಅಮಿಷ: ಜೆಡಿಯು ಆರೋಪ

ಬಿಜೆಪಿ ಕಾಂಗ್ರೆಸ್ ಅಭ್ಯರ್ಥಿಗಳಿಂದ ಮತದಾರರಿಗೆ ಅಮಿಷ: ಜೆಡಿಯು ಆರೋಪ

Oplus_19005442

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಅ.17: ಕಳೆದ ನಾಲ್ಕು ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಕಲ್ಬುರ್ಗಿಯ ಪ್ರೊ. ಶಂಕರರೆಡ್ಡಿ ಪಾಟೀಲ್ ಅವರು ತಾವು ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರದ ಜೆಡಿಯು ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ತಮಗೆ ಈ ತಿಂಗಳ 23 ರಂದು ನಡೆಯುವ ಮತದಾನದಲ್ಲಿ ತಮಗೆ ಪ್ರಥಮ ಪ್ರಾಶಸ್ತ್ಯ ಮತ ನೀಡುವಂತೆ ಮನವಿ ಮಾಡಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಇವರು. ನಾಲ್ಕು ಬಾರಿ ಎಂಎಲ್ ಸಿ ಆಗಿರುವ ಶಶಿಲ್ ಜಿ ನಮೋಷಿ, ಹಲವಾರು ಹೋರಾಟಗಳಿಂದ ಆದ ಪ್ರಗತಿಯನ್ನು ತಾವೇ ಮಾಡಿದಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಹೊರತು.

ಕೇರ್ ಆಪ್ ಬೆಂಗಳೂರಿನಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಎಂದೂ ಈ ಕ್ಷೇತ್ರದ ಹೋರಟದಲ್ಲಿ ಭಾಗಿಯಾಗಿಲ್ಲ.

ಮತದಾರರಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಹಣ ಹಂಚುವುದು, ತಿಂಡಿ ತೀರ್ಥ ಹಂಚುವ ಕೆಲಸ ಮಾಡುತ್ತ ಆಮಿಷ ಒಡ್ಡುತ್ತಿದ್ದಾರೆಂದು. ಕೇಂದ್ರದ ಎನ್ ಡಿಎ ಭಾಗವಾಗಿರುವ ಜೆಡಿಯು ಪಕ್ಷದ ಅಭ್ಯರ್ಥಿಯಆರೋಪವಾಗಿದೆ.

ಹಣ ಹಂಚಿ ಮತ ಕೇಳುವವರಿಗೆ ಮತ ನೀಡದೆ ಶಿಕ್ಷಕ ಬಂಧುಗಳು ಪ್ರಾಮಾಣಿಕವಾಗಿ ಹೋರಾಟದ ಮನೋಭಾವ ಹೊಂದಿರುವ ಶಂಕರ ರೆಡ್ಡಿ ಪಾಟೀಲ್ ಅವರಿಗೆ ಮತ ನೀಡುತ್ತಾರೆಂಬ ನಂಬಿಕೆ ಇದೆ

ಅನುಭವಿ ಸಮಾಜ ಸೇವಕಾರಾದ ಇವರನ್ನು ಆಯ್ಕೆ ಮಾಡಬೇಕೆಂದು ಸುದ್ದಿಗೋಷ್ಟಿಯಲ್ಲಿದ್ದ ಕೆಆರ್ ಎಸ್ ಪಕ್ಷದ ಮುಖಂಡ ಅಲ್ಲಿಪುರ ಶ್ರೀನಿವಾಸರೆಡ್ಡಿ, ಬಸವರಾಜ್ ಜಲಗೇರಿ, ಜೆಡಿಯುವನ ಶಿವರಾಂ, ಚಂದ್ರಶೇಖರ, ಸಿದ್ರಾಮಪ್ಪ ಬಸಪ್ಪ ವೀರಣ್ಣನವರ್ ಮನವಿ ಮಾಡಿದರು.