(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.13: ಸ್ವಾತಂತ್ರ್ಯೋತ್ಸವದ ಸಂಗವಾಗಿ ಹರ್ ಗರ್ ತಿರಂಗ ಯಾತ್ರೆ ಅಭಿಯಾನದ ಅಂಗವಾಗಿ ಬಿಜೆಪಿಯಿಂದ ಅನೇಕ ಮನೆಗಳಿಗೆ ಹೋಗಿ ರಾಷ್ಟ್ರ ದ್ವಜ ನೀಡಲಾಯ್ತು. ಜೊತೆಗೆ ಆ.15 ರಂದು ಮನೆಯ ಮೇಲೆ ರಾಷ್ಟ್ರಧ್ವಜಾರೋಹಣ ಮಾಡಲು ಮನವಿ ಮಾಡಲಾಯ್ತು.
ಈ ವೇಳೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಸನಿಲ್ ನಾಯ್ಡು, ಪಕ್ಷದ ವಕ್ತಾರ ಪ್ರಮೋದ್ ಕಾರಕೂನ್, ಜಿಲ್ಲಾ ವಕ್ತಾರ ಡಾಬಿ.ಕೆ.ಸುಂದರ್, ಶಂಕ್ರಪ್ಪ, ಕೆ.ಆರ್.ಮಲ್ಲೇಶ್ ಮೊದಲಾದವರು ಇದ್ದರು.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಟ ಐದು ಸಾವಿರ ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸುವ ಉದ್ದೇಶದಿಂದ ಪಕ್ಷದ ಕಾರ್ಯಕರ್ತರು, ದೇಶ ಭಕ್ತರ ಮನೆಗಳಿಗೆ ರಾಷ್ಡ್ರದ್ವಜನೀಡುತ್ತಿದೆಂದು ಈ ವೇಳೆ ಅನಿಲ್ ನಾಯ್ಡು ತಿಳಿಸಿದರು.


























