
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.01: ದೇಶದ ಸಾಂಪ್ರದಾಯಿಕವಾದ ಅರೇಂಜ್ ಮ್ಯಾರೇಜ್ ಮಹತ್ವದ ಕುರಿತಾದ “ಬಿಜಿಎಂ” ಚಿತ್ರದ ಚಿತ್ರೀಕರಣಕ್ಕೆ ಇಂದು ನಗರದ ದುರ್ಗಮ್ಮ ದೇವಸ್ಥಾನದ ಬಳಿ ಮೇಯರ್ ಪಿ.ಗಾದೆಪ್ಪ ಚಾಲನೆ ನೀಡುವರು ಎಂದು ಚಿತ್ರದ ನಿರ್ದೇಶಕ ರಮೇಶ ಭೀಮರಾಯಪ್ಪ ಹೇಳಿದ್ದಾರೆ.
ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ. ರಾಮಾಯಣ ವಸ್ತು ವಿಷಯದ ಜೊತೆಗೆ ತಳುಕು ಹಾಕಿಕೊಂಡಿದ್ದು. ತ್ರಿಕೋನ ಪ್ರೇಮಕಥೆಯ ಈ ಚಿತ್ರದ ಚಿತ್ರೀಕರಣ ಇಂದು ಆರಂಭ, ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹಾಗು ಬೆಂಗಳೂರಿನಲ್ಲಿ ನಡೆಯಲಿದೆ.
ನೂರಕ್ಕು ಹೆಚ್ಚು ಸಿನಿಮಾಗಳಿಗೆ ಹಾಡು ಬರೆದಿರುವ ಕಿನ್ನಾಳ್ ರಾಜು ಅವರು ಹಾಡುಗಳನ್ನು ಬರೆದಿದ್ದಾರೆ, ಸಂಭಾಷಣೆ, ಚಿತ್ರಕತೆ, ಬೆಂಗಳೂರಿನ ಮಲ್ಲಿಕಾರ್ಜುನ, ದಿನೇಶ್ ನಾಯಕ ನಟರು. ಪೂಜಾ ಕೊಟ್ಟೂರು, ಶ್ರೀ ಚಕ್ರ ಫಿಲಿಂಸ್ ನಿರ್ಮಾಣ ಮಾಡುತ್ತಿದ್ದು. ಆಕಾಶ್ ಪರ್ವ ಸಂಗೀತ ನಿರ್ದೇಶಕರಾಗಿದ್ದಾರೆ. ಬರುವ ಆಗಷ್ಟನಲ್ಲಿ ಗಣೇಶನ ಹಬ್ಬಕ್ಕೆ ಚಿತ್ರ ಬಿಡುಗಡೆ ಮಾಡುವ ಉದ್ದೇಶ ಇದೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ನಾಯಕ ನಟರು, ನಾಯಕಿ ಮೊದಲಾದವರು ಪಾಲ್ಗೊಂಡಿದ್ದರು.




















