ಬಿಐಟಿಎಂನ 11 ವಿದ್ಯಾರ್ಥಿಗಳಿಗೆ ಬಿಇ ಆನರ್ಸ್ ಪದವಿ: ಪೃಥ್ವಿರಾಜ್ ಭೂಪಾಲ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.20:
ನಗರದ ಬಳ್ಳಾರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ನಲ್ಲಿ     24-2025ನೇ  ಸಾಲಿನ 11 ಜನ ವಿಧ್ಯಾರ್ಥಿಗಳು ಬಿ.ಇ.ನಲ್ಲಿ ಆನರ್ಸ್ ಪದವಿ ಪಡೆದಿದ್ದಾರೆ. ನಮ್ಮ ಕಾಲೇಜು ಅಟನಾಮಸ್ ಆದ ಮೇಲಿನ ಮೊದಲ ಬ್ಯಾಚ್ ವಿದ್ಯಾರ್ಥಿಗಳು ಇವರು ಎಂದು ಕಾಲೇಜಿನ ಸಹ ಕುಲಪತಿ ವೈ.ಜೆ.ಪೃಥ್ವಿರಾಜ್ ತಿಳಿಸಿದ್ದಾರೆ.
ಅವರು ಇಂದು ತಮ್ಮ ಬಿಜಿನೆಸ್ ಕಾಲೇಜಿನಲ್ಲಿ ಸುದ್ದಿಗೋಷ್ಠಿ ನಡೆಸಿ. ಇಂಜಿನೀಯರಿಂಗ್ ನಲ್ಲಿ ಸಾಮಾನ್ಯವಾಗಿ ಪದವಿ ಪಡೆಯಲು 160 ಕ್ರೆಡಿಟ್ಸ್ ಪಡೆಯಬೇಕು. ಆನರ್ಸ್ ಪದವಿ ಪಡೆಯಲು ಇಚ್ಚಿಸುವವರು ಐದನೇ ಸೆಮಿಸ್ಟರ್ ನಿಂದ ಹೆಚ್ಚುವರಿಯಾಗಿ 18 ಕ್ರೆಡಿಟ್ಸ್ ಪಡೆಯಬೇಕು. ಅಂದರೆ ಹೆಚ್ಚುವರಿ ಸಬ್ಜಕ್ಟಗಳನ್ನು ಓದು ಪರೀಕ್ಷೆ ಬರೆದು ಪಾದಾಗಬೇಕು. ಹೀಗೆ ಅಭ್ಯಾಸ ಮಾಡಲು ಕಾಲೇಜಿನಿಂದ 18 ಜನ ಪರೀಕ್ಷೆ ತೆಗೆದುಕೊಂಡಿದ್ದರು. ಅದರಲ್ಲಿ 11 ಜನ ಆನರ್ಸ್ ಪದವಿ ಪಡರಯುವಲ್ಲಿ ಯಶಸ್ವಿಯಾಗಿದ್ದಾರೆ. ಇವರಲ್ಲಿ ಆಲಿಯಾ ಸಮಾ 73 ಕ್ರೆಡಿಟ್ಸ್ ಗಳನ್ನು ಪಡೆದು ರಾಷ್ಟ್ರೀಯ ದಾಖಲೆ ಬರೆದಿದ್ದಾರೆಂದು ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಿ. ಪ್ರಥಮ ರ್ಯಾಂಕ್ ವಿದ್ಯಾರ್ಥಿನಿಯಾಗಿರುವ ಆಲಿಯಾಗೆ ಬಸವರಾಜೇಶ್ವರಿ ಮೆಮೋರಿಯಲ್ ಗೋಲ್ಡ್ ಮೆಡಲ್ ನೀಡಿದೆ.
ಆಲಿಯಾ ಈಗ ಜರ್ಮನಿಯ ಸೀಮನ್ಸ್ ಕಂಪನಿಯ ಉದ್ಯೋಗಿಯಾಗಿದ್ದಾರೆಂದ ಅವರು ಈ ವರ್ಷ ತಮ್ಮ ಕಾಲೇಜಿನಲ್ಲಿ ಅಭ್ಯಾಸ ಮಾಡಿದ 581 ಜನ ವಿವಿಧ ಕಂಪನಿಗಳಲ್ಲಿ ಉದ್ಯೋಗದ ಆಫರ್ ಪಡೆದಿದ್ದಾರೆ. 40 ಲಕ್ಷ ರೂ ವರೆಗೆ ಪ್ಯಾಕೇಜ್ ಪಡೆದಿದ್ದಾರೆ. ನಮ್ಮ ಕಾಲೇಜಿನಲ್ಲಿ ವಿವಿಧ ಕಂಪನಿಗಳ ಜೊತೆ ಟೈಅಪ್ ಮಾಡಿಕೊಂಡು ಸ್ಕಿಲ್ ಡೆವಲಮ್ ಮೆಂಟನ್ನು ವಿದ್ಯಾಭ್ಯಾಸದ ವೇಳೆಯೇ ನೀಡುತ್ತಿದೆಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಯಡವಳ್ಳಿ ಬಸವರಾಜ್, ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ವಿಭಾಗದ ಹೆಚ್ಓಡಿ ಡಾ.ಶರಣರೆಡ್ಡಿ, ಆಲಿಯಾ ತಂದೆ ಷಕೀಬ್ ಅವರು ಇದ್ದರು.