Home ಜಿಲ್ಲೆ ಮಂಗಳೂರು ಬಿಎಂಎಸ್ ಹೋರಾಟಕ್ಕೆ ಫಲಶ್ರುತಿ: ಕಾರ್ಮಿಕ ಸಂಹಿತೆ ತಿದ್ದುಪಡಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಭರವಸೆ

ಬಿಎಂಎಸ್ ಹೋರಾಟಕ್ಕೆ ಫಲಶ್ರುತಿ: ಕಾರ್ಮಿಕ ಸಂಹಿತೆ ತಿದ್ದುಪಡಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಭರವಸೆ

ಮಂಗಳೂರು-ಕಾರ್ಮಿಕರ ಹಕ್ಕುಗಳು ಹಾಗೂ ಸಾಮಾಜಿಕ ಭದ್ರತೆಗಾಗಿ ಭಾರತೀಯ ಮಜ್ದೂರು ಸಂಘ ವತಿಯಿಂದ ಆಗಸ್ಟ್ ೧೭ರಂದು ದೇಶಾದ್ಯಂತ ನಡೆಸಿದ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಮಹತ್ವದ ಫಲಶ್ರುತಿ ದೊರೆತಿದೆ ಎಂದು ಃಒS ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್ ಯು. ತಿಳಿಸಿದ್ದಾರೆ.
ಆಗಸ್ಟ್ ೧೭ರ ಪ್ರತಿಭಟನೆಯ ಸಂದರ್ಭದಲ್ಲಿ ಸಲ್ಲಿಸಲಾದ ಮನವಿಯ ಮುಂದುವರಿದ ಭಾಗವಾಗಿ, ಸೆ.೧ರಂದು ಃಒS ಅಖಿಲ ಭಾರತ ನಾಯಕತ್ವದ ನಿಯೋಗವು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ. ಮನ್ಸುಖ್ ಮಾಂಡವೀಯ ಅವರನ್ನು ಭೇಟಿ ಮಾಡಿ ಕಾರ್ಮಿಕ ಸಂಹಿತೆಗಳ ತಿದ್ದುಪಡಿ ಹಾಗೂ ವಿವಿಧ ಪ್ರಮುಖ ಬೇಡಿಕೆಗಳ ಕುರಿತು ಸವಿಸ್ತಾರವಾಗಿ ಮಾತುಕತೆ ನಡೆಸಿತು.
ಃಒS ಅಖಿಲ ಭಾರತ ಅಧ್ಯಕ್ಷ ಎಸ್. ಮಲ್ಲೇಶಂ, ಪ್ರಧಾನ ಕಾರ್ಯದರ್ಶಿ ಸುರೇಂದ್ರ ಕುಮಾರ್ ಪಾಂಡೆ, ಸಂಘಟನಾ ಕಾರ್ಯದರ್ಶಿ ಬಿ. ಸುರೇಂದ್ರನ್, ಮಾಜಿ ಅಖಿಲ ಭಾರತ ಅಧ್ಯಕ್ಷರಾದ ಹಿರಣ್ಯ ಪಾಂಡ್ಯ ಹಾಗೂ ಸಂಜಿ ನಾರಾಯಣ್ ನಿಯೋಗದಲ್ಲಿದ್ದರು.
ಸಭೆಯಲ್ಲಿ ಇPಈ, ಇSI ಹಾಗೂ ಬೋನಸ್ ವೇತನ ಮಿತಿಗಳ ಹೆಚ್ಚಳ, ೩೦೦ ಕಾರ್ಮಿಕರ ಮಿತಿಯನ್ನು ೧೦೦ಕ್ಕೆ ಇಳಿಸುವುದು, ಈixeಜ ಖಿeಡಿm ಇmಠಿಟoಥಿmeಟಿಣಗೆ ನಿಯಂತ್ರಣ, ಉದ್ಯೋಗ ಭದ್ರತೆ, ಕಾರ್ಮಿಕ ಸಂಘಗಳ ಮಾನ್ಯತೆ ಮತ್ತು ನೋಂದಣಿಯಲ್ಲಿ ಸುಧಾರಣೆ, ‘Woಡಿಞeಡಿ’ ವ್ಯಾಖ್ಯಾನದಲ್ಲಿ ತಿದ್ದುಪಡಿ ಹಾಗೂ ಮುಷ್ಕರದ ಹಕ್ಕಿಗೆ ಸಂಬಂಧಿಸಿದ ನಿಯಮಗಳಲ್ಲಿ ಸಡಿಲಿಕೆ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಮಂಡಿಸಲಾಯಿತು.
ಕಾರ್ಮಿಕ ಸಂಹಿತೆಗಳ ತಿದ್ದುಪಡಿ ಸೇರಿದಂತೆ ಃಒS ಮುಂದಿಟ್ಟ ವಿವಿಧ ಬೇಡಿಕೆಗಳನ್ನು ಪರಿಶೀಲಿಸಿ, ಅಗತ್ಯ ಸುಧಾರಣೆಗಳು ಹಾಗೂ ಕಾನೂನು ತಿದ್ದುಪಡಿಗಳನ್ನು ಶೀಘ್ರದಲ್ಲೇ ಪರಿಗಣಿಸುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದು ಅನಿಲ್ ಕುಮಾರ್ ಯು. ತಿಳಿಸಿದ್ದಾರೆ.
ಮುಂದಿನ ಹಂತದಲ್ಲಿ ಔಛಿಛಿuಠಿಚಿಣioಟಿಚಿಟ Sಚಿಜಿeಣಥಿ, ಊeಚಿಟಣh ಚಿಟಿಜ Woಡಿಞiಟಿg ಅoಟಿಜiಣioಟಿs ಅoಜe ಕುರಿತು ಬಿಎಂಎಸ್ ಕೇಂದ್ರ ನಾಯಕತ್ವ ಮತ್ತು ಕೇಂದ್ರ ಕಾರ್ಮಿಕ ಸಚಿವರ ನಡುವೆ ಮತ್ತೊಂದು ಉನ್ನತ ಮಟ್ಟದ ಸಭೆ ನಡೆಯಲಿದೆ.
“ಆಗಸ್ಟ್ ೧೭ರ ರಾಷ್ಟ್ರವ್ಯಾಪಿ ಹೋರಾಟವು ಕಾರ್ಮಿಕರ ಧ್ವನಿಯನ್ನು ಕೇಂದ್ರ ಸರ್ಕಾರದ ಮಟ್ಟದಲ್ಲಿ ಪರಿಣಾಮಕಾರಿಯಾಗಿ ತಲುಪಿಸಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ದೊರೆತಿರುವ ಭರವಸೆ ನಮ್ಮ ಸಂಘಟಿತ ಹೋರಾಟದ ಫಲಶ್ರುತಿ. ಕಾರ್ಮಿಕರ ಹಿತಾಸಕ್ತಿಗಾಗಿ ಃಒS ಹೋರಾಟ ನಿರಂತರವಾಗಿ ಮುಂದುವರಿಯಲಿದೆ,” ಎಂದು ಅನಿಲ್ ಕುಮಾರ್ ಯು. ತಿಳಿಸಿದ್ದಾರೆ.