ಸುಳ್ಯ:ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಲ್ಲೂರು ಕೆಮ್ರಾಜೆ ಗ್ರಾಮದ ಇರಂತಕಜೆಯಿಂದ ನಡೆದಿದೆ.
ನೆಲ್ಲೂರು ಕೆಮ್ರಾಜೆ ಗ್ರಾಮದ ಇರಂತಕತೆ ದಿ. ಚನಿಯ ಎಂಬವರ ಪುತ್ರ ನಾರಾಯಣ (೪೨) ಮೃತ ವ್ಯಕ್ತಿ. ನಾರಾಯಣ ಸೋಮವಾರ ರಾತ್ರಿ ಕಾಣೆಯಾಗಿದ್ದರು. ಅವರನ್ನು ರಾತ್ರಿ ಹುಡುಕಾಡಿದಾಗ ಪಕ್ಕದ ಮನೆಯ ಪ್ರಸಾದ ಎರ್ಮೆಟ್ಟಿ ಎಂಬವರಿಗೆ ಸೇರಿದ ಬಾವಿಯ ಬಳಿ ಚಪ್ಪಲಿ, ಮೊಬೈಲ್ ಫೋನ್ ಪತ್ತೆಯಾಗಿತ್ತು. ಹೀಗಾಗಿ ಬಾವಿಯಲ್ಲಿ ಹುಡುಕಿದಾಗ ಮೃತದೇಹ ಪತ್ತೆಯಾಗಿದೆ. ಮಾಹಿತಿ ತಿಳಿದ ಊರವರು, ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಧನಂಜಯ ಕುಮಾರ್ ರವರು ಸ್ಥಳಕ್ಕೆ ಬಂದು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ಮಹಜರು ನಡೆಸಿ ಸುಳ್ಯ ಸರಕಾರಿ ಆಸ್ಪತ್ರೆಗೆ ಪೋಸ್ಟ್ ಮಾಟಂ ನಡೆಸಲಾಯಿತು. ಮೃತರಿಗೆ ತಾಯಿ, ಪತ್ನಿ, ಪುತ್ರಿ ಇದ್ದಾರೆ.




























