
ಸುಳ್ಯ:ಬಾಳಿಲದ ಹೊನ್ನಡ್ಕದ ಬಾಗಿ ಎಂಬವರಿಗೆ ದಾನಿಗಳಿಂದ ನೂತನವಾಗಿ ನಿರ್ಮಾಣವಾದ ?ಸಾಯಿ ಪ್ರೇಮ ಶತಾಬ್ದಿ ?ಮನೆಯ ಹಸ್ತಾಂತರ ಕಾರ್ಯಕ್ರಮವು ನಡೆಯಿತು.
ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಜನ್ಮ ಶತಾಬ್ದಿಯ ಪ್ರಯುಕ್ತ ಶ್ರೀ ಸತ್ಯಸಾಯಿ ಸೇವಾ ಸಮಿತಿ ಚೊಕ್ಕಾಡಿ ಮತ್ತು ಬಾಳಿಲ ಗ್ರಾಮ ಪಂಚಾಯಿತಿ ಇವುಗಳ ಆಶ್ರಯದಲ್ಲಿ ಹಲವು ಮಂದಿ ದಾನಿಗಳ ಸಹಕಾರದೊಂದಿಗೆ ನಿರ್ಮಾಣವಾದ ಮನೆಯ ಹಸ್ತಾಂತರ ನಡೆಯಿತು. ಬೆಳಿಗ್ಗೆ ಸಾಯಿ ಬಾಬಾ ಭಕ್ತರಿಂದ ಭಜನಾ ಕಾರ್ಯಕ್ರಮ ನಡೆಯಿತು. ನಂತರ ಶ್ರೀ ದೇವರ ಪ್ರಾರ್ಥನೆಯೊಂದಿಗೆ ಮನೆಯ ಹಸ್ತಾಂತರ, ಗೃಹ ಪ್ರವೇಶ ನಡೆಯಿತು.
ಹೊನ್ನಡ್ಕದಲ್ಲಿ ಬಾಗಿ ಎಂಬವರು ಹಲವು ವರ್ಷಗಳ ಕಾಲ ಶಿಥಿಲಾವಸ್ಥೆಯಲ್ಲಿದ್ದ ಮುರಕಲು ಮನೆಯಲ್ಲಿ ವಾಸವಿದ್ದರು. ವಿಷಯ ತಿಳಿದ ಸತ್ಯ ಸಾಯಿ ಸೇವಾ ಸಮಿತಿಯ ಪದಾಧಿಕಾರಿಗಳು ಮನೆ ನಿರ್ಮಾಣ ಕಾರ್ಯಕ್ಕೆ ಮುಂದೆ ಬಂದು ನೆಲ ಸಮತಟ್ಟು ಮಾಡಿ ಮನೆ ನಿರ್ಮಿಸಲು ಪ್ರಾರಂಭ ಮಾಡಿದರು. ಬಳಿಕ ಒಂದು ತಿಂಗಳೊಳಗೆ ಮನೆ ನಿರ್ಮಾಣ ಕಾರ್ಯ ನಡೆಯಿತು.
ಶ್ರೀ ಸತ್ಯಸಾಯಿ ಸೇವಾ ಸಮಿತಿ ಚೊಕ್ಕಾಡಿ ಮತ್ತು ಬಾಳಿಲ ಗ್ರಾಮ ಪಂಚಾಯಿತಿ ಹಾಗೂ ಇತರ ಹಲವು ಮಂದಿ ದಾನಿಗಳಿಂದ ಸಂಗ್ರಹಿಸಿದ ಹಣದಲ್ಲಿ ಎರಡು ರೂಮ್‌ನ ಶೀಟ್ ಹಾಕಿದ ಮನೆ ನಿರ್ಮಾಣ ಮಾಡಿದರು. ಮನೆಯ ಹಿಂಬದಿಯಲ್ಲಿ ಬಾತ್ ರೂಮ್, ಶೌಚಾಲಯ, ಕೂಡ ನಿರ್ಮಾಣ ಮಾಡಲಾಗಿದೆ. ಪಾತ್ರೆ ತೊಳೆಯಲು ವ್ಯವಸ್ಥೆ ಮಾಡಲಾಗಿದೆ. ಮನೆಗೆ ವಿದ್ಯುತ್ ಸಂಪರ್ಕ ಕೂಡ ಕಲ್ಪಿಸಲಾಗಿದೆ.
ಭಾಗಿಯವರಿಗೆ ಮನೆಯ ಹಸ್ತಾಂತರದ ಸಂದರ್ಭದಲ್ಲಿ ಭಗವಾನ್ ಶ್ರೀ ಸತ್ಯ ಸಾಯಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಮಹಾಬಲೇಶ್ವರ ಕೆ,ಕಾರ್ಯದರ್ಶಿ ಸಾಯಿ ಸಂತೋಷ್, ಖಜಾಂಚಿ ಶಿವರಾಮ್ ಬೊಳ್ಳೂರು, ಹಾಗೂ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳ ಜಿಲ್ಲಾ ಪದಾಧಿಕಾರಿಗಳಾದ ವೀಣಾಲಕ್ಷ್ಮೀ, ಉಮೇಶ್ ಹುಲಿ, ಜಯರಾಮ್ ಭಾರದ್ವಾಜ, ಶ್ರೀ ಸತ್ಯ ಸಾಯಿ ಸೇವಾ ಸಮಿತಿಯ ಸಂಚಾಲಕರಾದ ತೇಜ ಪ್ರಕಾಶ್ ಕೆ.ಬಿ ಹಾಗೂ ಸದಸ್ಯರುಗಳಾದ ರಾಮಕೃಷ್ಣ ಕರಿಕ್ಕಳ, ಸಾಯಿ ಶೇಖರ್, ಸತೀಶ್ ಕೆ, ಸೌಮ್ಯ ರಾಮಕೃಷ್ಣ, ತ್ರಿವೇಣಿ, ಧನ್ಯಶ್ರೀ, ಹಿರಿಯ ಸದಸ್ಯರುಗಳಾದ ಕೆ. ಜಯರಾಜ ಆಚಾರ್, ಲಕ್ಷ್ಮಿ ನಾರಾಯಣ ಕೋಟೆ, ಶಿವರಾಮ ಆನೇಕಲ್ ಹಾಗೂ ಸತ್ಯಸಾಯಿ ಭಜನಾ ಮಂಡಳಿ ಪಂಜ ಇದರ ಸಂಚಾಲಕ ಸಾಯಿಗಿರಿಧರ ಹಾಗೂ ಎಲ್ಲಾ ಸಮಿತಿಯ ಹಾಗೂ ಮಂಡಳಿಯ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರಾದ ಹರ್ಷ ಜೆ.ಜೋಗಿಬೆಟ್ಟು, ರಾಧಾಕೃಷ್ಣ ರಾವ್ ಉಡುವೆಕೋಡಿ, ಗ್ರಾಮ ಲೆಕ್ಕಾಧಿಕಾರಿ ಶಿವರಾಜ್, ಜಾಹ್ನವಿ ಕಾಂಚೋಡು, ಹರಿಣಾಕ್ಷಿ, ಡಾ.ಜ್ಯೋತಿ, ಕಿರಣ ಅಗಲ್ಪಾಡಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.



























