ಬಾಬಾಸಾಹೇಬರ ಪುತ್ಥಳಿಗೆ ಪುಷ್ಪನಮನ.

(ಸಂಜೆವಾಣಿ ವಾರ್ತೆ)

ಬಳ್ಳಾರಿ, ಡಿ.06:  ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಪರಿನಿಬ್ಬಾಣ ದಿನದ ದಿನದ ಪ್ರಯುಕ್ತ ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡ್ರಿಗಿ ನಾಗರಾಜ ಅಂಬೇಡ್ಕರ್ ಭವನದ ಮುಂಭಾಗದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಕದಸಂಸ ರಾಜ್ಯ ಸಮಿತಿ ಸದಸ್ಯರಾದ ಪಿ ಜಗದೀಶ್ವರರೆಡ್ಡಿ, ಎಸ್ ವಿಘ್ನೇಶ್ ಜಿಲ್ಲಾ ಸಂಚಾಲಕ ಜಿ ಗೋವರ್ಧನ, ಜಿಲ್ಲಾ ಸಂಘಟನಾ ಸಂಚಾಲಕರಾದ ನಟರಾಜ, ಸಣ್ಣ ನಾಗರಾಜ, ಬಳ್ಳಾರಿ ನಗರ ಸಂಚಾಲಕ ಹೊನ್ನೇಶ್ ಬಿ ಗೋನಾಳ್, ಪದಾಧಿಕಾರಿಗಳಾದ ಗುರುದೇವ, ಶ್ರೀನಿವಾಸ್, ಚಂದ್ರಶೇಖರ್, ಅರುಣ್ ಕುಮಾರ್ ಮುಂಡ್ರಿಗಿ, ನಾಗರಾಜ್ ಹೆಗಡೆ ಪ್ರಹ್ಲಾದ್ ತೆಗ್ಗಿನಬೂದಿಹಾಳ್, ಮಹೇಂದ್ರ, ಧರ್ಮರಾಜ್ ಮುಂತಾದವರು ಉಪಸ್ಥಿತರಿದ್ದರು.