ಬಾಂಬ್ ನಿಷ್ಕ್ರಿಯ ದಳದಿಂದ ಜನಾರ್ಧನರೆಡ್ಡಿ ಮನೆ ಬಳಿ ಬುಲೆಟ್ ಪತ್ತೆ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಜ.05:  ಬ್ಯಾನರ್ ಗಲಾಟೆಯ ಪ್ರಕರಣದಲ್ಲಿ ಜ.1 ರಂದು ರಾತ್ರಿ ನಡೆದ ಫೈರಿಂಗ್ ಘಟನೆಗೆ ಸಂಬಂಧಿಸಿ ಗಂಗಾವತಿ ಶಾಸಕ, ಮಾಜಿ ಸಚಿವ ಜನಾರ್ಧನರೆಡ್ಡಿ ಅವರ ಸಿರುಗುಪ್ಪ ರಸ್ತೆಯ ನಿವಾಸದ ಬಳಿ ಇಂದು ಹುಬ್ಬಳ್ಳಿಯಿಂದ ಬಂದಿರುವ ಬಾಂಬ್ ನಿಷ್ಕ್ರಿಯ ತಂಡದಿಂದ ಬುಲೆಟ್ ಗಳ ಹುಡುಕಾಟ ನಡೆಸಿ ಎರೆಡು ಬುಲೆಟ್ ಗಳನ್ನು ಪತ್ತೆಹಚ್ಚಲಾಗಿದೆ.

ಒಂದು ಶಾಸಕ ಭರತ್ ರೆಡ್ಡಿ ನಿಂತ ಸ್ಥಳದಲ್ಲಿ 9 ಎಂ.ಎಂ.ನ ಒಂದು ಬುಲೆಟ್ ಪತ್ತೆಯಾಗಿದ್ದು. ಮತ್ತೊಂದುಕಡೆ  ಜನಾರ್ಧನರೆಡ್ಡಿ ಅವರ ಗ್ಕಾಸ್ ಹೌಸ್ ಬಳಿ ಬುಲೆಟ್ ಕವಚ ಪತ್ತೆಯಾಗಿದೆ.

ಘಟನೆಯ ನಂತರ ಮರು ದಿನ ಬೆಳಿಗ್ಗೆಯೇ ಪೊಲೀಸರು ಐದಾರು ಬುಲೆಟ್  ಪತ್ತೆ ಹಚ್ಚಿ ತೆಗೆದುಕೊಂಡು ಹೋಗಿದ್ದರು ಎನ್ನಲಾಗುತ್ತಿದೆ. ಈ ಬಗ್ಗೆ ಪೊಲೀಸರು ಇನ್ನೂ ಖಚಿತಪಡಿಸಿಲ್ಲ.

ಅಂದಿನ ಘಟನೆಯಲ್ಲಿ ಏಳು ಸುತ್ತು ಫೈರಿಂಗ್ ನಡೆದಿದ್ದು ಗನ್ ಗಳಿಂದ ಹೊರ ಬಂದ ಬುಲೆಟ್ ಗಳು ಎಲ್ಲಿವೆ ಎಂಬುದನ್ನು  ಫೈರಿಂಗ್ ಸ್ಥಳದಲ್ಲಿ ಸ್ಥಳೀಯ ತಂಡದಿಂದ ಮಾಹಿತಿ ಪಡೆದು ಎನ್ಐಜೆಡಿ ಮತ್ತು ಡಿಎಸ್ ಎಂಡಿ ಯಂತ್ರಗಳಮೂಲಕ ಬುಲೆಟ್ ಗಳ  ತುಣುಗಳನ್ನು ಹುಡುಕಾಟ ಮಾಡಿತು.

ಬಾಂಬ್ ನಿಷ್ಕ್ರಿಯ ದಳ, ಪ್ಯಾಲಿಸ್ಟಿಕ್ ಟೀಂ ಮತ್ತು ಸುಕೋ (ಫಾರೆನ್ಸಿಕ್ ಲ್ಯಾಬ್) ಟೀಂ ನಿಂದ ಸೀನ್ ರಿಕ್ರಿಯೇಟ್ ಮಾಡಿ ಪರಿಶೀಲನೆ ನಡೆಯಿತು.

ಡಿಐಜಿಪಿ ವರ್ತಿಕಾ ಕಟಿಯಾರ್ ಅವರಿಂದ ತಂಡ ಮಾಹಿತಿ ಪಡೆಯಿತು. ಜನಾರ್ದನ ರೆಡ್ಡಿ ಮನೆಯ ದಾರಿ ಬಂದ್ ಮಾಡಿ ಯಾರನ್ನು ಒಳಗೆ ಬಿಡದೇ ಪರಿಶೀಲನೆ ಮಾಡಿತು.