
ಸಂಜೆವಾಣಿ ವಾರ್ತೆ
ಯಳಂದೂರು.ಜೂ.11:- ತಾಲ್ಲೂಕಿನ ಅಂಬಳೆ ಗ್ರಾಮ 2 ಕ್ಕೆ ಇದೇ ಮೊದಲ ಬಾರಿಗೆ ಸಾರಿಗೆ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಈ ಗ್ರಾಮಕ್ಕೆ ಬಸ್ ವ್ಯವಸ್ಥೆ ಇರಲಿಲ್ಲ ಇಲ್ಲಿನ ಸಾರ್ವಜನಿಕರು, ವಿದ್ಯಾರ್ಥಿಗಳು ಮೂರು ಕಿಲೋಮೀಟರ್ ವರಗೆ ಅಂದರೆ ಕಂದಹಳ್ಳಿ ಪಾಲದವರಗೂ ನಡೆದುಕೊಂಡು ಹೋಗಿ ರಾಷ್ಟ್ರೀಯ ಹೆದ್ದಾರಿ ತಲುಪುತ್ತಿದ್ದರು ಅಲ್ಲಿಂದ ವಿವಿಧ ಪಟ್ಟಣಗಳಿಗೆ ತೆರಳುತ್ತಿದ್ದರು.ಈ ಸಮಸ್ಯೆಯನ್ನು ಗ್ರಾಮಸ್ಥರು ಜನಸಂಪರ್ಕ ಸಭೆಯಲ್ಲಿ ದೂರಿದರು.
ಇದನ್ನು ಅಂಬಳೆ ಗ್ರಾಮಪಂಚಾಯತಿ ನೂತನ ಅಧ್ಯಕ್ಷ ಯುವ ಮುಖಂಡ ಎನ್ ನವೀನ್ ರವರು ಶಾಸಕ ಎ ಆರ್ ಕೃಷ್ಣಮೂರ್ತಿ ರವರ ಸಹಾಯದಿಂದ ಬಹುದಿನಗಳ ಬೇಡಿಕೆ ಈಡೇರಿಸಿದರು.
ಅಧ್ಯಕ್ಷ ನವೀನ್ ಮಾತನಾಡಿ ನಮ್ಮ ಗ್ರಾಮಕ್ಕೆ ಬಸ್ ವ್ಯವಸ್ಥೆ ಇರಲಿಲ್ಲ ಗ್ರಾಮಸ್ಥರು ನೀಡಿದ ದೂರನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಡ ಮಾಡಲಾಗಿತ್ತು.
ಅಧ್ಯಕ್ಷನಾದ ಬಳಿಕ ಸಾರಿಗೆ ಬಸ್ ವ್ಯವಸ್ಥೆಯನ್ನು ಕಲ್ಪಿಸಿದ್ದು ನಮ್ಮ ಶಾಸಕರಾದ ಎ ಆರ್ ಕೃಷ್ಣಮೂರ್ತಿ ಬಳಿ ಕೇಳಿಕೊಂಡಾಗ ತಕ್ಷಣ ವ್ಯವಸ್ಥೆ ಕಲ್ಪಿಸಿಕೊಟ್ಟರು ಇವರಿಗೆ ಗ್ರಾಮಸ್ಥರ ಪರವಾಗಿ ಅಭಿನಂದನೆಗಳು ನಮಗೆ ಇವರೆ ಸ್ಪೂರ್ತಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ನಂಜುಂಡಸ್ವಾಮಿ, ಯಜಮಾನರಾದ ಕುಮಾರ್ ಭಾಗ್ಯರಾಜ್,ಮುಖಂಡ ಹೊನ್ನಯ್ಯ ರಾಜಣ್ಣ, ಗೋವಿಂದ, ಹಾಗೂ ಗ್ರಾಮಸ್ಥರು ಹಾಜರಿದ್ದರು.