Home ಜಿಲ್ಲೆ ಮೈಸೂರು ಬಸ್ಗಳ ನಡುವೆ ಮುಖಾಮುಖಿ ಡಿಕ್ಕಿ ಗಾಯಗೊಂಡ ಮಾದಪ್ಪನ ಭಕ್ತರು

ಬಸ್ಗಳ ನಡುವೆ ಮುಖಾಮುಖಿ ಡಿಕ್ಕಿ ಗಾಯಗೊಂಡ ಮಾದಪ್ಪನ ಭಕ್ತರು

ಸಂಜೆವಾಣಿ ವಾರ್ತೆ
ಹನೂರು ಫೆ 14 :-
ಮಲೆ ಮಾಹದೇಶ್ವರ ಬೆಟ್ಟದ ಶನೇಶ್ವರ ಸ್ವಾಮಿ ದೇವಸ್ಥಾನ ಹತ್ತಿರದ ಹಾಲು ಹಳ್ಳದ ಸಮೀಪದ ತಿರುವಿನಲ್ಲಿ ಖಾಸಗಿ ಬಸ್ ಹಾಗೂ ಸಾರಿಗೆ ಬಸ್ ನಡುವೆ ಮುಖ.ಮುಖಿ ಡಿಕ್ಕಿಯಾಗಿ ಪ್ರಯಾಣಿಕರಿಗೆ ಗಾಯಗಳಾಗಿರುವ ಘಟನೆ ಇಂದು 11-00 ಸಮಯದಲ್ಲಿ ಸಂಭವಿಸಿದೆ.


ಮಲೆ ಮಾದೇಶ್ವರ ಬೆಟ್ಟಕ್ಕೆ ತಾಳುಬೆಟ್ಟದಿಂದ ಹೋಗುವಾಗ ಶನೇಶ್ವರ ಸ್ವಾಮಿ ದೇವಸ್ಥಾನದ ಹಾಲು ಹಳ್ಳದ ಹತ್ತಿರ ತೀವ್ರ ತಿರುವಿನಲ್ಲಿ ಎರಡು ಬಸ್ಗಳ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ಸಂಭವಿಸಿ ಇದರಲ್ಲಿ ಪ್ರಯಾಣಿಸುತ್ತಿದ್ದ ಮಲೆ ಮಾದೇಶ್ವರ ಸ್ವಾಮಿಯ ಭಕ್ತರಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಎರಡು ಬಸ್ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ರಾಮನಗರ ಮೂಲದ ಅಭಿಷೇಕ್ (20 ವರ್ಷ), ಸ್ವಾಮಿ (27), ಚಂದ್ರಶೇಖರ್ (34) , ದತ್ತರಾಜು (37), ಹಾಗೂ ಸಾರಿಗೆ ಬಸ್ ಡ್ರೈವರ್ ಹನುಮಂತಪ್ಪ (50) ನಿರ್ವಾಹಕ ವೆಂಕಟೇಶ್ ಗಾಯಗೊಂಡಿದ್ದಾರೆ ಇವರನ್ನು ಕೊಳ್ಳೇಗಾಲ ಪಟ್ಟಣದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ನೀಡಲಾಗಿದೆ.
ಗಾಯಾಳುಗಳು ಬರುತ್ತಿದ್ದಂತೆ ವೈದ್ಯರುಗಳಾದ ಡಾ. ದಿಲೀಪ್ ಡಾ. ಸುನಿತಾ ಡಾ.ರಮೇಶ್ ಡಾ. ಮಧುಮಿತ ನರ್ಸಿಂಗ್ ಅಧಿಕಾರಿಗಳಾದ ರಾಬರ್ಟ್ ಅಭಿಲಾಶ್ ಪುಟ್ಟಲಕ್ಷ್ಮಿ ಚಂದ್ರಮ್ಮ ಸಿಬ್ಬಂದಿಗಳಾದ ವಿಷ್ಣು ಪುಟ್ಟರಾಜು ಇವರುಗಳು ಚಿಕಿತ್ಸೆ ನೀಡಿ ದಾಖಲು ಮಾಡಿಕೊಂಡಿದ್ದಾರೆ.


ರಾಮನಗರ ಪಟ್ಟಣದ ನಿವಾಸಿಗಳಾದ ಮಾದಪ್ಪನ ಭಕ್ತರು ಕಾಲುನಡಿಗೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ದರ್ಶನ ಪಡೆದು ವಾಪಸ್ ಬರುವಾಗ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಕೊಳ್ಳೇಗಾಲದಿಂದ ಮಲೆ ಮಾದೇಶ್ವರನ ಬೆಟ್ಟಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ತೆರಳುತ್ತಿದ್ದಾಗ ಎರಡು ಬಸ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.
ಘಟನೆ ನಡೆದ ಸಂದರ್ಭದಲ್ಲಿ ಪೆÇೀಲಿಸ್ ಇಲಾಖೆ ಸಿಬ್ಬಂದಿಗಳು ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಗಾಯಾಳುಗಳನ್ನು ರಕ್ಷಿಸಿ ಆಂಬುಲೆನ್ಸ್ ಹಾಗೂ ಖಾಸಗಿ ವಾಹನಗಳ ಮೂಲಕ ಆಸ್ಪತ್ರೆಗಳಿಗೆ ಕಳಿಸಿಕೊಡಲಾಗಿದೆ.


ಗಾಯಗೊಂಡ ಪ್ರಯಾಣಿಕರನ್ನು ಮಲೆ ಮಹದೇಶ್ವರನ ಬೆಟ್ಟ ಆಸ್ಪತ್ರೆ ಹನೂರು ಆಸ್ಪತ್ರೆಗಳಲ್ಲಿ ಹಾಗೂ ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೆಲವರು ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ಮತ್ತೆ ಕೆಲವರು ಮೈಸೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ತೆರಳಿದ್ದಾರೆ.