
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.15: ನಗರದಲ್ಲಿ ನಡೆದ ಬ್ಯಾನರ್ ಗಲಾಟೆ ಪ್ರಕರಣದ ಬಳಿಕ ಕಾನೂನು ಮತ್ತು ಸುವ್ಯವಸ್ಥೆ ಸಂಬಂಧಿತ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು, ಪೊಲೀಸ್ ಇಲಾಖೆ ಭದ್ರತಾ ಕ್ರಮಗಳನ್ನು ಮತ್ತಷ್ಟು ಕಠಿಣಗೊಳಿಸಿದೆ.
ಬಳ್ಳಾರಿ ವಲಯದ ಐಜಿಪಿ ಡಾ. ಹರ್ಷಾ ಅವರು ಸ್ವತಃ ನಿನ್ನೆ ರಾತ್ರಿ ಗಸ್ತು ನಡೆಸುವ ಮೂಲಕ ಭದ್ರತಾ ವ್ಯವಸ್ಥೆಗಳ ಪರಿಶೀಲನೆ ನಡೆಸಿದರು.
ರಾಜ್ಯದ ಹೊರಗಿನಿಂದ ಆಗಮಿಸುವ ಸಂಶಯಾಸ್ಪದ ಚಲನವಲನಗಳನ್ನು ನಿಯಂತ್ರಿಸುವ ಉದ್ದೇಶದಿಂದ ಅಂತರರಾಜ್ಯ ಮತ್ತು ಜಿಲ್ಲೆಯ ಗಡಿಗಳಲ್ಲಿನ ವಿಶೇಷ ಚಕ್ ಪೋಸ್ಟ್ ಗಳ ಪರಿಶೀಲನೆ ನಡೆಸಿದರು.
ಇದಲ್ಲದೇ, ಜಿಲ್ಲೆಯಲ್ಲಿನ ಎಲ್ಲಾ ವಸತಿಗೃಹಗಳು, ಲಾಡ್ಜ್‌ಗಳು ಹಾಗೂ ವಾಸ್ತವ್ಯದ ಸ್ಥಳಗಳಲ್ಲಿ ಸಂಪೂರ್ಣ ತಪಾಸಣೆ ನಡೆಸಿದ್ದಾರೆ. ಯಾವುದೇ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಈ ವೇಳೆ ಐಜಿಪಿ ಹರ್ಷ ಅವರು ತಿಳಿಸಿದ್ದಾರೆ.
























