Home ಜಿಲ್ಲೆ ಬಳ್ಳಾರಿ ಪ್ಯುಪಿಲ್ ಟ್ರೀ ಕಾಲೇಜಿನ ಮಾನ್ಯತೆ ರದ್ದಿಗೆ ರಾಜ್ಯಪಾಲರಿಗೆ ಎಬಿವಿಪಿ ಮನವಿ

ಬಳ್ಳಾರಿ ಪ್ಯುಪಿಲ್ ಟ್ರೀ ಕಾಲೇಜಿನ ಮಾನ್ಯತೆ ರದ್ದಿಗೆ ರಾಜ್ಯಪಾಲರಿಗೆ ಎಬಿವಿಪಿ ಮನವಿ

(ಸಂಜೆವಾಣಿ ವಾರ್ತೆ)

ಬಳ್ಳಾರಿ: ಮಾ,20ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿ ಸ್ನೇಹಿ ಕ್ಯಾಂಪಸ್ ನಿರ್ಮಾಣ ಮಾಡುವ ಮಹತ್ತರ ಆಶಯವನ್ನು  ಹೊಂದಿ ಆ ದಿಶೆಯಲ್ಲಿ ಸ್ವಚ್ಚ ಹಾಗೂ ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ನಶಾಮುಕ್ತ ಕ್ಯಾಂಪಸ್ ಎನ್ನುವ ಜಾಗೃತಿ ಅಭಿಯಾನವನ್ನು ಕಳೆದ ಅನೇಕ ವರ್ಷಗಳಿಂದ  ಮಾಡುತ್ತಾ ಬಂದಿದೆ.

ಆದರೆ ಹಲವು ದಿನಗಳ ಹಿಂದೆ ಬಳ್ಳಾರಿಯ ಪ್ಯುಪಿಲ್  ಟ್ರೀ  ಪಿ.ಯು ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿನಿಯರು ಮಾದಕ ದ್ರವ್ಯ ಸೇವನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

 ವಿದ್ಯಾರ್ಥಿ ಪರಿಷತ್ ಎರಡು -ಮೂರು ಬಾರಿ  ಕಾಲೇಜಿನ ಆಡಳಿತ ಮಂಡಳಿ ಗಮನಕ್ಕೆ ತಂದರು ಎಚ್ಚೆತ್ತುಕೊಳ್ಳದ ಕಾರಣ ಆಡಳಿತ ಮಂಡಳಿ ವಿರುದ್ದ ಪ್ರತಿಭಟನೆ ಮಾಡಿದ್ದೇವೆ.ಆ ಸಂದರ್ಭದಲ್ಲಿ ಎಬಿವಿಪಿ ಕಾರ್ಯಕರ್ತರನ್ನು ನಿಂದಿಸಿ ಹಲ್ಲೆಯನ್ನು ಮಾಡಿದ್ದಾರೆ.ಹಾಗಾದರೆ ಆ ವಿದ್ಯಾರ್ಥಿಗಳಿಗೆ ಹೇರಳವಾಗಿ ಹೇಗೆ ಮಾದಕ ವಸ್ತುಗಳ ಪೂರೈಕೆಯಾಗುತ್ತಿದೆ ? ಈ ಹಿಂದೆಯೂ ಆ ಕಾಲೇಜಿನಲ್ಲಿ ಗಾಂಜಾ ಹಾಗೂ ಮಾದಕ ವಸ್ತುಗಳ ಪೂರೈಕೆಯಾಗಿರುವ ಬಗ್ಗೆ ಮಾಹಿತಿ ಇತ್ತು. ವಿದ್ಯಾರ್ಥಿನಿಯರು ಮಧ್ಯೆ ಸೇವನೆ ಮಾಡಿ ಬಾಟಲ್ ಶೌಚಾಲಯದಲ್ಲಿ ಎಸೆದಿರುವ ಪ್ರಕರಣ,ಅದೆ ಕಾಲೇಜಿನ ವಿದ್ಯಾರ್ಥಿಗಳು ಸಹಪಾಠಿ ವಿದ್ಯಾರ್ಥಿನಿಗೆ ಪಾನಿಯದಲ್ಲಿ ಮಾದಕ ವಸ್ತು ಮಿಶ್ರಣ ಮಾಡಿ ಸೇವಿಸಲು ಒತ್ತಾಯಿಸಿ ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದಾರೆ.

ಈ ರೀತಿ ಅನೇಕ ವಿದ್ಯಾರ್ಥಿ ವಿರೋಧಿ ಚಟುವಟಿಕೆಗಳು ಆ ಕಾಲೇಜಿನಲ್ಲಿ ನಡೆಯುತ್ತಿದ್ದರು ಆಡಳಿತ ಮಂಡಳಿ ಎಚ್ಚೆತ್ತುಕೊಳ್ಳತ್ತಿಲ್ಲ.ಹೀಗಾಗಿ ಆ ಕಾಲೇಜಿನ ಮಾನ್ಯತೆಯನ್ನು ರದ್ದು ಮಾಡಿ ಒಂದು ಮಾದರಿ ನಿರ್ಣಯವನ್ನು ತೆಗೆದುಕೊಳ್ಳಬೇಕೆಂದು.  ಕಾಲೇಜುಗಳಲ್ಲಿ ಮಾದಕ ವಸ್ತುಗಳ ಬಳಕೆಗೆ ಕಡಿವಾಣ ಹಾಕಲು ಹಾಗೂ ಜಾಗೃತಿ ಮೂಡಿಸಲು ವೈದ್ಯರನ್ನೊಳಗೊಂಡ ಸಮಿತಿ ರಚಿಸಿ ನಶಾಮುಕ್ತ ಕ್ಯಾಂಪಸ್ ಮಾಡಲು ಮುನ್ನುಡಿಯನ್ನು ಬರೆಯಬೇಕೆಂದು ರಾಜ್ಯ ಪಾಲ ಥಾವರಚಂದ್ ಗೆಹ್ಲೋಟ ಅವರಿಗೆ  ಮನವಿ ಮಾಡಿದೆ.

ಈ ವೇಳೆ ಎಬಿವಿಪಿ ರಾಜ್ಯಕಾರ್ಯದರ್ಶಿ  ದರ್ಶನ್ ಹೆಗಡೆ,ಬಳ್ಳಾರಿ ವಿಭಾಗ ಸಂಘಟನಾ ಕಾರ್ಯದರ್ಶಿ  ನಾಗರಾಜ ಬಟಗೇರಾ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ಭರತ್.ಟಿ , ಜಿಲ್ಲಾ ಸಂಚಾಲಕರಾದ ಕೆ.ದಿಲಿಪ್ ಕುಮಾರ,ಶರಣಬಸ ಉಪಸ್ಥಿತರಿದ್ದರು.