Home ಜಿಲ್ಲೆ ಬಳ್ಳಾರಿ  ಪಾಲಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

ಬಳ್ಳಾರಿ  ಪಾಲಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

* 12 ಲಕ್ಷ ರೂಗಳ ಲಂಚದ ಆರೋಪ

* ನಕಲಿ ದಾಖಲೆಗಳಿಂದ ಫಾರಂ 2

* ಬಿಲ್ ಕಲೆಕ್ಟರ್ ಗೋಲ್ ಮಾಲ್, ಅಮಾನತ್ತಿಗೆ ಶಿಫಾರಸ್ಸು, ಇಲಾಖಾ ವಿಚಾರಣೆ

* ಕಂಪ್ಯೂಟರ್ ಆಪರೇಟರ್ ವಜಾ

*   ಕಂದಾಯ ವಿಭಾಗದ ಹಲವರು ಭಾಗಿ

*  ಫಾರಂ 2 ಮಾಡಿದ್ದು ಈಗ ರದ್ದು

* ಈದ್ಗಾಗೆ ಸೇರಿದಲ್ಲ

ಎನ್.ವೀರಭದ್ರಗೌಡ

ಬಳ್ಳಾರಿ, ಫೆ.17: ಮತ್ತೊಮ್ಮೆ ಇಲ್ಲಿನ ಮಹಾನಗರ ಪಾಲಿಕೆಯಲ್ಲಿನ ಕಂದಾಯ ವಿಭಾಗದಿಂದ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆ ಬಂದಿದೆ. ಇದರ ಸೂತ್ರ ದಾರ ಬಿಲ್ ಕಲೆಕ್ಟರ್, ಜೊತೆಗೆ ಹಲವರು ಭಾಗಿಯಾಗಿರುವ ಶಂಕೆ.  ಬ್ರಷ್ಟಾಚಾರ ಬಯಲಾಗುತ್ತಿದ್ದಂತೆ ಸಿಬ್ಬಂದಿ ವಜಾ ಮತ್ತು ಅಮಾನತ್ತಿಗೆ ಶಿಫಾರಸ್ಸು, ಕೇಸು ದಾಖಲಿಸಲು ಸಿದ್ದತೆ, ಇಲಾಖಾ ವಿಚಾರಣೆಯೂ ಮಾಡಲಿದೆಯಂತೆ.

ನಗರದ ಟಿ ಎಸ್ ನಂ.650 ಗೆ ಸೇರಿದ 46902.67 ಚ.ಮೀಟರ್ ನ ಆಸ್ತಿಗೆ ಪಾಲಿಕೆಯ ಅಧಿಕಾರಿಗಳು ಫಾರಂ 2 ನೀಡಿದ್ದಾರೆ. ಫಾರಂ 2 ನೀಡುವಾಗ ಆ ಆಸ್ತಿಗೆ ಬುಡಾ ಅಪ್ರೂಲ್ ಇರಬೇಕು. ಆದರೆ ಕೊಳಗಲ್ಲಿನ ಪದ್ಮಾವತಿ ಅವರಿಗೆ ಸೇರಿದ ದಾಖಲೆ ತೋರಿಸಿ. ಅಧಿಕಾರಿಗಳನ್ನು ಯಾಮಾರಿಸಿ ಮಾಡಲಾಗಿದೆಯಂತೆ. ಹೀಗೆ ಮಾಡಲು  ಪಾಲಿಕೆಯ ಬಿಲ್ ಕಲೆಕ್ಟರ್ ನರೇಶ್ ಪ್ರಭಾವತಿ ಅವರ ಕಡೆಯಿಂದ 12 ಲಕ್ಷ ರೂ ನಗದು ಹಣವನ್ನು ಲಂಚದ ರೂಪದಲ್ಲಿ ಪಡೆದಿರುವುದಾಗಿ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಸಂಜೆವಾಣಿ ಪಾಲಿಕೆಯ ಕಂದಾಯ ಇಲಾಖೆಯ ಆಯುಕ್ತ ನಂದೀಶ್ ಅವರನ್ನು ಪ್ರಶ್ನಿಸಿದರೆ. ನನ್ನನ್ನು ಯಾಮಾರಿಸಿ  ಕಳೆದ  ಡಿ.24 ರಂದು ನನ್ನ ಅಪ್ರೂಲ್ ಪಡೆಯಲಾಗಿದೆ.   ಇದರಲ್ಲಿ ಮುಖ್ಯ ಆರೋಪಿ ಬಿಲ್ ಕಲೆಕ್ಟರ್ ನರೇಶ್ ಇದ್ದು ಆತನನ್ನು ಇಲಾಖೆ ವಿಚಾರಣೆ ಬಾಕಿ ಇರಿಸಿ ಅಮಾನತ್ತಿಗೆ ಶಿಫಾರಸ್ಸು ಮಾಡಿದೆ.  ಅಲ್ಲದೆ ನಮ್ಮ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ  ಕಂಪ್ಯೂಟರ್ ಆಪರೇಟರ್  ಆಗಿದ್ದ ಸ್ನೇಹಳನ್ನು ಕೆಲಸದಿಂದ ವಜಾ ಮಾಡಿದೆ. ಅಲ್ಲದೆ ಫಾರಂ 2 ಮಾಡಿದ್ದು ತಪ್ಪು ಎಂದು ತಿಳಿದ ತಕ್ಷಣ ಕಳೆದ ಒಂದು ವಾರದ ಹಿಂದೆಯೇ ಪಾಲಿಕೆ ಆಯುಕ್ತರ ಗಮನಕ್ಕೆ ತಂದು ರದ್ದು ಮಾಡಿದೆ ಎಂದು ತಿಳಿಸಿದ್ದಾರೆ.

ನೋಟೀಸ್ ಜಾರಿ:

ಪ್ರಕರಣಕ್ಕೆ ಸಂಬಂಧಿಸಿ ಪ್ರಭಾವತಿ ಅವರಿಗೆ ವಿವರಣೆ ಕೋರಿ ನೋಟೀಸ್ ಜಾರಿ ಮಾಡಿದೆ. ಅವರು ಇದಕ್ಕೆ ಲಂಚ ನೀಡಿದ್ದರೆ ಅವರದೂ ತಪ್ಪಾಗುತ್ತದೆ. ಅವರಿಂದ ವಿವರಣೆ ಪಡೆದು ಕ್ರಿಮಿನಲ್ ಪ್ರಕರಣ ದಾಖಲಿಸಲಿಂದು ನಂದೀಶ್  ಹೇಳಿದ್ದಾರೆ.

ಈ ಪ್ರಕರಣದಲ್ಲಿ ಫಾರಂ 2 ಆಗುವವರೆಗೆ ಪಾಲಿಕೆ ಆಯುಕ್ತರಿಗೆ, ಮೇಯರ್ ಅವರಿಗಾಗಲೀ ಗಮನಕ್ಕೆ ಬರುವುದಿಲ್ಲವಂತೆ.

ಇವರು ಸಹ ಪಾಲುದಾರರೇ..?

ಸಾಮಾನ್ಯವಾಗಿ ಫಾರಂ 2 ಮಾಡುವಾಗ ಬಿಲ್ ಕಲೆಕ್ಟರ್ ಅರ್ಜಿ ಪಡೆದು ಸ್ಥಳ ಪರಿಶೀಲನೆ  ಮಾಡಬೇಕು. ಪಂಚನಾಮೆ ಮಾಡಬೇಕು. ಜೋನ್ ಎರೆಡರಲ್ಲಿನ ಈ ಆಸ್ತಿಯನ್ನು ಜೋನ್ ಮೂರಲ್ಲಿ ಫಾರಂ 2 ರ್ನಿಡಿದಾಗಲೇ ಹಲವು ಅನುಮಾನಕ್ಕೆ ಕಾರಣವಾಗಿದೆ.

ಬಿಲ್ ಕಲೆಕ್ಟರ್ ನಂತರ, ಸಹಾಯಕ ಕಂದಾಯ ಅಧಿಕಾರಿ, ಕಂದಾಯ ಅಧಿಕಾರಿ ಗಳಾದ ವೆಂಕಟೇಶ್, ಲಕ್ಷ್ಮೀನಾರಾಯಣ  ಅವರೂ ಸಹ ಪರಿಶೀಲನೆ ಮಾಡಿ ಲಾಗಿನ್ ಕೊಟ್ಟಿದ್ದಾರೆ ಎಂದರೆ ಇವರೂ ಸಹ ಇದರಲ್ಲಿ ಪಾಲುದಾರರೆನ್ನಬೇಕಾಗುತ್ತದೆ.

ಆದರೆ ಇವರು ಲಾಗಿನ್ ಪಡೆದು ಜಿಯೋ ಮೊಬೈಲ್ ಮೂಲಕ ಅಪ್ರೂಲ್ ಮಾಡಲಾಗಿದೆಯಂತೆ. ಲಾಗಿನ್ ಪಿನ್ ಇವರೇಕೆ ಬೇರೆಯವರಿಗೆ ನೀಡಿದರು. ಅದಕ್ಕೇನಾದರೂ ಪ್ರಸಾದ ಪಡೆದಿರಬೇಕು ಎಂಬ ಶಂಕೆ ಮೂಡುತ್ತಿದೆ.

ಈ ಹಿಂದೆ  ಆಸ್ತಿ ತೆರಿಗೆಯಲ್ಲಿ ವಂಚನೆ ಮಾಡಿದಂತೆ ಇದರಲ್ಲೂ ವಂಚನೆ ಮಾಡಿರುವವರಿಗೆ ತನಿಖೆ ಮೂಲಕ ಕಠಿಣ ಕ್ರಮ ತೆಗೆದುಕೊಂಡು .ನಮ್ಮ ನಗರದ ಶಾಸಕರ ಅಭೀಪ್ಸೆಯಂತೆ “ಭ್ರಷ್ಟಾಚಾರ ಮುಕ್ತ ಬಳ್ಳಾರಿ” ಮಾಡಬೇಕಿದೆ.

ಬಾಕ್ಸ್

ಇದು ಈದ್ಗಾ ಜಮೀನಾ?

ನಿನ್ನೆ ದಿನ ಪಾಲಿಕೆಯ ಬಿಜೆಪಿ ಸದಸ್ಯರು  ಹೊರ ಹಾಕಿದ್ದ ಪ್ರಕರಣ ಈದ್ಗಾಗೆ ಸೇರಿದ ಜಮೀನನ್ನು ಪರಬಾರೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಆದರೆ ಆ ಜಮೀನಿನ ದಾಖಲೆಗಳು ಲಭ್ಯ ಇರುವಂತೆ ಅದು ಖಾಸಗಿ ಪಟ್ಟಾ ಜಮೀನು. 1939  ರಲ್ಲಿ ಶಾಂತಮ್ಮ ಎಂಬುವವರಿಂದ ಕೆ.ರಂಗಮ್ಮ ಖರೀದಿ ಮಾಡಿದ್ದು. ಅದು ನಂತರ ದಿನಗಳಲ್ಲಿ ಪಾಲಾಗಿ ಪಾರ್ವತಿ ಖಾಂಡ್ರಾ ಸೋಮಣ್ಣ ಅವರಿಗೆ  ಭಾಗಕ್ಕೆ ಬಂದಿತ್ತು. ಅವರು ಮಗಳು ಎ. ಪ್ರಭಾವತಿ ಅವರಿಗೆ ದಾನಪತ್ರದ ಮೂಲಕ ನೀಡಿದ್ದಾರೆ.

ಇವರು ಹಾಲಿ ಆಂದ್ರಪ್ರದೇಶದಲ್ಲಿ ವಾಸವಿದ್ದು. ಈದ್ಗಾ ಪಕ್ಕದಲ್ಲಿರುವ ಇವರ ಜಮೀನಿನಲ್ಲಿ ಇದ್ಗಾ ಜಮೀನೆಂದು ಕೆಲವರು ಸತ್ತವರನ್ನು ಹೂಳಿದ್ದಾರೆ. ಇದು ಗೊತ್ತಾಗಿ ಆಕ್ಷೇಪ ಎತ್ತಿದ್ದಾರಂತೆ.

ಈ ಜಮೀನು ಮಾರಾಟ ಮಾಡಲು ಹಲವು ವರ್ಷಗಳಿಂದ ಪ್ರಯತ್ನಿಸಿದರೂ. ಜಮೀಮಿನಲ್ಲಿ ಗೋರಿಗಳು ಇರುವುದರಿಂದ ಯಾರೂ ಖರೀದಿಗೆ ಬರದ ಕರಾಣ ಪಾರಂ 2 ಮಾಡಿಸುವ ಪ್ರಯತ್ನ ಮಾಡಿದ್ದಾರಂತೆ

ಮಧ್ಯವರ್ತಿಗಳು 12 ಲಕ್ಷ ರೂ ತೆಗೆದುಕೊಂಡು ನಕಲಿ ದಾಖಲೆಗಳ ಮೂಲಕ ಫಾರಂ 2 ಮಾಡಿಸಿದ್ದರಂತೆ.

ಈ ಮಧ್ಯೆ ಇದು ನಮ್ಮದೆಂದು ವಕ್ಫ ಬೋರ್ಡ್ ನ್ಯಾಯಾಲಯದ ಮೊರೆ ಹೋಗಿದೆ ಎಂದು ಹೇಳಲಾಗುತ್ತಿದೆ. ತನಿಖೆಯಿಂದ ಎಲ್ಲವವುದು ಹೊರ ಬರಬೇಕಿದೆ.