
ಸಂಜೆವಾಣಿ ವಾರ್ತೆ
ಬಳ್ಳಾರಿ, ಜ.17: ಬಳ್ಳಾರಿ ಜಿಲ್ಲೆಯಲ್ಲಿ ಗುಂಡಾಗಿರಿ ಮಿತಿಮೀರಿದೆ. ಶಾಸಕರ ಬಾಯಲ್ಲಿ ರೌಡಿಗಳ ಮಾತು ಕೇಳಿಬರುತ್ತಿವೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲುವಾದಿ ನಾರಾಯಣಸ್ವಾಮಿ.ತಿಳಿಸಿದರು.
ಅವರು ನಗರದಲ್ಲಿ ಆಯೋಜಿಸಿದ್ದ ಬಿಜೆಪಿ ಬೃಹತ್ ಪ್ರತಿಭಟನಾ ಸಮಾವೇಶ ಹಿನ್ನೆಲೆ ಜನಾರ್ಧನರೆಡ್ಡಿ ಮನೆಗೆ ಆಗಮಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಿಪಬ್ಲಿಕ್ ಆಪ್ ಬಳ್ಳಾರಿ, ಗುಂಡಾಗಿರಿ, ಗುಂಡಾವರ್ತಿ ಆಗಿದೆ. ಈ ಎಲ್ಲಾ ವಿಚಾರಗಳನ್ನ ವಿರೋಧಿಸಿ ಹೋರಾಟ ಸಮಾವೇಶ ಮಾಡ್ತಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಅಟ್ಟಹಾಸ ಮೆರೆಯುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಗುಂಡಾಗಳಾಗಿದ್ದಾರೆ. ಇವರ ಗುಂಡಾಗಿರಿಗೆ ಉತ್ತರ ಕೊಡಬೇಕಾಗಿದೆ. ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾಂಗ್ರೆಸ್ ನವ್ರಿಗೆ ಒಂದು ನ್ಯಾಯ, ಬೇರೆಯವರಿಗೆ ಮತ್ತೊಂದು ನ್ಯಾಯ ಅನ್ನುವಂತಾಗಿದೆ. ಸಂವಿಧಾನದ ಬಗ್ಗೆ ಕಾಂಗ್ರೆಸ್ ನವರು ಮಾತಾಡ್ತಾರೆ. ಆದರೆ, ಕಾಂಗ್ರೆಸ್ ನವ್ರು ಹೇಳೋದು ಒಂದು ಮಾಡೋದೊಂದು ಅನ್ನುವಂತೆ ನಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನವರು ಸಂವಿಧಾನಕ್ಕೆ ಅಪಚಾರ ಮಾಡುತ್ತಿದ್ದಾರೆ. ಎಲ್ಲವನ್ನೂ ನೋಡಿ ಸುಮ್ಮನೇ ಕುಳಿತುಕೊಳ್ಳಲು ಆಗಲ್ಲ. ಜನರಿಗೆ ನ್ಯಾಯ ಕೊಡಬೇಕಿದೆ, ಜನರನ್ನ ರಕ್ಷಣೆ ಮಾಡಬೇಕಿದೆ. ಹೀಗಾಗಿ ಬಳ್ಳಾರಿಯಿಂದ ನಮ್ಮ ಸಮಾವೇಶ ಆರಂಭ ಆಗುತ್ತಿದೆ. ಇದಾದ ನಂತರ ಇದೇ ರೀತಿ ರಾಜ್ಯದಲ್ಲಿ ಹೋರಾಟ ಮಾಡುತ್ತೇವೆ. ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆ ಕ್ಯಾನ್ಸಲ್ ಆಗಿಲ್ಲ. ಅದು ಮೊದಲೇ ತೀರ್ಮಾನ ಆಗಿರಲಿಲ್ಲ. ನಮ್ಮ ಸ್ಥಳೀಯ ಮುಖಂಡರಿಗೆ ಪಾದಯಾತ್ರೆ ಮಾಡುವ ತವಕ ಇದೆ. ಪಾದಯಾತ್ರೆ ತರಾತುರಿಯಲ್ಲಿ ಮಾಡೋದಲ್ಲ. ಎಲ್ಲರೂ ಕುಳಿತು ತೀರ್ಮಾನ ಮಾಡಿ ಮಾಡುತ್ತೇವೆ ಎಂದರು.

























