ಬಳ್ಳಾರಿ ಜಿಲ್ಲೆಯ ನೂತನ ಎಸ್ಪಿಯಾಗಿ ಕಾರ್ಯಭಾರ ವಹಿಸಿಕೊಂಡ ಪವನ್ ನೆಜ್ಜೂರ್

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಜ.01: ಜಿಲ್ಲೆಗೆ ನೂತನ ಎಸ್ಪಿಯಾಗಿ ಪವನ್ ನೆಜ್ಜೂರ್ ಅವರು ಇಂದು ಕಾರ್ಯಭಾರ ವಹಿಸಿಕೊಂಡಿದ್ದಾರೆ. ನಿಗರ್ಮಿಸಿದ ಎಸ್ಪಿ ಶೋಭರಾಣಿಯವರು ನೂತನ ಎಸ್ಪಿಗೆ ಕಾರ್ಯಭಾರ ಹಸ್ತಾಂತರಿಸಿದ್ದಾರೆ.

ಇವರು ವಿಜಯನಗರದಲ್ಲಿ ಲೋಕಾಯುಕ್ತದಲ್ಲಿ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಕಳೆದ ಒಂದು ವರೆ ವರ್ಷದಿಂದ ಈ ಜಿಲ್ಲೆಯ  ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದ ಡಾ.ಶೋಭಾರಾಣಿ  ವಿ.ಜೆ.ಅವರನ್ನು ಮಂಡ್ಯ ಎಸ್ಪಿಯನ್ನಾಗಿ ವರ್ಗ ಮಾಡಲಾಗಿದೆ. ಇವರು ಈ ಹಿಂದೆ ಮಂಡ್ಯದಲ್ಲಿ ಕರ್ತವ್ಯನಿರ್ವಹಿಸಿದ್ದರು.

ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ದಂಧೆಗಳನ್ನು ಮಟ್ಟ ಹಾಕಲು ಪ್ರಯತ್ನಿಸಿದರೆ ಇಲ್ಲಿನ ರಾಜಕಾರಣಿಗಳ ಒತ್ತಡದಿಂದ ಅದಕ್ಕೆ ಅಡ್ಡಿಯಾಗುತ್ತಿದ್ದರಿಂದ ಬೇಸತ್ತು ಸ್ವ ಇಚ್ಛಯಿಂದ  ವರ್ಗಾವಣೆ ಬಯಸಿದ್ದರೆಂದು ಜೊತೆಗೆ ಇಲಾಖೆಯಲ್ಲಿಯೂ ಆಂತರಿಕ ಶೀತಲ ಸಮರದಿಂದಲೂ ಬೇಸತ್ತಿದ್ದರೆಂದು ಹೇಳಲಾಗುತ್ತಿದೆ. 

ನಗರದಲ್ಲಿ ಬಿಜೆಪಿಯವರ ಆರೋಪದಂತೆ ನಡೆಯುತ್ತಿರುವ ಅಕ್ರಮ ಅಕ್ಕಿ, ಮಟಕಾ, ಇಸ್ಪೀಟ್, ಗಾಂಜಾ ದಂಧೆ ನಿಯಂತ್ರಿಸುವುದು ಹೊಸ ಎಸ್ಪಿಯವರಿಗೆ ಸವಾಲಾಗಲಿದೆ.