ಬಳ್ಳಾರಿ ಜಿಲ್ಲಾಧಿಕಾರಿಯಾಗಿನಾಗೇಂದ್ರ ಪ್ರಸಾದ್ ಅಧಿಕಾರ ಸ್ವೀಕಾರ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.11:
ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ನಿನ್ನೆ ಸಂಜೆ ಕೆ.ನಾಗೇಂದ್ರ ಪ್ರಸಾದ್ ಅವರು ಅಧಿಕಾರವಹಿಸಿಕೊಂಡಿದ್ದಾರೆ.
ಕೆಎಎಸ್ ನಿಂದ ಐಎಎಸ್  ಮುಂಭಡ್ತಿ ಪಡೆದಿದ್ದಾರೆ.
ಈ  ಹಿಂದೆ ಜಿಲ್ಲಾಧಿಕಾರಿಯಾಗಿದ್ದ  ಶಿವಪ್ಪ ಅವರ ಆಡಳಿತದ 15 ವರ್ಷಗಳ ನಂತರ ಕೆಎಎಸ್ ನಿಂದ ಐಎಎಸ್ ಅಧಿಕಾರಿಯಾಗಿರುವ ಇವರು ಡಿಸಿಯಾಗಿ ಬಂದಿದ್ದಾರೆ.  ಶಿವಪ್ಪ ಅವರ ನಂತರ  ಇಲ್ಲಿಯವರೆಗೆ ನೇರವಾಗಿ ಐಎಎಸ್ ಅಧಿಕಾರಿಗಳೇ ಜಿಲ್ಲಾಧಿಕಾರಿಗಳಾಗಿದ್ದರು.‌
ಹಲವು ಹಂತಗಳಲ್ಲಿ, ಹಲವು ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿ ಬಂದಿರುವ ಇವರು ಇಲ್ಲಿಗೆ ಬರುವ ಮುನ್ನ ಬೆಂಗಳೂರಿನ ಗ್ರಾಮೀಣ ಕುಡಿವನೀರು ಮತ್ತು ನೈರ್ಮಲ್ಯ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿದ್ದು.