ಬಳ್ಳಾರಿ ಗ್ರಾಮೀಣ ಪೊಲೀಸರಿಂದಬೊಮ್ಮಾನಾಳ್ ನಿಂದ ಬರುತ್ತಿದ್ದ ಬಿಂಚೆ ಲಾರಿ ಸೀಜ್

oplus_27262976


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.23:  
ಆನಧಿಕೃತವಾಗಿ ಬಿಂಚಿ ಕಲ್ಲು ಮತ್ತು ಎಮ್‌ಸ್ಯಾಂಡ್ ನ್ನು ಆಂದ್ರಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ. ಪ್ರದೇಶದ ಬೊಮ್ಮಹಾಳ್ ಕ್ರಸರ್ ಗಳಿಂದ ತುಂಬಿಕೊಂಡು ನಗರಕ್ಕೆ ಬರುತ್ತಿದ್ದ ಲಾರಿಗಳನ್ನು ಗ್ರಾಮೀಣ ಠಾಣೆಯ ಪೊಲೀಸರು ಸೀಜ್ ಮಾಡಿದ್ದಾರೆ.
ಬೊಮ್ಮನಾಲಳ್ ನಿಂದ ಬರುತ್ತಿದ್ದ ಲಾರಿಗಳನ್ನು  ತಾಲೂಕಿನ ಎತ್ತಿನಬೂದಿಹಾಳ್ ಕ್ರಾಸ್ ಹತ್ತಿರ ಚೆಕ್‌ಪೋಸ್ಟ್‌ನಲ್ಲಿ ಗ್ರಾಮೀಣ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಉದಯ ರವಿ ಮತ್ತವರ ಸಿಬಗಬಂದಿ ತಡೆದು. ಓವರ್ ಲೋಡ್ ನೊಂದಿಗೆ  ಕಲ್ಲು ಬಿಂಚೆ ಸಾಗಾಟ ಮಾಡುತ್ತಿದ್ದ 10 ಮತ್ತು ಎಮ್ಸ್ಯಾಂಡ್ ಸಾಗಾಟ ಮಾಡುತ್ತಿದ್ದ 1 ಟಿಪ್ಪರ್ ಲಾರಿಗಳ‌ನ್ನು ಮೊನ್ನೆ ವಶಕ್ಕೆ ಪಡೆಯಲಾಗಿದೆ. ಮುಂದಿನ ಕ್ರಮಕ್ಕಾಗಿ  ಉಪ-ನಿರ್ದೇಶಕರ ಕಛೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.