
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.02: ನ್ಯಾಯಾಲಯದ ಆದೇಶದಂತೆ ಇಲ್ಲಿನ ರಾಬಾಕೊವಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಕೆಎಂಎಫ್) ದ ಆಡಳಿತ ಮಂಡಳಿಯ 12 ನಿರ್ದೇಶಕ ಸ್ಥಾನಗಳಿಗೆ ಜುಲೈ 10 ರಂದು ಚುನಾವಣೆ ನಡೆಯಲಿದ್ದು. ನಾಮಪತ್ರ ಸಲ್ಲಿಕೆ ಕಾರ್ಯ ಇಂದು ಆಂತ್ಯಗೊಂಡಿದೆ..
ಕಳೆದ ಒಂದು ವರ್ಷದ ಹಿಂದೆ ಇಲ್ಲಿನ ಕೆಎಂಎಫ್ ನ 12 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿತ್ತು. ಆದರೆ, ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಅದನ್ನು ಮುಂದೂಡಲಾಗಿತ್ತು. ನಂತರ ಈ ವಿಷಯದಲ್ಲಿ ಕೋರ್ಟ್ ಮೊರೆ ಹೋಗಲಾಗಿತ್ತು. ಕೋರ್ಟ್ 13 ಡಿ ಅನುಸರಿಸಿ ಚುನಾವಣೆ ಪ್ರಕ್ರಿಯೆ ಎಲ್ಲಿ ನಿಂತಿತ್ತು ಅಲ್ಲಿಂದ ನಡೆಸುವಂತೆ ಸೂಚಿಸಿತ್ತು.
ನಗರದಲ್ಲಿರುವ ಒಕ್ಕೂಟದ ಆಡಳಿತ ಕಛೇರಿಯಲ್ಲಿ ಮೊನ್ನೆಯಿಂದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭಗೊಂಡು ಇಂದು ಅಂತ್ಯಗೊಂಡಿದೆ. ಈ ಮೊದಲು ಸಲ್ಲಿಸಿದ್ದ 21 ಜನರ ಜೊತೆಗೆ ಇಂದು ಮಧ್ಯಾಹ್ನ ಒಂದು ಗಂಟೆವರೆಗೆ 13 ಜನರು ನಾಮಪತ್ರ ಸಲ್ಲಿಸಿದ್ದರು.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರಗಳ ಹಿಂತೆಗೆದುಕೊಳ್ಳಲು ನಾಡಿದ್ದು ಕೊನೆಯ ಸ್ಪರ್ಧೆ ಏರ್ಪಟ್ಟರೆ ಜು 10 ರಂದು ಕೆಎಂಎಫ್ ಕಚೇರಿ ಆವರಣದಲ್ಲಿಯೇ ಬೆಳಗ್ಗೆ 9 ಘಂಟೆಯಿಂದ ಸಂಜೆ 4.00 ಘಂಟೆಯವರೆಗೆ ಮತದಾನ ನಡೆಯಲಿದೆ. ಮತದಾನದ ನಂತರ ಮತಗಳ ಎಣಿಕೆ ಮಾಡಿ ಫಲಿತಾಂಶ ಘೋಷಣೆ ಮಾಡಲಿದೆ.ಬಹುತೇಕ ಹಳೆಯ ನಿರ್ದೇಶಕರೇ ಸ್ಪರ್ಧಾ ಕಣದಲ್ಲಿದ್ದಾರೆ.