Home ಜಿಲ್ಲೆ ಬಳ್ಳಾರಿಯಲ್ಲಿ ಮುಂದಿನ ವರ್ಷ ರಂಭಾಪುರ ಶ್ರೀಗಳ ದಸರಾ ದರ್ಬಾರ

ಬಳ್ಳಾರಿಯಲ್ಲಿ ಮುಂದಿನ ವರ್ಷ ರಂಭಾಪುರ ಶ್ರೀಗಳ ದಸರಾ ದರ್ಬಾರ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಅ.19: ವೀರಶೈವ ಧರ್ಮದ ತತ್ವಗಳು, ಆಚರಣೆಗಳು ಮತ್ತು ಸಂಸ್ಕೃತಿಯ ಪ್ರಸಾರದಲ್ಲಿ ಮಹತ್ವದ ಪಾತ್ರ ವಹಿಸುವ.ಧರ್ಮ, ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಮೌಲ್ಯಗಳ ಸಂರಕ್ಷಣೆ.ಶಿಕ್ಷಣ, ಸಮಾಜಸೇವೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ.ಭಕ್ತರಿಗೆ ಧಾರ್ಮಿಕ ಉಪದೇಶ ಮತ್ತು ಮಾರ್ಗದರ್ಶನ ನೀಡುವ. ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರ ರಂಭಾಪುರಿ ಪೀಠವನ್ನು ಸ್ಥಾಪಿಸಿದರು. ಬಾಳೆಹೊನ್ನೂರಿನಲ್ಲಿ ಸ್ಥಾಪಿಸಿದ್ದು.  ಪೀಠದ 121ನೇ  ಜಗದ್ಗುರು  ಶ್ರೀ ಪ್ರಸನ್ನ ರೇಣುಕಾ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಮುಂದಿನ ವರ್ಷ 2027 ರ 36 ನೇ ದಸರಾ ದರ್ಬಾರ ಕಾರ್ಯಕ್ರಮವನ್ನು ಬಳ್ಳಾರಿಯಲ್ಲಿ ನಡೆಸಲು ಸಮ್ಮತಿಸಿದ್ದಾರೆ.

ಶ್ರೀ ಪೀಠದಿಂದಶರನ್ನವರಾತ್ರಿ ದಸರಾ ಮಹೋತ್ಸವವನ್ನು ಪ್ರತಿ ವರ್ಷ ರಾಜ್ಯದ ಒಂದೊಂದು ಸ್ಥಳದಲ್ಲಿ “ದಸರಾ ದರ್ಬಾರ” ವಿಶೇಷವಾಗಿ

 ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಧರ್ಮಸಮ್ಮೇಳನ, ಜಗದ್ಗುರುಗಳ ಇಷ್ಟಲಿಂಗ ಪೂಜೆ, ಧಾರ್ಮಿಕ ಉಪನ್ಯಾಸಗಳು ಮತ್ತು ಅಡ್ಡಪಲ್ಲಕ್ಕಿ ಉತ್ಸವ ನಡೆಯುತ್ತದೆ. .

ನಿನ್ನೆ ದಿನ ಈವರ್ಷ ದಸರಾ ದರ್ಬಾರ ನಡೆಯುತ್ತಿರುವ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ನಡೆಯುತ್ತಿರುವ ದಸರಾ ದರ್ಬಾರ ಕಾರ್ಯಕ್ರಮಕ್ಕೆ ತೆರಳಿದ  ಬಳ್ಳಾರಿಯ ವೀರಶೈವ ಲಿಂಗಾಯತ ಮುಖಂಡರು ಶ್ರೀಗಳನ್ನು ಭೇಟಿ ಮಾಡಿ. ಈ ವರೆಗೆ ಬಳ್ಳಾರಿ ಜಿಲ್ಲೆಯಲ್ಲಿ ಪೀಠದಿಂದ ದಸರಾ ದರ್ಬಾರ ಕಾರ್ಯಕ್ರಮ ನಡೆದಿಲ್ಲ. ಹಾಗಾಗಿ ವೀರಶೈವ ಧರ್ಮದಜನ ಜಾಗೃತಿಗಾಗಿ ಮುಂದಿನವರ್ಷದ 2027 ರ 10 ದಿನಗಳ ದಸರಾ ದರ್ಬಾರ ಕಾರ್ಯಕ್ರಮವನ್ನು ಬಳ್ಳಾರಿ ನಗರದಲ್ಲಿ ನಡೆಸಲು ತಾವುಗಳು ಆಗಮಿಸಬೇಕೆಂದು ಶ್ರೀಗಳಿಗೆ ಮನವಿ ಮಾಡಿದ್ದು. ಶ್ರೀಗಳು ಸಮ್ಮತಿಸಿದ್ದಾರೆ.

ಸಮಾಜದ ಮುಖಂಡರುಗಳಾದ ಪ್ರಭುಸ್ವಾಮಿ,  ಮಹಾಲಿಂಗಯ್ಯ(ರಾಜಣ್ಣ), ಖೇಣಿ ಬಸಪ್ಪ, ಗಾಳಿ ರಾಜಶೇಖರ, ಅಂಗಡಿ ಪಂಪಾಪತಿ,ತಿಮ್ಮನಗೌಡ ಸಿದ್ದಮ್ಮನಹಳ್ಳಿ, ಮೀನಳ್ಳಿ ಚಂದ್ರಶೇಖರ, ಬಿ.ಎಂ ಎರ್ರಿಸ್ವಾಮಿ(ಎಣ್ಣೆ),ಸಿದ್ದರಾಮ ಕಲ್ಮಠ, ಎಂ.ಚಂದ್ರಮೌಳಿ, ಹಚ್ಚೊಳ್ಳಿ ಗೌರಿ ಶಂಕರಸ್ವಾಮಿ,  ಜಾನೆಕುಂಟೆ ಬಸವರಾಜ್(ಕುಮ್ಮಿ) ಕೋಳೂರು ವೆಂಕಟೇಶ ಗೌಡ, ಮುಂಡಾಸದ ಮಲ್ಲಿಕಾರ್ಜುನ,  ಗಂಗಾವತಿ ವೀರೇಶ್,   ಎನ್.ವೀರಭದ್ರಗೌಡ, ಮೋಕ ಮುದ್ದನಗೌಡ  ಕಾರಪುಡಿ, ವಿಭೂತಿ ಎರ್ರಿಸ್ವಾಮಿ, ಕಲ್ಕಂಬದ ಎರ್ರಿಸ್ವಾಮಿ, ಹೊನ್ನನಗೌಡ, ಶಿಕ್ಷಕ  ಮೃತ್ಯುಂಜಯ, ಕೇಣಿ ಬಸವರಾಜ, ಹಲಕುಂದಿ ಮಲ್ಲಿಕಾರ್ಜುನಗೌಡ, ಪರ್ವತೇಶ, ಕೊರ್ಲಗುಂದಿ ಬಸನಗೌಡ, ಬಿಎಂ   ವೀರಪ್ಪಯ್ಯ, ಯೋಗೇಶ್ ಸ್ವಾಮಿ ಮೊದಲಾದವರು ತೆರಳಿ ಶ್ರೀಗಳಿಗೆ ಬಿನ್ನವತ್ತಳೆ ಸಲ್ಲಿಸಿದ್ದರು.