ಬಳ್ಳಾರಿಯಲ್ಲಿ ಜೂರಿ ಪರೀಕ್ಷೆ ಯಶಸ್ವಿ – 12 ಮಂದಿ ಯೋಗ ತೀರ್ಪುಗಾರರಾಗಿ ಆಯ್ಕೆ

ಸಂಜೆವಾಣಿ ವಾರ್ತೆ

ಬಳ್ಳಾರಿ, ಫೆ,24- ಬಳ್ಳಾರಿಯ ಶ್ರೀ ಸತ್ಯ ಸಾಯಿ ಮಂದಿರದಲ್ಲಿ ಶ್ರೀ ವಿಶ್ವ ಬಂಧು ನಾಗೇಶ್ ಗುರುಜಿಯವರ ಮಾರ್ಗದರ್ಶನದಲ್ಲಿ ಸ್ವಾಮಿ ವಿವೇಕಾನಂದ ಅಂತರಾಷ್ಟ್ರೀಯ ಯೋಗ ಅಕಾಡೆಮಿ ವತಿಯಿಂದ ಜೂರಿ ಪರೀಕ್ಷೆ ಯಶಸ್ವಿಯಾಗಿ ನಡೆಯಿತು.

ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳ್ಳಾರಿ ಜಿಲ್ಲೆಯ   ಜಿಲ್ಲಾ ಪತಂಜಲಿ ಯೋಗಸಮಿತಿ ಸದಸ್ಯರಾದ ಇಸ್ವಿ ಪಂಪಾಪತಿ ಹಾಗೂ ಡಾ. ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯ ದೈಹಿಕ ಶಿಕ್ಷಕರಾದ ಶ್ರೀ ರಂಗಪ್ಪ, ಸೇರಿ 12 ಮಂದಿ ಶಿಕ್ಷಕರು ಯೋಗಾಸನ ಸ್ಪರ್ಧೆಗಳ ತೀರ್ಪುಗಾರರಾಗಿ ಆಯ್ಕೆಯಾಗಿದ್ದು, ರಾಜ್ಯದ ಯಾವುದೇ ಯೋಗಾಸನ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಲು ಅರ್ಹತೆ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ವಿಶ್ವ ಬಂಧು ನಾಗೇಶ್ ಗುರುಜಿ, ಪರೀಕ್ಷೆಯಲ್ಲಿ ಉತ್ತೀರ್ಣರಾದ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿ, ಯೋಗ ಕ್ಷೇತ್ರದಲ್ಲಿ ಗುಣಮಟ್ಟದ ತೀರ್ಪುಗಾರರ ಅಗತ್ಯತೆ ಕುರಿತು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು.

ಕಾರ್ಯಕ್ರಮವನ್ನು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಆಯುಷ್ ಇಲಾಖೆ ಮುಖ್ಯಸ್ಥರಾದ ಡಾ. ಪಣೀಂಧರ್ ಉದ್ಘಾಟಿಸಿದರು.

ಕಾರ್ಯಕ್ರಮದ ಆಯೋಜಕರಾಗಿ ಚಿದಂಬರಾವ್ (ಪತಂಜಲಿ ಯೋಗ ಸಮಿತಿ ಸಂಚಾಲಕರು, ರಾಜ್ಯ ಜೂರಿ ಸದಸ್ಯರು ಹಾಗೂ ರೆಫ್ರಿ) ಮತ್ತು ಎ. ರಾಘವೇಂದ್ರ (ಎಸ್ಆರ್ಕೆ ಯೋಗ ಕೇಂದ್ರ ಕುರೇಕುಪ್ಪ ಕಾರ್ಯಾಧ್ಯಕ್ಷರು, ಗ್ಲೋಬಲ್ ಯೋಗ ಸಮಿತಿಯ ರಾಜ್ಯ ಸಂಯೋಜಕರು, ರಾಜ್ಯ ಜೂರಿ ಸದಸ್ಯರು ಹಾಗೂ ರೆಫ್ರಿ) ಕಾರ್ಯನಿರ್ವಹಿಸಿದರು.

ಮುಖ್ಯ ಅತಿಥಿಗಳಾಗಿ ಪಂಪಾಪತಿ ಮತ್ತು ಪ್ರಕಾಶ್ (ರಾಜ್ಯ ಸಮಿತಿ ಸದಸ್ಯರು, ಪತಂಜಲಿ ಯೋಗ ಸಮಿತಿ ಬಳ್ಳಾರಿ), ಹತ್ತಿಕಾಳು ವಿರುಪಾಕ್ಷಪ್ಪ (ಗೌರವ ಅಧ್ಯಕ್ಷರು, ಜಿಲ್ಲಾ ಪತಂಜಲಿ ಯೋಗ ಸಮಿತಿ), ಅಶೋಕ್ ದಿನ್ನಿ (ಅಧ್ಯಕ್ಷರು, ಭಾರತ ಸ್ವಾಭಿಮಾನ ಟ್ರಸ್ಟ್), ವಸ್ತ್ರದ್ (ಗೌರವ ಅಧ್ಯಕ್ಷರು, ಗ್ಲೋಬಲ್ ಯೋಗ ಸಮಿತಿ ಬಳ್ಳಾರಿ) ಹಾಗೂ ರಮೇಶ್ ಕೆ (ಅಧ್ಯಕ್ಷರು, ಗ್ಲೋಬಲ್ ಯೋಗ ಸಮಿತಿ ಬಳ್ಳಾರಿ) ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಯೋಗ ಸ್ಪರ್ಧೆಯೂ ನಡೆಯಿತು. ಎಸ್ಆರ್ಕೆ ಯೋಗ ತಂಡ ಹಾಗೂ ಹರಗಿನದೋಣಿ ಯೋಗ ತಂಡದ ಮಕ್ಕಳಿಂದ ನಡೆದ ಯೋಗ ಪ್ರದರ್ಶನವಾಯಿತು