ಬಲ್ಮಠ – ಫಳ್ನೀರ್ ರಸ್ತೆ: ಪಾರ್ಕಿಂಗ್ ನಿಷೇಧ

ಮಂಗಳೂರು- ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಬೆಂದೂರು ವಾರ್ಡಿನ ಯುನಿಟಿ ಆಸ್ಪತ್ರೆಯಿಂದ ಬಲ್ಮಠ ರಸ್ತೆಗೆ ಸಂಪರ್ಕಿಸುವ ವಾಸ್ ಲೇನ್ ರಸ್ತೆಯನ್ನು ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಮಂಗಳೂರು ಮಹಾನಗರ ಪಾಲಿಕೆಯಿಂದ ಅಗಲೀಕರಣಗೊಳಿಸಿ ರಸ್ತೆ ಬದಿಗಳನ್ನು ಇಂಟರ್‍ಲಾಕ್‌ನಿಂದ ನಿರ್ಮಾಣ ಮಾಡಲಾಗಿರುತ್ತದೆ. ರಸ್ತೆಯು ಫಳ್ನೀರು ರಸ್ತೆ ಹಾಗೂ ಬಲ್ಮಠ ರಸ್ತೆಯನ್ನು ಸಂಪರ್ಕಿಸುವ ಪ್ರಮುಖ ಮುಖ್ಯ ರಸ್ತೆಯಾಗಿದ್ದು, ಈ ರಸ್ತೆಯಲ್ಲಿ ಪ್ರತಿ ದಿನ ಹೆಚ್ಚಿನ ಸಂಖ್ಯೆಯಲ್ಲಿ ಕಾರು ದ್ವಿಚಕ್ರ ಹಾಗೂ ಇತ್ಯಾದಿ ವಾಹನಗಳು ಸಂಚರಿಸುತ್ತಿರುವುದರಿಂದ ವಾಸ್‌ಲೇನ್ ರಸ್ತೆಯು ಹೆಚ್ಚಿನ ವಾಹನ ದಟ್ಟಣೆಯಿಂದ ಕೂಡಿದ ರಸ್ತೆಯಾಗಿರುತ್ತದೆ. ಅಲ್ಲದೇ ಫಳ್ನೀರು ರಸ್ತೆಯಲ್ಲಿ ಯುನಿಟಿ, ಹೈಲ್ಯಾಂಡ್ ಆಸ್ಪತ್ರೆಗಳಿದ್ದು ಮತ್ತು ಬಲ್ಮಠ ರಸ್ತೆಯಲ್ಲಿ ಅನೇಕ ನಸಿರ್ಂಗ್ ಹೋಮ್‌ಗಳಿರುವುದರಿಂದ ತುರ್ತು ವಾಹನಗಳ ಹೆಚ್ಚಿನ ಸಂಚಾರ ಇರುತ್ತದೆ.
ವಾಸ್‌ಲೇನ್ ರಸ್ತೆಯ ಎರಡೂ ಬದಿ ಹೆಚ್ಚಿನ ವಸತಿ ಸಮುಚ್ಚಯಗಳಿದ್ದು, ರಸ್ತೆಯ ಪ್ರಾರಂಭದ ಫಳ್ನೀರು ರಸ್ತೆಯಲ್ಲಿ ಯುನಿಟಿ ಆಸ್ಪತ್ರೆ, ವಾಣಿಜ್ಯ ಕಟ್ಟಡಗಳು, ಅನೇಕ ವೈದ್ಯರ ಕ್ಲಿನಿಕ್‌ಗಳಿದ್ದು ಇಲ್ಲಿಗೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ರಸ್ತೆಯಲ್ಲಿ ವಾಹನ ಪಾರ್ಕ್ ಮಾಡುತ್ತಿದು, ಇದರ ಪರಿಣಾಮವಾಗಿ ಮುಖ್ಯ ರಸ್ತೆಯಾದ ಫಳ್ನೀರು ರಸ್ತೆ ಹಾಗೂ ಬಲ್ಮಠ ರಸ್ತೆಯಲ್ಲಿ ಕೂಡಾ ಹೆಚ್ಚಿನ ವಾಹನ ದಟ್ಟಣೆ ಉಂಟಾಗುತ್ತಿರುತ್ತದೆ. ವಾಸ್‌ಲೇನ್ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದಲೂ ದೂರುಗಳು ಬಂದಿವೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ನಗರದ ಯುನಿಟಿ ಆಸ್ಪತ್ರೆಯಿಂದ ಬಲ್ಮಠ ರಸ್ತೆಗೆ ಸಂಪರ್ಕಿಸುವ ವಾಸ್ ಲೇನ್ ರಸ್ತೆಯಲ್ಲಿ ವಾಸ್‌ಲೇನ್ ಒಂದನೇ ಅಡ್ಡ ರಸ್ತೆಯಿಂದ ಯುನಿಟಿ ಆಸ್ಪತ್ರೆಯವರೆಗೆ (ರಸ್ತೆಯ ಬಲಬದಿ-ಪಶ್ಚಿಮ ದಿಕ್ಕು) ವಾಹನಗಳ ನಿಲುಗಡೆಯನ್ನು ನಿ??ಧಿಸಿ ”ನೋ ಪಾಕಿರ್ಂಗ್ ವಲಯ” ಎಂದು ಘೋಷಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಘೋಷಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.