ಬಲಗೈ ಸಮುದಾಯದವರು ಹೊಲಯ ಅಂತನೇ ನಮೂದಿಸಿ ಸೇವಾ ಸಮಿತಿ ಜಾಗೃತಿ

ಸಂಜೆವಾಣಿ ವಾರ್ತೆ
ಯಳಂದೂರು:
ಯಳಂದೂರು ತಾಲ್ಲೂಕು ಡಾ ಬಿ ಆರ್ ಅಂಬೇಡ್ಕರ್ ಸೇವಾ ಸಮಿತಿ ವತಿಯಿಂದ ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೆ ತೆರಳಿ ಒಳ ಮೀಸಲಾತಿ ಸಮೀಕ್ಷೆಯಲ್ಲಿ ಬಲಗೈ ನವರು ಹೊಲಯ ಎಂದು ನಮೂದಿಸಿಬೇಕೆಂದು

ತಾಲ್ಲೂಕಿನ ಹೊನ್ನೂರು, ಕೆಸ್ತೂರು, ಮಲ್ಲಿಗಹಳ್ಳಿ, ಯರಿಯೂರು, ಮದ್ದೂರು, ಮಾಂಬಳ್ಳಿ, ಟಿ ಹೊಸೂರು, ಶಿವಕಳ್ಳಿ ಹಾಗೂ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿದರು.
ಸೇವಾ ಸಮಿತಿ ಪದಾಧಿಕಾರಿ ಕೆಸ್ತೂರು ಸಿದ್ದರಾಜು ಮಾತನಾಡಿ ರಾಜ್ಯಾದ್ಯಂತ ಒಳಮೀಸಲಾತಿ ಅಂಗವಾಗಿ ಸರಕಾರ ಸಮೀಕ್ಷೆ ಕಾರ್ಯವನ್ನು ಇದೇ 25 ತನಕ ಅವಕಾಶ ಕೊನೆ ಮಾಡಿರುತ್ತದೆ ನಮ್ಮ ಚಾಮರಾಜನಗರ ಜಿಲ್ಲೆಯಲ್ಲಿ 40% ಮಾತ್ರ ಸಮೀಕ್ಷೆ ಕಾರ್ಯ ನಡೆದಿದೆ ಇನ್ನೂ ಉಳಿದ ದಿನಗಳಲ್ಲಿ 100% ಸಮೀಕ್ಷೆ ಮುಗಿಯಬೇಕಾಗಿದೆ.


ಹೊಲಯ ಸಂಬಂಧಿತ ಜಾತಿಯಾದ ಆದಿ ಕರ್ನಾಟಕದ ಹೊಲಯ ಎಂದು ಬರೆಸುವ ಮೂಲಕ ನಮ್ಮ ಸಮುದಾಯದ ಮುಂದಿನ ಭವಿಷ್ಯಕ್ಕೆ ಸಹಕರಿಸಬೇಕಾಗಿ ಮನವಿ. ಒಂದು ವೇಳೆ ಹೊಲಯ ಎಂದು ಬರಸದೆ ಹೋದರೆ ನಮ್ಮ ಸಮಾಜದವರಿಗೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕ ಮತ್ತು ರಾಜಕೀಯವಾಗಿ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ ಆದರಿಂದ ಕಡ್ಡಾಯವಾಗಿ ಹೊಲಯ ಎಂದು ನಮೂದಿಸಬೇಕಾಗಿದೆ


ಈ ಭಾಗದಲ್ಲಿ ಹೆಚ್ಚು ಬಲಗೈ ಸಮುದಾಯವಿದ್ದು ಸಮೀಕ್ಷೆ ಸಂದರ್ಭದಲ್ಲಿ ಹೊಲಯವೆಂದು ನಮೂದಿಸಬೇಕಾಗಿದೆ ಯಳಂದೂರು ತಾಲ್ಲೂಕಿನ ಕೆಲ ಕಡೆ ಬಲಗೈ ಸಮುದಾಯದವರ ರೇಷನ್ ಕಾರ್ಡ್ ಪರಿಶೀಲಿಸಿದರೆ ಎಸ್ಟಿ ಎಂದು ತೋರಿಸುತ್ತದೆ ಕೆಲವು ಕಡೆ ಆಧಾರ್ ಕಾರ್ಡ್ ನ್ನೆ ಮಾಡಿಸದೆ ಇರುವವರು ಇದ್ದಾರೆ ಇನ್ನೂ ಅನೇಕ ತಾಂತ್ರಿಕ ಸಮಸ್ಯೆಗಳು ಉಂಟಾಗಿವೆ 100 ಜನಕ್ಕೆ ಒಬ್ಬ ಶಿಕ್ಷಕರನ್ನು ನೇಮಿಸಿ ಅವರ ಮೂಲಕ ಸಮೀಕ್ಷೆ ಮಾಡಿಸುತ್ತಿದ್ದಾರೆ ಇದರಿಂದ ವಿಳಂಬವಾಗುತ್ತದೆ ಆದರಿಂದ ಇನ್ನೂ ಹೆಚ್ಚು ಮಂದಿ ಶಿಕ್ಷಕರನ್ನು ನೇಮಿಸಬೇಕಾಗಿದೆ ಹಾಗೂ ನೋಡಲ್ ಅಧಿಕಾರಿಗಳು ಸ್ಥಳಕ್ಕೆ ಹೋಗಿ ತಾಂತ್ರಿಕ ಸಮಸ್ಯೆ ಬಗ್ಗೆ ಮಾಹಿತಿ ಕಲೆಯಾಕಿ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.


ಬಲಗೈ ಸಮುದಾಯದವರು ಹೊಲಯ ಅಂತನೇ ನೋಂದಾಯಿಸಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸೇವಾ ಸಮಿತಿಯ ಪದಾಧಿಕಾರಿಗಳಾದ ಯರಿಯೂರು ರಾಜಣ್ಣ, ಗುಂಬಳ್ಳಿ ಮಹದೇವ್, ಅಗ್ರಹಾರ ರೇವಣ್ಣ, ಜಯರಾಮ್, ನಂಜುಂಡಸ್ವಾಮಿ, ರಾಜು.ಲಿಂಗರಾಜು ಮೂರ್ತಿ, ಯರಗಂಬಳ್ಳಿ ಮಲ್ಲು, ದುಗ್ಗಹಟ್ಟಿ ಮಾದೇಶ್, ಅಗರ ಲಿಂಗರಾಜ್ ,ಶಶಿ, ಕೆಸ್ತೂರು ಯಜಮಾನರಾದ ಬಿ ನಾಗರಾಜು, ಜಯರಾಜು, ಕುಮಾರ್, ಮಧು ಕೆಸ್ತೂರು, ದೊರೆಸ್ವಾಮಿ, ಗ್ರಾಪಂ ಸದಸ್ಯ ಪ್ರಸಾದ್, ಚಿಕ್ಕನಿಂಗ,ಹಾಗೂ ಕೆಸ್ತೂರು ಗ್ರಾಮಸ್ಥರು ಹಾಜರಿದ್ದರು.