Home ಜಿಲ್ಲೆ ಮೈಸೂರು ಬಡ ದುರ್ಬಲ ಜನರ ಹಕ್ಕುಗಳನ್ನು ಕಿತ್ತುಕೊಂಡ ಬಿಜೆಪಿ: ಹೆಚ್.ಪಿ.ಮಂಜುನಾಥ್ ಗಂಭೀರ ಆರೋಪ

ಬಡ ದುರ್ಬಲ ಜನರ ಹಕ್ಕುಗಳನ್ನು ಕಿತ್ತುಕೊಂಡ ಬಿಜೆಪಿ: ಹೆಚ್.ಪಿ.ಮಂಜುನಾಥ್ ಗಂಭೀರ ಆರೋಪ

ಸಂಜೆವಾಣಿ ವಾರ್ತೆ
ಹುಣಸೂರು, ಮಾ.04:
– ರಾಮನ ಹೆಸರು ಹೇಳಿಕೊಂಡು ದೇಶ ವಿಭಜಿಸುತ್ತಿರುವ ಪ್ರಧಾನಮಂತ್ರಿ ಮೋದಿ, ಕ್ರಾಂತಿಕಾರಿ ಕಾರ್ಯಕ್ರಮ ನರೇಗಾವನ್ನು ದುರ್ಬಲಗೊಳಿಸುತ್ತಿರುವುದು ಮಹಾ ದುರಂತ ಎಂದು ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಮನರೇಗಾ ಮಾರ್ಪಡುವಿಕೆ ವಿರೋಧಿಸಿ ಇಂದು ತಾಲ್ಲೂಕು ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಮನರೇಗಾ ಬಚ್ಚಾವೋ-ವಿಬಿ ಜಿ ರಾಮ್ ಜಿ ಹಠಾವೋ ಪ್ರತಿಭಟನಾ ರಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕೇಂದ್ರ ಬಿಜೆಪಿ ಸರ್ಕಾರ ದೇವರು ಧರ್ಮದ ಹೆಸರಿನಲ್ಲಿ ದುರ್ಬಲ ಜನರನ್ನು ಭಾವನಾತ್ಮಕವಾಗಿ ಬ್ಲಾಕ್ ಮೇಲ್ ಮಾಡುತ್ತಾ ಅವರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ.


ದೇಶಕ್ಕೆ ಹಲವಾರು ಕ್ರಾಂತಿಕಾರಕ ಕಾರ್ಯಕ್ರಮಗಳನ್ನು ನೀಡಿರುವುದು ಕಾಂಗ್ರೆಸ್, ಇಂದು ಬಿಜೆಪಿ ಆ ಕಾರ್ಯಕ್ರಮಗಳ ಹೆಸರುಗಳನ್ನು ಮಾತ್ರ ಬದಲಾಯಿಸುತ್ತಿದೆ ವಿನಹ ಹೊಸತನದ ಯಾವುದೇ ಕಾರ್ಯಕ್ರಮ ರೂಪಿಸಿ ಜನರ ಬದುಕು ಹಸನು ಮಾಡದಿರುವುದು ದುರಂತ ಎಂದ ಅವರು ದೇಶದ ಪ್ರತಿ ಪ್ರಜೆ ತಲೆಯ ಮೇಲೆ ದೊಡ್ಡ ಸಾಲ ಏರಿರುವುದೇ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಮಹಾಸಾಧನೆ ಎಂದು ವ್ಯಂಗವಾಡಿದರು.


ದೇಶ ಉದ್ದಾರ ಆಗಬೇಕಿದ್ದರೆ ಗ್ರಾಮೀಣ ಶಕ್ತಿ ಬಲವರ್ಧನೆ ಯಾಗಬೇಕು, ಈ ನಿಟ್ಟಿನಲ್ಲಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಯುವ ಕಾರ್ಯಕರ್ತರು ಜನರ ವಿಶ್ವಾಸಗಳಿಸುವ ಜೊತೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳ ಬಗ್ಗೆ ಮನವರಿಕೆ ಮಾಡಿಕೊಡಿ ಎಂದು ಪಕ್ಷದ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಸಲಹೆ ನೀಡಿದರು.
ಕೆ.ಪಿ.ಸಿ.ಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ ನಮ್ಮ ದೇಶದಲ್ಲಿ ಜನಸಾಮಾನ್ಯರು, ಬಡವರು ಬಡವರಾಗಿಯೇ ಇರಬೇಕು, ಸರಿ ಸಮಾನವಾಗಿ ಇರುವುದನ್ನು ಬಿಜೆಪಿ ಸಹಿಸುತ್ತಿಲ್ಲಾ, ಸುಳ್ಳು ಹೇಳೋದ್ರಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದವರು 4 ಪಿ.ಹೆಚ್.ಡಿ ಮಾಡಿದ್ದಾರೆ ಅಷ್ಟು ವೇಗವಾಗಿ ಸುಳ್ಳು ಹೇಳುತ್ತಿದ್ದಾರೆ, ಹುಣಸೂರು – ಪಿರಿಯಪಟ್ಟಣ ತಾಲೂಕು ಸೇರಿದಂತೆ ಕರ್ನಾಟಕದ ತಂಬಾಕು ಉತ್ತಮ ಗುಣಮಟ್ಟದಾಗಿದೆ ಆದರೆ ನರೇಂದ್ರಮೋದಿಯವರ ಬಿಜೆಪಿ ಸರ್ಕಾರ ತಂಬಾಕು ರೈತರ ಹಿತ ಕಾಪಾಡುವಲ್ಲಿ ವಿಫಲವಾಗಿದೆ. ಇವರೊಂದಿಗೆ ಕೇಂದ್ರ ಸಚಿವ ಕುಮಾರಸ್ವಾಮಿಯವರು ಕೂಡ ತಂಬಾಕು ರೈತರ ಸಮಸ್ಯೆಗಳನ್ನು ಬಗೆಹರಿಸದೇ ಕೇವಲ ನೆಪಕ್ಕಾಗಿ ಸಭೆ ನಡೆಸಿ ರೈತರಿಗೆ ಅನ್ಯಾಯವೆಸಗುತ್ತಿದ್ದಾರೆ ಎಂದು ಆರೋಪಿಸಿದರು.


ಸಭೆಯಲ್ಲಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ ಡಾ ಬಿ.ಜೆ. ವಿಜಯಕುಮಾರ್, ಹುಣಸೂರು ಉಸ್ತುವಾರಿ ರಾಮಪ್ಪ ಬೋವಿ, ಜಿ.ಪಂ ಮಾಜಿ ಸದಸ್ಯ ಡಿ.ಕೆ ಕುನ್ನೇಗೌಡ, ಕಾಂಗ್ರೇಸ್ ಮಾಜಿ ಕಾರ್ಯಧ್ಯಕ್ಷ ವಕೀಲ ಪುಟ್ಟರಾಜ್ ವಿಬಿ.ಜಿ.ರಾಮ್ ಜಿ ಕಾಯ್ದೆ ಹಿಂಪಡೆದು, ನರೇಗಾವನ್ನು ಮರು ಸ್ಥಾಪಿಸುವವರೆಗೂ ಹೋರಾಟ ಮುಂದುವರಿಸಲಾಗುವುದೆಂದರು.
ಪ್ರತಿಭಟನೆ ರಾಲಿಯಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತ ನಗರದ ಪ್ರಮುಖ ರಸ್ತೆಗಳಲ್ಲಿ ಹಾದು, ತಾಲೂಕು ಕಚೇರಿ ತಲುಪಿ ಉಪವಿಭಾಗಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.


ರಾಲಿಯಲ್ಲಿ ಕಾಂಗ್ರೆಸ್ ಮಹಿಳಾ ಯುವ ನಾಯಕಿ ತ್ರಿವೇಣಿ, ಕಾರ್ಯಧ್ಯಕ್ಷ ಗದ್ದಿಗೆ ದೇವರಾಜ್, ಬ್ಲಾಕ್ ಅಧ್ಯಕ್ಷರುಗಳಾದ ರವಿಪ್ರಸನ್ನ, ಪ್ರೇಮ್ ಕುಮಾರ್, ಬಾಲಸುಂದರ್, ಮಾಜಿ ಅಧ್ಯಕ್ಷರುಗಳಾದ ಕಲ್ಕುಣಿಕೆ ರಮೇಶ್, ನಾರಾಯಣ್, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಕಲ್ಕುಣಿಕೆ ರಾಘು, ವಕ್ಪ್ ಸಮಿತಿ ಸದಸ್ಯ ಅಜ್ಗರ್ ಪಾಷಾ, ಯುವ ಕಾಂಗ್ರೇಸ್ ಅಧ್ಯಕ್ಷರಾದ ದರ್ಶನ್, ಪೈಜಲ್, ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಸುನಿತಾಜಯರಾಮೇಗೌಡ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಕುಮಾರ್, ಗುಣಶೇಖರ್, ಮಾಜಿ ಸದಸ್ಯ ಚಿಕ್ಕಸ್ವಾಮಿ, ಶಿವಲಿಂಗಪ್ಪ, ಗಾಗೇನಹಳ್ಳಿ ಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ರಾಮೇಗೌಡ, ಮುಖಂಡರಾದ, ಎ.ಪಿ. ಸ್ವಾಮಿ, ಬಿ.ಎನ್ ಜಯರಾಮ್, ಕುಪ್ಪುಸ್ವಾಮಿ, ಎಸ್.ಜಯರಾಂ, ಉದ್ಯಮಿಗಳಾದ ರಾಜುಶಿವರಾಜೇಗೌಡ, ಟಿ.ಕೃಷ್ಣ, ಡಾ.ಎಚ್.ವಿ ಕಾರ್ತಿಕ್, ಅಪೆÇ್ರೀಜ್, ಕುಮಾರ್, ಕಾಂಕ್ರೀಟ್ ರಾಜು, ಜಯಲಕ್ಷ್ಮಿ, ಕಲ್ಪನ, ನೇತ್ರವತಿ, ರೇಖಾಮಣಿ, ರೇಣುಕ, ಸೇರಿದಂತೆ ಸಾವಿರಾರು ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು.