Home ಜಿಲ್ಲೆ ಮಂಗಳೂರು ಬಡ್ಡಡ್ಕ – ರಂಗತ್ತಮಲೆ ಸಂಪರ್ಕ ರಸ್ತೆಗೆ ಕಲ್ಲು ಇಟ್ಟು ಬಂದ್ ಮಾಡಿದ ವ್ಯಕ್ತಿ

ಬಡ್ಡಡ್ಕ – ರಂಗತ್ತಮಲೆ ಸಂಪರ್ಕ ರಸ್ತೆಗೆ ಕಲ್ಲು ಇಟ್ಟು ಬಂದ್ ಮಾಡಿದ ವ್ಯಕ್ತಿ

ಕಲ್ಲುಗಳನ್ನು ತೆರೆದು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟ ಸ್ಥಳೀಯರು
ಸುಳ್ಯ:ಆಲೆಟ್ಟಿ ಗ್ರಾಮದ ಬಡ್ಡಡ್ಕ-ರಂಗತ್ತಮಲೆ ಕಾಂಕ್ರೀಟ್ ರಸ್ತೆಗೆ ಕೆಂಪುಕಲ್ಲುಗಳನ್ನು ಹಾಗೂ ಮರದ ಕೊಂಬೆಗಳನ್ನು ಇರಿಸಿ ರಸ್ತೆ ಬಂದ್ ಮಾಡಿದ ವ್ಯಕ್ತಿಯಿಂದ ಪ್ರಶ್ನಿಸಲು ಬಂದ ಸ್ಥಳೀಯ ನಿವಾಸಿಗಳ ಮೇಲೆ ಜೀವ ಬೆದರಿಕೆಯ ಆರೋಪ ಹೊರಿಸಿ ಸುಳ್ಯ ಪೋಲೀಸ್ ಠಾಣೆಗೆ ದೂರು ನೀಡಿರುವ ಘಟನೆ ನಡೆದಿದೆ.
ರಂಗತ್ತಮಲೆ ನಿವಾಸಿ ಚಂದ್ರಕಾಂತ ಎಂಬವರು ರಸ್ತೆ ತನಗೆ ಸೇರಿದ ಜಾಗದಲ್ಲಿದೆ ಎಂದು ಹೇಳಿ, ರಂಗತ್ತಮಲೆಯಿಂದ ಬಡ್ಡಡ್ಕವನ್ನು ಸಂಪರ್ಕಿಸುವ ಸಾರ್ವಜನಿಕ ರಸ್ತೆಗೆ ಕಲ್ಲು ಅಡ್ಡಲಾಗಿ ಇರಿಸಿ ರಸ್ತೆಯನ್ನು ಬಂದ್ ಮಾಡಿದರೆನ್ನಲಾಗಿದೆ. ಈ ರಸ್ತೆಯ ಅಭಿವೃದ್ಧಿ ಕಾಮಗಾರಿ ೨೦೨೨ ರಲ್ಲಿ ಎಸ್.ಸಿ, ಎಸ್.ಟಿ. ಅನುದಾನದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ರೂ. ೧.೩೩ ಲಕ್ಷದಲ್ಲಿ ಕಾಂಕ್ರೀಟ್ ಕಾಮಗಾರಿ ನಡೆದಿದೆ. ಆಲೆಟ್ಟಿ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಸಾರ್ವಜನಿಕ ರಸ್ತೆಯಾಗಿದೆ. ಈ ಬಗ್ಗೆ ಚಂದ್ರಕಾಂತರ ಬಳಿ ಸ್ಥಳೀಯರು ಮಾತನಾಡಿಸಿದ್ದು ಆತ ಇದಕ್ಕೆ ಒಪ್ಪದೆ ಏಕಾಏಕಿಯಾಗಿ ಬಂದು ಸುಳ್ಯ ಪೊಲೀಸ್ ಠಾಣೆಯಲ್ಲಿ ಜೀವ ಬೆದರಿಕೆ ಆರೋಪ ಹೊರೆಸಿ ದೂರನ್ನು ನೀಡಿದ್ದಾರೆ. ಸ್ಥಳೀಯರು ಆತನ ಮೇಲೆ ಪ್ರತಿದೂರು ನೀಡಿದ್ದಾರೆ.