ಬಡವರ ಸವಾರ್ಂಗೀಣ ಅಭಿವೃದ್ಧಿಗಾಗಿ ವಿಕಸಿತ ಭಾರತ ಉದ್ಯೋಗ ಖಾತರಿ ಯೋಜನೆ ಜಾರಿ: ವಿ.ಸೋಮಣ್ಣ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜ.13:-
ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ವಿಬಿ- ಜಿ-ರಾಮ್ -ಜಿ) ಯೋಜನೆಯು ಸಂಪೂರ್ಣ ಗ್ರಾಮದ ಅಭಿವೃದ್ದಿ ಮತ್ತು ನಗರ ಪ್ರದೇಶಕ್ಕೆ ನೀಡಿರುವ ಸೌಲಭ್ಯಗಳು ಸಹ ಈ ಪ್ರದೇಶಗಳಿಗೆ ಲಬಿಸುತ್ತವೆ. ಇದೊಂದು ಮಹತ್ವದ ಯೋಜನೆಯಾಗಿದೆ ಎಂದು ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.


ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಬಿ.ಜಿ.ರಾಮ್.ಜಿ. ಉದ್ಯೋಗ ಖಾತರಿ ಕಾಯ್ದೆಯಲ್ಲಿನ ತಿದ್ದುಪಡಿಗೆ ಸಂಬಂಧಪಟ್ಟ ವಾಸ್ತವಿಕ ಅಂಶಗಳನ್ನು ತಿಳಿಯದೇ ಕಾಂಗ್ರೆಸ್ಸಿಗರು ಅರೋಪ ಮಾಡುತ್ತಿದ್ದಾರೆ. ಯೋಜನೆಗಳಲ್ಲಿನ ಪಾರದರ್ಶಕತೆ ಕಾಪಾಡಿಕೊಳ್ಳುವಲ್ಲಿ ಮತ್ತು ಯೋಜನೆಗಳ ಪರಿಣಾಮಕಾರಿ ಅನುμÁ್ಟನಕ್ಕೆ ಆಡಳಿತಾತ್ಮಕ ಹಿತದೃಷ್ಟಿಯಿಂದ ಕಾಲಕಾಲಕ್ಕೆ ಅಗತ್ಯ ಪರಿಷ್ಕರಣೆ ತರುವುದು ಮೊದಲಿನಿಂದಲೂ ನಡೆದ ಪದ್ದತಿ. ಅದೇ ರೀತಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ. ಸರ್ಕಾರ ನರೇಗಾ ಯೋಜನೆಯಲ್ಲಿದ್ದ ಹತ್ತಾರು ಲೋಪದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ನರೇಗಾಯೋಜನೆಗೆ ಜನೋಪಯೋಗಿ ತಿದ್ದುಪಡಿ ತಂದಿದೆ ಎಂದರು.


ಪ್ರಧಾನಿ ನರೇಂದ್ರ ಮೋದಿಯವರ ಹೊಸ ಕಲ್ಪನೆಯೊಂದಿಗೆ ಈ ಯೋಜನೆಗೆ ಡಿಸೆಂಬರ್ 2025ರಲ್ಲಿ ಸಂಸತ್ತಿನಲ್ಲಿ ಮಸೂದೆ ಮಂಡಿಸಿ ತಿದ್ದುಪಡಿ ತರಲಾಗಿದೆ. ಭಾರತದಲ್ಲಿ ಉದ್ಯೋಗ ಖಾತರಿಯ ಬಗ್ಗೆ ಇರುವ ಶಾಸನ ಇದೇ ಪ್ರಥಮ ಬಾರಿಗೆ ತಿದ್ದುಪಡಿಯಾಗಿಲ್ಲ ಪ್ರಥಮ ಬಾರಿಗೆ ಹೆಸರು ಬದಲಾಗಿಲ್ಲ- ಇವು ಹತ್ತಾರು ಮಜಲುಗಳಲ್ಲಿ ಬದಲಾಗಿದೆ. ಭಾರತದ ಕೂಲಿ ಉದ್ಯೋಗ ಉಪಕ್ರಮಗಳು ಹಲವು ಹಂತಗಳ ಮುಂದುವರೆದಿದೆ ಎಂದರು.


ಕಳೆದ ಎರಡು ದಶಕಗಳಿಂದ ಗ್ರಾಮೀಣ ಉದ್ಯೋಗವು ಭಾರತದ ಸಾಮಾಜಿಕ ರಕ್ಷಣಾ ಚೌಕಟ್ಟಿನ ಮೂಲಾಧಾರವಾಗಿ ಪರಿಣಮಿಸಿದೆ. 2005ರಲ್ಲಿ ಜಾರಿಗೆ ಬಂದಾಗಿನಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯು ಕೂಲಿ ಉದ್ಯೋಗವನ್ನು ಒದಗಿಸುವಲ್ಲಿ, ಗ್ರಾಮೀಣ ಆದಾಯವನ್ನು ಸ್ಥಿರಗೊಳಿಸುವಲ್ಲಿ ಮತ್ತು ಮೂಲಭೂತ ಸೌಕರ್ಯಗಳನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಆದಾಗ್ಯೂ ಕಾಲಾನಂತರದಲ್ಲಿ ಗ್ರಾಮೀಣ ಭಾರತದ ರಚನೆ ಮತ್ತು ಉದ್ದೇಶಗಳು ಗಣನೀಯವಾಗಿ ವಿಕಸನಗೊಂಡಿವೆ. ಹೆಚ್ಚುತ್ತಿರುವ ಆದಾಯ. ವಿಸ್ತರಿಸಿದ ಸಂಪರ್ಕ ಸೇವೆಗಳು, ವ್ಯಾಪಕವಾದ ಡಿಜಿಟಲ್ ನುಗ್ಗುವಿಕೆ ಮತ್ತು ವೈವಿದ್ಯಮಯ ಜೀವನೋಪಾಯಗಳು ಗ್ರಾಮೀಣ ಉದ್ಯೋಗದ ಅಗತ್ಯತೆಗಳ ಸ್ವರೂಪವನ್ನು ಬದಲಿಸಿವೆ. ಈ ಹಿನ್ನಲೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ. ಸರ್ಕಾರ ವಿಕಸಿತ ಭಾರತ -ಗ್ಯಾರಂಟಿ ಫಾರ್ ರೋಜಗಾರ್ ಆಂಡ್ ಅಜೀವಿಕ ಮಿಷನ್ (ಗ್ರಾಮೀಣ) ಮಸೂದೆ 2025ನ್ನು ಜಾರಿಗೆ ತಂದಿದೆ ಇದನ್ನು ವಿಕಸಿತ ಭಾರತ್ ಜಿ-ರಾಮ್.-ಜಿ ಮಸೂದೆ 2025 ಎಂದು ಕರೆಯಲಾಗಿದೆ. ಈ ಮಸೂದೆಯು ನರೇಗಾ ಯೋಜನೆಯ ಸಮಗ್ರ ಶಾಸನಬದ್ದ ಕೂಲಂಕುಷ ಬದಲಾವಣೆಯನ್ನು ಪತ್ರಿನಿಧಿಸುತ್ತದೆ. ಹೊಣೆಗಾರಿಕೆ, ಮೂಲಸೌಕರ್ಯ ಫಲಿತಾಂಶಗಳು ಮತ್ತು ಆದಾಯದ ಭದ್ರತೆಯನ್ನು ಬಲಪಡಿಸುವ ಜೊತೆಗೆ ಗ್ರಾಮೀಣ ಉದ್ಯೋಗಕ್ಕಾಗಿ ವಿಕಸಿತ ಭಾರತ2047ರ ದೀರ್ಘಕಾಲಿನ ದೃಷ್ಟಿಕೋನದಿಂದ ಈ ಯೋಜನೆಯನ್ನು ಸಂಯೋಜಿಸಲಾಗಿದೆ ಎಂದು ಸೋಮಣ್ಣ ತಿಳಿಸಿದರು.


ವಿಕಸಿತ ಭಾರತ್ ಜಿ ರಾಮ್ ಜಿ ಕಾಯ್ದೆಯ ದೃಷ್ಟಿಕೋನಗಳು ಹತ್ತಾರು ಜನಪರ ಕಲ್ಯಾಣವನ್ನು ಹೊಂದಿದೆ. ಈ ನಿಟ್ಟಿನಲ್ಲಿ ನರೇಂದ್ರ ಮೋದಿ ಸರ್ಕಾರ ಇದಕ್ಕೆ ಇನ್ನಷ್ಟು ಬಲ ತುಂಬಿದೆಯೆಂದು ತಿಳಿಸಿದರು. ವರ್ಧಿತ ಜೀವನೋಪಾಯದ ಭದ್ರತೆ ಖಚಿತಪಡಿಸುವುದು, ಬಾಳಿಕೆ ಬರುವ ಮತ್ತು ಉತ್ತಮ ಗುಣಮಟ್ಟದ ಗ್ರಾಮೀಣ ಸ್ವತ್ತುಗಳ ರಚನೆ, ತಂತ್ರಜ್ಞಾನ ಆಧಾರಿತ ಪಾರದರ್ಶಕತೆ ರಚನೆ, ಬ್ರμÁ್ಟಚಾರ ನಿರ್ಮೂಲನೆ, ಸಹಕಾರಿ ಒಕ್ಕೂಟದ ವ್ಯವಸ್ಥೆ ಬಲಪಡಿಸುವುದು, ರಾಷ್ಟ್ರೀಯ ಮೂಲಸೌಕರ್ಯ ಆದ್ಯತೆಗಳೊಂದಿಗೆ ಗ್ರಾಮ ಮಟ್ಟದಯೋಜನೆ ಸಂಯೋಜಿಸುವುದು. ಗ್ರಾಮೀಣ ಉದ್ಯೋಗ ನೀತಿಯನ್ನು ವಿಕಸಿತ ಭಾರತ್ 2047 ಮಾರ್ಗ ಸೂಚಿಯೊಂದಿಗೆ ಜೋಡಿಸುವುದು, ವಿಸ್ತ್ರತ ಉದ್ಯೋಗ ಖಾತರಿ, ಕೃಷಿ-ಸೂಕ್ಷ್ಮ ಉದ್ಯೋಗ ವೇಳಾಪಟ್ಟಿ, ಬಿತ್ತನೆ ಮತ್ತು ಕೊಯ್ಲಿನ ಕೃಷಿ ಚಟುವಟಿಕೆಯಲ್ಲಿ 60 ದಿನಗಳ ವಿರಾಮ ಘೋಷಿಸಲು ರಾಜ್ಯಗಳಿಗೆ ಅಧಿಕಾರ, ಜಲ ಸಂಭಂದಿತ ಕಾಮಗಾರಿಗಳು, ವಿ.ಬಿ. ಗ್ರಾಮ್ ಜಿ. ತಂತ್ರಜ್ಞಾನ, ಜಿಯೋ ರೇಪರೆನ್ಸಿಂಗ್, ಉಪಗ್ರಹ ಚಿತ್ರಣ ದೃಡೀಕರಣ. ಬಯೋ ಮೆಟ್ರಿಕ್, ಕಾಲಮೀತಿ ಪಾವತಿ, ವೇತನದ ಖಾತರಿ ವಿಶ್ವಾಸಾರ್ಹತೆ, ಹಣಕಾಸಿನ ಶಿಸ್ತು, ಕೇಂದ್ರ ರಾಜ್ಯಕ್ಕೆ ಹಂಚಿಕೆ ಆಧಾರ (60%/40%), ಆಡಳಿತ ಪಾರದರ್ಶಕತೆ, ಬಹು ಹಂತಗಳ ಮೇಲ್ವಿಚಾರಣೆ – ಇತ್ಯಾದಿ ಅನುಕೂಲತೆಯ ಬಗ್ಗೆ ಕೇಂದ್ರ ಸಚಿವ ವಿ. ಸೋಮಣ್ಣ ವಿವರಿಸಿದರು.


ಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ವಕ್ತಾರ ಮಹೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್. ನಿರಂಜನ್‍ಕುಮಾರ್, ಜೆಡಿಎಸ್ ಶಾಸಕ ಮಂಜುನಾಥ್, ಮಾಜಿ ಸಚಿವ ಎನ್. ಮಹೇಶ್, ಮಾಜಿ ವಿಧಾನ ಪರಿಷತ್ ಸದಸ್ಯ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ, ಮಾಜಿ ಶಾಸಕ ಎಸ್. ಬಾಲರಾಜು, ಕೇಂದ್ರ ಬರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ ಇತರರು ಇದ್ದರು. ಇದಕ್ಕೂ ಮೊದಲು ಕೇಂದ್ರ ಸಚಿವರಾದ ಬಳಿಕ ಪ್ರಥಮ ಬಾರಿಗೆ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ ವಿ. ಸೋಮಣ್ಣ ಅವರನ್ನು ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಅದ್ದೂರಿಯಾಗಿ ಸ್ವಾಗತ ಕೋರಿ ಬರ ಮಾಡಿಕೊಂಡರು.


ಮೈಸೂರಿನಿಂದ ತಿ. ನರಸೀಪುರ ಮಾರ್ಗವಾಗಿ ಚಾಮರಾಜನಗರಕ್ಕೆ ಆಗಮಿಸಿದ ಸಚಿವ ವಿ. ಸೋಮಣ್ಣ ಅವರನ್ನು ಸಂತೇಮರಹಳ್ಳಿ ಗ್ರಾಮದ ಸರ್ಕಲ್‍ನಲ್ಲಿ ಮುಖಂಡರು ಭಾರಿ ಗಾತ್ರದ ಹೂ ಹಾರ ಹಾಕಿ ಸ್ವಾಗತ ಕೋರಿದರು. ಅಲ್ಲಿಂದ ಯಡಿಯೂರು ಗೇಟ್ ಬಳಿ ಹಾಗೂ ಮಂಗಲ, ಯಡಿಯೂರು ಸರ್ಕಲ್, ಮಾದಾಪುರ, ದೊಡ್ಡರಾಯಪೇಟೆ ಕ್ರಾಸ್ ಬಳಿ ಅಮ್ಮನಪುರ ಮಲ್ಲೇಶ್, ಕೊತ್ತಲವಾಡಿ ಕುಮಾರ್, ನಟರಾಜು, ಹನುಮಂತಶೆಟ್ಟಿ, ಕೋಡಿಮೋಳೆ ರಾಜಶೇಖರ್, ಕೆರೆಹಳ್ಳಿ ಮಹದೇವಸ್ವಾಮಿ, ಅರಕಲವಾಡಿ ಮಹೇಶ್, ಶಂಭುಪಟೇಲ್ ಸೇರಿದಂತೆ ನೂರಾರು ಕಾರ್ಯಕರ್ತರು ಮುಖಂಡರು ಮುಖಂಡರು ಸಚಿವರಿಗೆ ಸ್ವಾಗತ ಕೋರಿದರು.


ಪಚ್ಚಪ್ಪ ವೃತ್ತದಲ್ಲಿ ಪುಷ್ಪ ವೃಷ್ಟಿ : ಕೇಂದ್ರದ ರೈಲ್ವೆ ಸಚಿವ ವಿ. ಸೋಮಣ್ಣ ಅವರ ಕಾರು ಭುನವೇಶ್ವರಿ ವೃತ್ತಕ್ಕೆ ಬರುತ್ತಿದ್ದಂತೆ ಬಿಜೆಪಿ ಮುಖಂಡರು ಪಟಾಕಿ ಸಿಡಿಸಿ, ಜಯಕಾರ ಕೂಗಿದರು. ನಂತರ ತೆರೆದ ಜೀಪಿನಲ್ಲಿ ಸೋಮಣ್ಣ ಅವರನ್ನು ನಿಲ್ಲಿಸಿ, ಜೆಸಿಬಿ ಮೂಲಕ ಹೂವುಗಳ ಮಳೆಗೈದರು. ನಂತರ ನೇರವಾಗಿ ಪತ್ರಕರ್ತರ ಭವನಕ್ಕೆ ವಿ. ಸೋಮಣ್ಣ ಪತ್ರಿಕಾಗೋಷ್ಠಿಗೆ ಆಗಮಿಸಿದರು.