
ಸಂಜೆವಾಣಿ ವಾರ್ತೆ
ಬಳ್ಳಾರಿ, ನ.17: ಇತ್ತೀಚಿಗೆ ಹಾಸನ ತಾಲೂಕಿನ ಮೊಸಳೆ ಹೊಸಳ್ಳಿ ಸರ್ಕಾರಿ ಕಾಲೇಜ್ ವಿದ್ಯಾರ್ಥಿಗಳು ಗಣೇಶ ವಿಸರ್ಜನೆ ನೋಡುವ ಸಂದರ್ಭದಲ್ಲಿ ನಡೆದ ಭೀಕರವಾದ ದುರ್ಘಟನೆಯಲ್ಲಿ ಬಳ್ಳಾರಿಯ ಅಂತಿಮ ವರ್ಷದ ಇಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯಾದ ಕೆ.
ಪ್ರವೀಣ್ ಕುಮಾರ್ ಮೃತ ಹೊಂದಿರುವ ವಿಷಯವನ್ನು ತಿಳಿದು ಬಳ್ಳಾರಿ ಗ್ರಾಮಾಂತರ ಶಾಸಕರಾದ ಬಿ. ನಾಗೇಂದ್ರರವರ ಸೂಚನೆಯ ಮೇರೆಗೆ ಅವರ ಆಪ್ತರು ನೊಂದವರ ಕುಟುಂಬಕ್ಕೆ ತೆರಳಿ ಸಾಂತ್ವಾನವನ್ನು ತಿಳಿಸಿ,ಸರ್ಕಾರವು ಮತ್ತು ಶಾಸಕರು ತಮ್ಮ ಕಷ್ಟಕ್ಕೆ ಇರುವುದಾಗಿ ಧೈರ್ಯವನ್ನು ತುಂಬಿದ್ದರು, ಅದರಂತೆ ಸರ್ಕಾರದಿಂದ ಶಾಸಕರು ತ್ವರಿತವಾಗಿ ಪರಿಹಾರವನ್ನು ಈಗಾಗಲೇ ನೊಂದ ಕುಟುಂಬಕ್ಕೆ ಒದಗಿಸಿ ಕೊಟ್ಟಿದ್ದಾರೆ.
ಇಂದು ಮಾಜಿ ಸಚಿವರಾದ ಹಾಗೂ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಶಾಸಕರಾದ ಮಾನ್ಯ ಬಿ. ನಾಗೇಂದ್ರರವರ ಸೂಚನೆಯ ಮೇರೆಗೆ ಮಹಾನಗರ ಪಾಲಿಕೆ ಸದಸ್ಯರು ಮತ್ತು ಕಾಂಗ್ರೆಸ್ ಮುಖಂಡರುಗಳು ನೊಂದ ಬಡ ಕುಟುಂಬದವರ ಮನೆಗೆ ತೆರಳಿ ಕಷ್ಟ ಸುಖಗಳ ವಿಚಾರಿಸಿ ಮೃತಪಟ್ಟ ವಿದ್ಯಾರ್ಥಿಯ ತಾಯಿಯಾದ ಕೆ. ಸುಶೀಲಮ್ಮನವರಿಗೆ ಬಳ್ಳಾರಿ ಗ್ರಾಮಾಂತರ ಶಾಸಕರಾದ ಬಿ. ನಾಗೇಂದ್ರ ರವರು ನೀಡಿರುವ ಒಂದು ಲಕ್ಷ ರೂಪಾಯಿ ಹಣವನ್ನು ಅವರು ಕುಟುಂಬಕ್ಕೆ ಆರ್ಥಿಕ ಸಹಾಯವನ್ನು ಮಾಡಿದರು.
ಈ ಸಂದರ್ಭದಲ್ಲಿ ಮಹಾ ನಗರ ಪಾಲಿಕೆ ಸದಸ್ಯರುಗಳಾದ ನಾಗಲಕರೆ ಗೋವಿಂದು, ಪಿ.ಜಗನ್ನಾಥ್, ಪಾಲಿಕೆ ಸದಸ್ಯರಾದ ರೇಡಿಯೋ ಪಾರ್ಕ್ ಬಿ.ಸೋಮು ಮಾಜಿ ಉಪ ಮಹಾಪೌರರಾದ ಬೆಣಕಲ್ ಬಸವರಾಜ ಗೌಡ, ಮಾಜಿ ಮಹಾ ನಗರ ಪಾಲಿಕೆ ಸದಸ್ಯರ ಅಕ್ಬರ್, ಜಿಲ್ಲಾ ಕುರುಬ ಸಂಘದ ಪ್ರಧಾನ ಕಾರ್ಯದರ್ಶಿಯಾದ ಕೆ. ಮೋಹನ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಸಂಗನಕಲ್ ವಿಜಯಕುಮಾರ್, ಗ್ರಾಮ ಪಂಚಾಯತಿ ಸದಸ್ಯರಾದ ಜೋಗಿನ ವಿಜಯಕುಮಾರ್ ಕಾಂಗ್ರೆಸ್ ಮುಖಂಡರಾದ ಎ.ಕೆ. ಗಂಗಾಧರ ಜೋಗಿನ ಚಂದ್ರಪ್ಪ ಸಾಮಾಜಿಕ ಜಾಲತಾಣದ ಕನಕ ಪ್ರಕಾಶ್, ಹಾಗೂ ನೊಂದ ಕುಟುಂಬದ ಸಂಬಂಧಿಕರು ಉಪಸ್ಥಿತರಿದ್ದರು.

























