Home ಜಿಲ್ಲೆ ಬಂಡಿಹಟ್ಟಿಯಲ್ಲಿ ಕೊಲೆಗೆ ಯತ್ನ ಇಬ್ಬರ ಬಂಧನ

ಬಂಡಿಹಟ್ಟಿಯಲ್ಲಿ ಕೊಲೆಗೆ ಯತ್ನ ಇಬ್ಬರ ಬಂಧನ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಫೆ.21:  ನಗರದ ಬಂಡಿಹಟ್ಟಿಯ ಸಿಎಂಸಿ  ಕಾಲೋನಿಯಲ್ಲಿ ನಿನ್ನೆ ಸಂಜೆ ಇಬ್ಬರು ಯುವಕರು ಮತ್ತೋರ್ವ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆಗೆ ಯತ್ನ ನಡೆದಿರುವ ಘಟನೆ ನಡೆದಿದೆ.

ಬಂಡಿಹಟ್ಟಿಯ ನಿವಾಸಿ ರೇವಣ ಸಿದ್ದಪ್ಪ( 35 ) ಇವರ ಮನೆಯ ಬೇಸ್ಮೆಂಟ್ ಜಾಗದಲ್ಲಿ  ಶಿವು ಮತ್ತು ಆನಂದ್ ಎಂಬುವವರು  ಇದ್ದಾಗ, ಅದನ್ನು ಪ್ರಶ್ನಿಸಿದ ರೇವಣ ಸಿದ್ದಪ್ಪ ಇವರ ಮೇಲೆ ಕಲ್ಲುಗಳಿಂದ ತಲೆಗೆ ಹೊಡೆದು ಕೊಲೆ ಪ್ರಯತ್ನ ಮಾಡಿರುತ್ತಾರೆ ಎಂದು ಕೌಲ್ ಬಜಾರ್ ಠಾಣೆಗೆ ದೂರು ನೀಡಲಾಗಿದ್ದು  ಶಿವು ಹಾಗೂ ಆನಂದ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆಯಂತೆ.ಆರೋಪಿಗಳು ಗಾಂಜಾ ಸೇವಿಸಿದ್ದರೆಂಬ ಆರೋಪ ಇದೆ.