ಬಂಗಾಳಕ್ಕೆ ಸೈಬೀರಿಯನ್ ಹುಲಿ

ಕೋಲ್ಕತ್ತಾ,ನ.8-ಈ ಕಾಡು ಪ್ರಪಂಚವು ಅನೇಕ ಅದ್ಭುತ ಘಟನೆಗಳಿಗೆ ನೆಲೆಯಾಗಿದೆ, ಕೆಲವೊಮ್ಮೆ ಅಚ್ಚರಿ ಮತ್ತು ಕೆಲವೊಮ್ಮೆ ಕೂತೂಹಲ ನೀಡುತ್ತದೆ. ನೀವು ಹುಲಿಗಳನ್ನು ನೋಡಿರಬಹುದು, ಆದರೆ ಭಾರತೀಯ ಹುಲಿ ಮತ್ತು ಸೈಬೀರಿಯನ್ ಹುಲಿಯ ನಡುವಿನ ವ್ಯತ್ಯಾಸ ತಿಳಿದಿದೆಯೇ? ಈ ವಿಷಯದ ಕುರಿತು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು , ವೀಕ್ಷಕರನ್ನು ದಿಗ್ಭ್ರಮೆಗೊಳಿಸಿದೆ.

ಈ ವೀಡಿಯೊದಲ್ಲಿ ಸೈಬೀರಿಯನ್ ಹುಲಿ ಬಂಗಾಳ ಹುಲಿಯ ಆವರಣಕ್ಕೆ ಪ್ರವೇಶಿಸುವುದನ್ನು ಚಿತ್ರಿಸಲಾಗಿದೆ, ವೀಡಿಯೊದಲ್ಲಿ, ಕಣ್ಸೆಳೆಯುವ ಸೈಬೀರಿಯನ್ ಹುಲಿ ನಿಧಾನವಾಗಿ ದೊಡ್ಡ ದೇಹ ಮತ್ತು ಅಪಾರ ಬಲದೊಂದಿಗೆ ರಾಜಗಾಂಭೀರ್ಯದಿಂದ ಹೆಜ್ಜೆ ಇಟ್ಟು ಬಂದ ದೃಶ್ಯ ನೋಡಿದರೆ ಅಲ್ಲಿರುವ ಉಳಿದ ಹುಲಿಗಳು ಒಂದುಕ್ಷಣ ನಡುಗಿವೆ. ಸೈಬೀರಿಯನ್ ಹುಲಿ ಪ್ರವೇಶಿಸುವಾಗ ಬಂಗಾಳ ಹುಲಿಗಳು ತಮ್ಮ ಆವರಣದಲ್ಲಿ ಆಟವಾಡುವುದನ್ನು ಕಾಣಬಹುದು. ಬೃಹತ್ ಸೈಬೀರಿಯನ್ ಹುಲಿ ಪ್ರವೇಶಿಸುತ್ತಿದ್ದಂತೆ, ಬಂಗಾಳ ಹುಲಿಗಳ ಸ್ಥಾನಗಳು ಬದಲಾಗುತ್ತವೆ. ಕೆಲವು ಹಿಮ್ಮೆಟ್ಟುತ್ತವೆ, ಆದರೆ ಇನ್ನು ಕೆಲವು ತಮ್ಮ ಶಕ್ತಿಯನ್ನು ಪ್ರದರ್ಶಿಸಲು ಪ್ರಯತ್ನಿಸುತ್ತವೆ, ಆದರೆ ಸೈಬೀರಿಯನ್ ಹುಲಿ ಶಕ್ತಿಯ ಮುಂದೆ ಬಂಗಾಳ ಹುಲಿ ಸೈಬೀರಿಯನ್ ಹುಲಿಗೆ ಶರಣಾಗುತ್ತದೆ.ಒಬ್ಬ ರಾಜನ ಆಸ್ಥಾನಕ್ಕೆ ಇನ್ನೊಬ್ಬ ರಾಜ ಪ್ರವೇಶಿಸಿದಂತೆ ಭಾಸವಾಗುತ್ತದೆ.
ಬಂಗಾಳ ಹುಲಿಗಳ ನಡುವೆ ಸೈಬೀರಿಯನ್ ಹುಲಿಗಳು ಬರುತ್ತವೆ ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್‍ನಲ್ಲಿ @Sheeಣಚಿಟ2242 ಅವರು ಹಂಚಿಕೊಂಡಿದ್ದು, ಸೈಬೀರಿಯನ್ ಹುಲಿ ಬಂಗಾಳ ಹುಲಿ ಆವರಣಕ್ಕೆ ಪ್ರವೇಶಿಸಿದಾಗ, ಗದ್ದಲ ನೋಡಲು ಯೋಗ್ಯವಾಗಿತ್ತು. ಸೈಬೀರಿಯನ್ ಹುಲಿಯ ಮುಂದೆ ಬಂಗಾಳ ಹುಲಿಗಳು ಹುಮರಿಗಳಂತೆ ಗೋಚರಿಸುತ್ತಿದ್ದವು ಎಂದು ಬರೆದಿದ್ದಾರೆ.


34 ಸೆಕೆಂಡುಗಳ ಈ ವೀಡಿಯೊವನ್ನು 129,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದ್ದು, ನೂರಾರು ಜನರು ಇದನ್ನು ಇಷ್ಟಪಟ್ಟಿದ್ದಾರೆ ಮತ್ತು ವಿವಿಧ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕೆಲವರು, ಇದು ಚಲನಚಿತ್ರದ ದೃಶ್ಯದಂತೆ ಕಾಣುತ್ತದೆ, ಇದು ಪ್ರಕೃತಿಯ ನಿಜವಾದ ಶಕ್ತಿ ಎಂದು ಹೇಳಿದರೆ, ಇನ್ನು ಕೆಲವರು, ಎರಡು ಹುಲಿಗಳ ಭೇಟಿಯು ಇಬ್ಬರು ಮಹಾನ್ ಯೋಧರು ಮುಖಾಮುಖಿಯಾಗಿರುವಂತೆ ಎಂದು ಬಣ್ಣಿಸಿದ್ದಾರೆ. ಕೆಲವರು ಸೈಬೀರಿಯನ್ ಹುಲಿಗಳು ಬಂಗಾಳ ಹುಲಿಗಳಿಗಿಂತ ಗಾತ್ರದಲ್ಲಿ ದೊಡ್ಡದಾಗಿವೆ ಎಂದು ವ್ಯತ್ಯಾಸ ತೋರಿಸಿದ್ದಾರೆ.