ಫೈರಿಂಗ ಘಟನಾ ಸ್ಥಳ ಪರಿಶೀಲನೆ ಮಾಡಿದ ನೂತನ ಡಿಐಜಿಪಿ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಜ.08: ನಗರದ ಸಿರುಗುಪ್ಪ ರಸ್ತೆಯ ಜನಾರ್ಧನರೆಡ್ಡಿ ಮನೆ ಮುಂದೆ ಜ.1 ರಂದು ನಡೆದ ಬ್ಯಾನರ್ ಗಲಾಟೆ, ಫೈರಿಂಗ್ ಪ್ರಕರಣದ ಸ್ಥಳಕ್ಕೆ ಹೊಸದಾಗಿ ಆಗಮಿಸಿರುವ ಬಳ್ಳಾರಿ ವಲಯದ ಡಿಐಜಿಪಿ ಡಾ.ಪಿ.ಎಸ್. ಹರ್ಷ ಅವರು ನಿನ್ನೆ ಅಧಿಕಾರ ಸ್ವೀಕತಿಸದ ತಕ್ಷಣ ಸಿಬ್ವಂದಿಯೊಂದಿಗೆ ಆಗಮಿಸಿ ಪರೊಶೀಲನೆ ನಡೆಸಿ ಮಾಹಿತಿ ಪಡೆದರು.

ನಗರ ಡಿವೈಎಸ್ಪಿ ಚಂದ್ರಕಾಂತ್ ನಂದರೆಡ್ಡಿ, ಪ್ರಕರಣಗಳ ತನಿಕಾಧಿಕಾರಿಗಳು ಘಟನೆ ನಡೆದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.