Home ಜಿಲ್ಲೆ ಮಂಗಳೂರು ಫಿಲೋಮಿನಾ ಕಾಲೇಜಿಗೆ ಪ್ರತಿಷ್ಠೆಯ ಗರಿ ವಿದುಷಿ ವಿಂದ್ಯಾಶ್ರೀಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಫಿಲೋಮಿನಾ ಕಾಲೇಜಿಗೆ ಪ್ರತಿಷ್ಠೆಯ ಗರಿ ವಿದುಷಿ ವಿಂದ್ಯಾಶ್ರೀಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಪುತ್ತೂರು; ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿನಿ ವಿದುಷಿ ವಿಂದ್ಯಾಶ್ರೀ ರೈ ಅವರಿಗೆ ದಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಪುರಸ್ಕಾರ ದೊರೆತಿರುವುದು ಕಾಲೇಜಿನ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ.
ಕಾಲೇಜಿನ ಸಂಚಾಲಕರಾದ ಅತೀ ವಂ. ಡಾ.ಜಾನ್ ಬಿ ಸಲ್ದಾನ, ಪ್ರಾಂಶುಪಾಲರಾದ ವಂ.ಡಾ.ಆಂಟನಿ ಪ್ರಕಾಶ್ ಮೊಂತೆರೊ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಅಭಿನಂದನೆಯ ಮಹಾಪೂರವೇ ಹರಿದುಬಂದಿದೆ. ಕಳೆದ ೧೪ ವರ್ಷಗಳಿಂದ ವಿವಿಧ ವೇದಿಕೆಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡುತ್ತಿರುವ ವಿಂದ್ಯಾಶ್ರೀ ರೈ ನೃತ್ಯ ನಿರ್ದೇಶನ ಮತ್ತು ತರಬೇತಿ ನೀಡುವ ಮೂಲಕ ಕಲಾಕ್ಷೇತ್ರಕ್ಕೆ ತಮ್ಮ ಕೊಡುಗೆ ನೀಡುತ್ತಾ ಬಂದಿದ್ದಾರೆ. ಇದರ ಜತೆಗೆ ಅಭಿನಯರಂಗ, ಸಂಗೀತ ಹಾಗೂ ನಿರೂಪಣಾ ಕ್ಷೇತ್ರದಲ್ಲಿಯೂ ಸಾಧನೆ ಮಾಡಿದ್ದಾರೆ.
ಎಳೆಯ ಪ್ರಾಯದಲ್ಲಿಯೇ ತನ್ನ ಕಲಾ ಪ್ರೌಢಿಮೆ ಮೆರೆದಿರುವ ವಿಂದ್ಯಾಶ್ರೀ ಅವರಿಗೆ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಮಂಗಳೂರಿನ ನೆಹರುಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.