
ಬಳ್ಳಾರಿ, ಫೆ.13:- ವಿಜಯನಗರ ಸಾಮ್ರಾಜ್ಯದ ಇತಿಹಾಸದಲ್ಲಿ ಉನ್ನತವಾದ ಆಡಳಿತ ನೀಡಿದ ಪ್ರೌಡದೇವರಾಯನ ಕುರಿತು ಹೆಚ್ಚಿನದಾಗಿ ಬೆಳಕು ಚೆಲ್ಲಿರಲಿಲ್ಲ. ಆತನ ಕೊಡುಗೆಯನ್ನು ಮರೆಯಲಾಗಿದೆ ಎಂದು ಹಂಪಿ ಕನ್ನಡ ವಿವಿಯ ಪ್ರಾಧ್ಯಾಪಕ ಡಾ.ಎಂ.ಎಂ ಶಿವಪ್ರಕಾಶ್ ಹೇಳಿದರು.
ಅವರು ಇಂದು ಹಂಪಿ ಉತ್ಸವದ ಅಂಗವಾಗಿ ವಿರೂಪಾಕ್ಷ ದೇವಸ್ಥಾನದ ಆವರಣದಲ್ಲಿನ ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ನಡೆದ ವಿಚಾರಸಂಕಿರಣದಲ್ಲಿ ಮಾತನಾಡಿದರು. ವಚನ ಸಾಹಿತ್ಯದ ಸಂಗ್ರಹ, ಚಾಮರಸನ ಪ್ರಭುಲಿಂಗಲೀಲೆ ಮೊದಕಾದ ಸಾಹಿತ್ಯ ರಚನೆಯ ಮೂಲಕ ಪ್ರೌಡದೇವರಾಯ ಆಡಳಿತದಲ್ಲಿ ವೀರಶೈವ ಸಾಹಿತ್ಯಕ್ಕೆ ಹೆಚ್ಚನ ಪೆÇ್ರೀತ್ಸಾಹ ದೊರೆತಿತ್ತು. ಡಾ. ಡಿ. ಪರಮ ಶಿವಮೂರ್ತಿ ಅವರು 220 ಶಾಸನಗಳನ್ನು ಸಂಶೋಧನೆ ಮಾಡಿ. ಪ್ರೌಡದೇವರಾಯನ ಆಡಳಿತದ ಇತಿಹಾಸದ ಮೇಲೆ ಬೆಳಕು ಚೆಲ್ಲಿದ್ದಾರೆಂದರು.
ಡಾ.ವೆಂಕನಗೌಡ ಪಾಟೀಲ್, ಅಕ್ಕನಾಗಮ್ಮ ಟಿ.ಹೆಚ್.ಎಂ,. ಶರಣಯ್ಯ ಚರೇದ ಮೊದಲಾದವರು ವಿಜಯನಗರ ಸಾಮ್ರಾಜ್ಯದ ಕುರಿತು ವಿಷಯ ಮಂಡಿಸಿದರು
ಹಂಪಿ ಕನ್ನಡ ವಿವಿಯ ಕುಲಪತಿ ಡಾ.ಡಿ.ಪರಮ ಶಿವಮೂರ್ತಿ ಅವರು ವಿಚಾರ ಸಂಕಿರಣ ಉದ್ಘಾಟನೆ ಮಾಡಿದರು.
ಎರಡು ರೂ ಕೊಡಬೇಕು: ಹಂಪಿ ಉತ್ಸವ ನೋಡಲು ಬರುವವರಿಗೆ ಉಚಿತ ಬಸ್ ವ್ಯವಸ್ಥೆ ಮಾಡಿದೆ ಉತ್ಸವ ಸಮಿತಿ. ಆದರೆ ವಿರೂಪಾಕ್ಷ ದೇವಸ್ಥಾನದ ಆವರಣದಲ್ಲಿನ ವಿರೂಪಾಕ್ಷೇಶ್ವರ ವೇದಿಕೆಯ ಕಾರ್ಯಕ್ರಮಗಳನ್ನು ನೋಡಬೇಕು. ಇಲ್ಲ ವೀಕ್ಷಿಸಬೇಕು ಎಂದರೆ ಪ್ರವಾಸಿಗ ಎರಡು ರೂ ನೀಡಬೇಕಿದೆ. ಏಕೆಂದರೆ ಇಲ್ಲಿಗೆ ಬರಲು ಜನರು ಚಪ್ಪಲಿ ಹಾಕಿಕೊಂಡು ಬರುವಂತಿಲ್ಲ. ಅದಕ್ಕಾಗಿ ಚಪ್ಪಲಿ ಬಿಟ್ಟು ಬರಬೇಕೆಂದರೆ ಪ್ರತಿಯೊಬ್ವರೂ ಎರೆಡು ರೂ ನೀಡಬೇಕಿದೆ. ಇಂತಹ ವ್ಯವಸ್ಥೆ ಇದೇ ಮೊದಲು.ಈ ವರಗೆ ಹೀಗಿರಲಿಲ್ಲ.
ದೇವಸ್ಥಾನದ ಆವರಣಕ್ಕೆ ಚಪ್ಪಲಿ ಹಾಕಿಕೊಂಡು ಬರಬಾರದು ಎನ್ನುವುದು ಸರಿಯಾದರೆ. ವೇದಿಕೆಯನ್ನು ಹೊರಗೆ ಮಾಡಬೇಕಿತ್ತು. ಇಲ್ಲಾ ಉತ್ಸವದ ಮೂರು ದಿನಗಳ ಕಾಲ ಚಪ್ಪಲಿಯನ್ನು ಉಚಿತವಾಗಿ ಇಟ್ಟು ಕೊಳ್ಳುವ ವ್ಯವಸ್ಥೆ ಮಾಡಬೇಕಿತ್ತು.






























