
ಸಂಜೆವಾಣಿ ವಾರ್ತೆ
ಸಿರಿಗೇರಿ ಮೇ.31. ಸಿರುಗುಪ್ಪ ತಾಲೂಕು ಸಿರಿಗೇರಿ ಗ್ರಾಮದ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ, ಮುಂದೆ ನಡೆಯಲಿರುವ ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸಲು, ಹೊಸ ಸದಸ್ಯರಿಗೆ ಅವಕಾಶ ನೀಡಬಾರದು ಎಂದು ರೈತ ಸದಸ್ಯರು ಮತ್ತು ಮುಖಂಡರು ಇಂದು ಮನವಿ ಪತ್ರ ಸಲ್ಲಿಸಿದರು. ಸಲ್ಲಿಸಿದ ಮನವಿಯಲ್ಲಿ ಕೆಲವರು ಸಂಘಕ್ಕೆ ನಿರ್ದೇಶಕರಾಗಬೇಕೆಂದು, ಅಧ್ಯಕ್ಷರಾಗಬೇಕೆಂದು, ಈಗ ಹೊಸದಾಗಿ ಸಂಘದಲ್ಲಿ ಸದಸ್ಯತ್ವವನ್ನು ನೋಂದಾಯಿಸಿಕೊಂಡು ಚುನಾವಣೆ ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ. ಸಂಘದ ಚುನಾವಣೆಯನ್ನು ಯಥಾ ಪ್ರಕಾರ ಹಿಂದೆ ಇದ್ದ ಸದಸ್ಯರ ಪಟ್ಟಿಯಿಂದ ಮಾತ್ರ ಮತದಾನಕ್ಕೆ ಅವಕಾಶ ನೀಡುವುದು. ಮತ್ತು ಸ್ಪರ್ಧೆಗೆ ಅವಕಾಶ ನೀಡುವ ಪದ್ಧತಿ ಮುಂದುವರಿಸಬೇಕೆಂದು, ಒಂದುವೇಳೆ ಹೊಸ ಸದಸ್ಯರು ಸ್ಪರ್ಧಿಸುವುದು, ಮತದಾನ ಮಾಡುವುದು ಕಂಡು ಬಂದರೆ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ. ಮನವಿ ಪತ್ರ ಸ್ವೀಕರಿಸಿದ ಸಂಘದ ಮೇಲ್ವಿಚಾರಕ ಸುರೇಶ್ ಪ್ರತಿಕ್ರಯಿಸಿ, ಮನವಿ ಪತ್ರವನ್ನು ಸಂಘದ ಪ್ರಭಾರಿ ಮುಖ್ಯ ಕಾರ್ಯನಿರ್ವಾಹಕರಿಗೆ ಮತ್ತು ತಾಲೂಕು ಆಡಳಿತ ಅಧಿಕಾರಿಗಳ ಗಮನಕ್ಕೆ ನೀಡಲಾಗುವುದು ಎಂದು ತಿಳಿಸಿದರು. ರೈತ ಸದಸ್ಯರು ಮತ್ತು ಮುಖಂಡರಾದ ಎಸ್ಎಂ.ಅಡಿವೆಯ್ಯಸ್ವಾಮಿ, ಡ್ರೈವರ್ ಹುಲುಗಪ್ಪ, ಬಿಚಗತ್ತಿ ಮಲ್ಲಯ್ಯನಾಯಕ, ರಾರಾವಿ ವೆಂಕಟೇಶ, ಕಲ್ಗುಡಿ ಮುದಿಯಪ್ಪ, ಕಡ್ಡಿಪುಡಿ ಶಿವಪ್ಪ, ವಿ.ರಮೇಶ, ಆಟೋ ತಿಮ್ಮಯ್ಯ, ಮಾಸ್ತಿದಾನಪ್ಪ, ದೊಡ್ಡಬಸಪ್ಪ, ಕೆ.ಗಾದಿಲಿಂಗಪ್ಪ, ವೀರೇಶ, ಟಿ.ವೀರಬಸಪ್ಪ, ಆರುಮುಗಮ್ ಇತರರು ಇದ್ದರು.