ಪ್ರವಾದಿ ಪೈಗಂಬರರ ಈದ್ ಮಿಲಾದ್ ಆಚರಣೆ

ಸಂಜೆವಾಣಿ ವಾರ್ತೆ
ಹುಣಸೂರು, ಸೆ. 24-
ಪ್ರವಾದಿ ಮಹಮ್ಮದ್ ಪೈಗಂಬರ ಈದ್-ಮಿಲಾದ್ ಉನಬೀ ಆಚರಿಸುತ್ತಿರುವುದು ಬಹಳ ಸಂತೋಷದ ವಿಷಯ ಎಂದು ಜಾಮೀಯಾ ಟಿಪ್ಪು ಮಸೀದಿಯ ಗುರುಗಳಾದ ಮುಫ್ತಿ ಸಜ್ಜಾದ್ ಹುಸೇನ್ ಖಾನ್ ತಿಳಿಸಿದರು.


ನಗರದ ಮುಸ್ಲಿಂ ಬ್ಲಾಕ್ ಬೀಬಿ ಆಯಿಷಾ ಕಮಿಟಿ ವತಿಯಂದ ಏರ್ಪಡಿಸಲಾಗಿದ್ದ ಮೀಲಾದ್ ಉನ್ ನಬೀ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಹಳ ವರ್ಷಗಳಿಂದ ಈ ಮಹಿಳಾ ತಂಡ ಅದ್ದೂರಿಯಾಗಿ ಮೀಲಾದ್ ಉನ್ ನಬೀ ನೆರವೇರಿಸಿಕೊಂಡು ಬರುತ್ತಿದ್ದಾರೆ, ಪ್ರವಾದಿ ಮಹಮ್ಮದ್ ಪೈಗಂಬರ್ ಈದ್-ಮಿಲಾದ್ ಉನ್ ನಬೀರವರ ಬಗ್ಗೆ ಪ್ರವಚನ ಪ್ರತಿ ಒಬ್ಬರು ಕೇಳಲೆಬೇಕು ಎಂದರು.


ಈ ಸಂದರ್ಭದಲ್ಲಿ ಜಾಮೀಯಾ ಮಸೀದಿಯ ಹಿರಿಯ ಗುರುಗಳಾದ ಶಾಹಲಂ, ಕಿರಿಯ ಗುರುಗಳಾದ ಖಾಯಾಮುದ್ದೀನ್, ಇಮ್ರಾನ್ ರಹೀಮ್, ವಸೀಮ್ ಸಾದಿ, ಇಸ್ತೇಖಾರ್ ಅಹಮದ್, ಮಹಮ್ಮದ್ ರಫೀ ರಜಾರ, ಆಝಮ್ ಅಂಜದ್ ಷರೀಫ್, ನಗರಸಭೆ ಅಧ್ಯಕ್ಷ ಮಲಿಕ್ ಪಾಷ, ಜಾಮೀಯಾ ಮಸೀದಿ ಅಧ್ಯಕ್ಷರಾದ ಹಜರತ್ ಜಾನ್, ಉಪಾಧ್ಯಕ್ಷ ಅಮರ್, ಸದಸ್ಯರಾದ ಬಷೀರ್ ಅಹಮದ್, ಅಜ್ಮಲ್, ಮುಖಂಡರುಗಳಾದ ಸೈಯದ್ ರಿಜ್ವಾನ್, ಶಿರಾಜ್ ಪಾಷ, ಮಹಮ್ಮದ್ ಫೈಸಲ್ ಷಾ, ಇನಾಯತುಲ್ಲಾಖಾನ್, ಖಲೀಲ್, ಜಾವೀದ್ ಇನ್ನಿತರು ಹಾಜರಿದ್ದರು.