ಪ್ರತಾಪ್ ರೆಡ್ಡಿಯ ದೌಜರ್ನ್ಯ ನಿಲ್ಲಿಸಿನಮಗೆ ನ್ಯಾಯ ಒದಗಿಸಿ: ಭೂಸಂತ್ರಸ್ಥರು

Oplus_19005440


* ಪ್ರತಾಪ್ ರೆಡ್ಡಿಯ ಎಲ್ಲಾ ಆಸ್ತಿ ಸಿಬಿಐ ತನಿಖೆಗೆ ನೀಡಲಿ.
* ನ್ಯಾಯ ಸಿಗುವವರೆಗೆ ಡಿಸಿ ಕಚೇರಿ ಮುಂದೆ ಧರಣಿ
* ದಾಖಲೆಗಳ ಅಸಲಿ ಪರಿಶೀಲನೆಯಾಗಲಿ
* ಸಿಬಿಐ ಇಲ್ಲಾ ನ್ಯಾಯಾಂಗ ತನಿಖೆಯಾಗಲಿ
ಸಂಜೆವಾಣಿ ವಾರ್ತೆ
ಬಳ್ಳಾರಿ, ಜ.16:
ಇಲ್ಲಿನ ಬಳ್ಳಾರಿ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಾರಾ ಪ್ರತಾಪರೆಡ್ಡಿಯವರ ಭೂ ಹಗರಣಗಳ ಬಗ್ಗೆ ನ್ಯಾಯಂಗ ವಿಚಾರಣೆ ನಡೆಸುಬೇಕೆಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಆಗ್ರಹಿಸಿದೆ.
ಸಮಿತಿಯ ಮುಖಂಡ ಕುಮಾರ್ ಸಮತಳ, ಕರಿಯಪ್ಪ ಗುಡಿಮನಿ. ಬಂಡಿಹಟ್ಟಿ ಮೋಹನ್, ವಸಂತ್ ರಾಜ್ ಕಹಳೆ ಮೊದಲಾದವರು. ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ. ಪ್ರತಾಪ್ ರೆಡ್ಡಿ ಅವರು ಅನೇಕ ಭೂಹಗರಣ ನಡೆಸಿದ್ದಾರೆ.  ಸರ್ಕಾರ ಎಲ್ಲಾ ದಾಖಲೆಗಳನ್ನು ತನಿಖೆ ಮಾಡಲು  ಆದೇಶ ಮಾಡಿ ಯಾವು ಕಾನೂನು ಬಾಹಿರ ದಾಖಲೆಗಳು ಮತ್ತು ಯಾವು ಒರಿಜಿನಲ್ ದಾಖಲೆಗಳು ಎಂಬುದರ ಬಗ್ಗೆ  ವರದಿ ನೀಡ,  ಉಚ್ಚ ನ್ಯಾಯಾಲಯದ ನ್ಯಾಯಧೀಶರು ಅಥವಾ ಸಿ.ಬಿ.ಐ ತನಿಖೆಗೆ ನೀಡಬೇಕೆಂದು ಒತ್ತಾಯಿಸಿದರು.
ಬಳ್ಳಾರಿ ನಗರಕ್ಕೆ ಹೊಂದಿಕೊಂಡಂತೆ ಇರುವ ಹಾಲದಹಳ್ಳಿ ಭೂಮಿಯನ್ನು ಕೌಲ್‌ಬಜಾರಿನ ದಾನಪ್ಪ ಬೀದಿ ಮತ್ತು ಬಂಡಿಹಟ್ಟಿ ಪ್ರದೇಶದ ಬಡ ಜನರಿಗೆ 1970 ರ ದಶಕದಲ್ಲಿ ಆರ್.ಎಸ್. 715ಎ ಸರ್ವೆ ನಂಬರ್‌ ನ 1080 ಎಕರೆ ಇನಾಂ ಭೂಮಿಯಲ್ಲಿ 134 ಎಕರೆ ಭೂಮಿಯನ್ನು 17 ಕುಟುಂಬಗಳಿಗೆ ಆಗಿನ ಭೂ ನ್ಯಾಯ ಮಂಡಳಿ ಹಂಚಿಕ ಮಾಡಿತ್ತು.


ಈ ಭೂಮಿಯು ಇದಕ್ಕೂ ಮೊದಲು ದಿವಂಗತ ರಾಜರಾಜೇಶ್ವರಿಶಾಸ್ತ್ರಿ ಮತ್ತು ಇವರ ಮಗ ಬ್ರಹ್ಮಶಾಸ್ತ್ರಿ ಇವರಿಗೆ ಸೇರಿದ ಇನಾಂ ಭೂಮಿಯಾಗಿತ್ತು.
ಸರ್ಕಾರದ ಇನಾಂ ಭೂಮಿ ರದ್ದತಿ ಕಾನೂನು ಜಾರಿಯಾದ ನಂತರ ಇದೇ ಇನಾಂ ಭೂಮಿಯಲ್ಲಿ 7 ಎಸ್.ಸಿ, 4 ಕುರುಬ, ಮಡಿವಾಳ ಸಮುದಾಯದ 5. ಕ ಹಾಗೂ ಈಡಿಗರ 3 ಕುಟುಂಬಕ್ಕೆ ಭೂ ನ್ಯಾಯ ಮಂಡಳಿಯು ಫಾರಂ ನಂ. 10 ನೀಡಿದಲ್ಲದೆ. ಫಲಾನುಭವಿಗಳ ಹೆಸರಿಗೆ ಹಕ್ಕು ಬದಲಾಯಿಸಿತ್ತು. ಆಗಿನಿಂದಲೂ ಈ ಕುಟುಂಬಗಳು ಭೂಮಿಯನ್ನು ಆಧರಿಸಿ ಬದುಕುತ್ತಿದ್ದರು.
ಆದರೆ 2003 ರಿಂದ ನಾರಾ ಪ್ರತಾಪರೆಡ್ಡಿ ಈ ಜಮೀನು ಖರೀದಿಸಿದೆಂದು. ಗೂಂಡಾಗಿರಿ. ಬೆದರಿಕೆಗಳ ಮೂಲಕ‌ ಮತ್ತು ಪ್ರತಾಪರೆಡ್ಡಿ 2015 ರಲ್ಲಿ ಉಚ್ಚ ನ್ಯಾಯಾಲಯದಲ್ಲಿ ರಿಟ್ ಪಿಟೀಷನ್ ಹಾಕಿ ಎಲ್ಲಾ ಸತ್ತಿರುವವರ ಮೇಲೆ ಇಂಟೆರಿಮ್ ಎಕ್ಸ್ ಪಾರ್ಟಿ ಆರ್ಡರ್ ತೆಗೆದುಕೊಂಡು 10 ಜೆ.ಸಿ.ಬಿ ಇಟ್ಟು ಬೌಂಡರಿಗಳೆಲ್ಲವನ್ನು ನಾಶ ಮಾಡಿದ್ದಾರೆ.
ದ್ವಿ-ಸದಸ್ಯ ಪೀಠವು ಪ್ರತಾಪರೆಡ್ಡಿ ಮತ್ತು ರೈತರು ಬಳ್ಳಾರಿಯ ಸಿವಿಲ್ ನ್ಯಾಯಾಲಯದಲ್ಲಿ ಕೋರ್ ಕಮೀಷನ್ ವಾರೆಂಟ್ ಪ್ರಕಾರ ಸರ್ವೆ ಮಾಡಿಸಿ ಸಿವಿಲ್ ನ್ಯಾಯಾಲಯದಲ್ಲಿ ಬಗ್ಗೆಹರಿಸಿಕೊಳ್ಳಿ ಎಂದು ಆದೇಶ ಮಾಡಿದೆ. ಆ ಆದೇಶದ ಮೇಲೆ ಪ್ರತಾಪ್ ರೆಡ್ಡಿ ರಿವ್ಯೂವ್ ಪಿಟೀಷನ್‌ಗಾಗಿ ಬೆಂಗಳೂರು ನ್ಯಾಯಾಲಯದಲ್ಲಿ ಕೇಸ್ ದಾಖಲಿ ಮಾಡಿದ್ದು ಅದು ಡಿಸ್‌ಮಿಸ್ ಆಗಿದೆ.


ಪ್ರತಾಪರೆಡ್ಡಿಯ ಆಮಿಷಕ್ಕೆ ಒಳಗಾಗಿ ತಾಲೂಕು ಸರ್ವೆಯರ್ ಹನುಮಂತಪ್ಪ ಇನ್ನೂ ಕೋರ್ಟ್ ಕಮೀಷನ್ ಆರ್ಡರ್ ಆಗದೇ ಇರುವ ರೈತರ ಭೂಮಿಯಲ್ಲಿ 10 ಹಿಟಾಚಿ, 3 ಜೆ.ಸಿ.ಬಿ, 3 ಲಾರಿ ಮತ್ತು ಹೋಲ್ಸ್ ಹಾಕುವ ಟ್ರಾಕ್ಟರ್ ತೆಗೆದುಕೊಂಡು ಬಂದು ದೌರ್ಜನ್ಯವಾಗಿ ಎ.ಪಿ.ಎಂ.ಸಿ. ಠಾಣೆಯ ಪೊಲೀಸ್ ಜೀಪ್ ನಿಲ್ಲಿಸಿ. ನಮ್ಮ ಭೂಮಿಗಳ ಮ್ಯಾರೆ ಮತ್ತು ಬೌಂಡರಿಗಳನ್ನು ನಾಶಪಡಿಸಿದ್ದಾರೆ.
ಕೆಲ ಕಂದಾಯ ಅಧಿಕಾರಿಗಳು ನಿಯಮ ಬಾಹಿರವಾಗಿ ನಡೆದುಕೊಳ್ಳುತ್ತಿದ್ದು ಮೇಲಾಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕೆಂದು ಒತ್ತಾಯಿಸಿದರು.
ಈ ಭೂಮಿ ವಿಷಯವು ದೀರ್ಘ ಕಾಲದಿಂದ ಬಡವರ ವಿರುದ್ಧ ನಡೆಸುತ್ತಿರುವ ಸಂಚಾಗಿದ್ದು ಈ ಬಗ್ಗೆ ತನಿಖೆ ನಡೆಸುವ ಮೂಲಕ ಬಡವರಿಗೆ ನ್ಯಾಯ ಒದಗಿಸಲು ಮುಂದಾಗಬೇಕೆಂದು ಆಗ್ರಹಿಸಿದರು.


ಕೇವಲ ಐದು ಜನರ ಜಮೀನಿಗೆ ಮಾತ್ರ ಸರ್ವೇ ಮಾಡಲು ಆದೇಶ ಆಗಿದೆ ಆದರೆ ಅವರು ದೌರ್ಜನ್ಯ ಮಾಡಿ ಎಲ್ಲಾ ಜಮೀನು ಸರ್ವೇ ಮಾಡುತ್ತಿದ್ದಾರೆ. ಜಿಲ್ಲಾಡಳಿತವು ಪ್ರತಾಪ್ ರೆಡ್ಡಿಯ ಗುಲಾಮರಂತಾಗಿದೆ. ಯಾವ ರಾಜಕೀಯ ಶಕ್ತಿ ನಿಮ್ಮ‌ಕೈ ಕಟ್ಟಿದೆ ಎಂದು ಡಿಸಿಯವರನ್ನು ಪ್ರಶ್ನಿಸಿ. ನಮಗೆ ನ್ಯಾಯಬೇಕು ದಾಖಲೆಗಳು ಯಾವು ಓರಿಜನಲ್ ಎಂಬುದು ತನಿಖೆ ಆದರೆ ಸತ್ಯ ಗೊತ್ತಾಗಲಿದೆಂದರು.
ವಿನಾಕಾರಣ ನಮ್ಮ ಹೋರಾಟಕ್ಕೆ ಬೆಂಬಲಿಸುವವರ ಮೇಲೂ ಅಟ್ರಾಸಿಟಿ ಕೇಸ್ ಹಾಕಿಸುತ್ತಾರೆ ಹೋರಾಟವನ್ನು ಧಮನ ಮಾಡಲು ಎಂದರು.
ಸುದ್ದಿಗೋಷ್ಟಿಯಲ್ಲಿ ಹನುಂತಂಪ್ಪ, ವೀರೇಶ್ , ಕೆ.ಮೋಹನ್ ಮೊದಲಾದವರು ಇದ್ದರು.‌