
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಮೇ.24:- ಜನರಿಗೆ ಕೊಟ್ಟ ಭರವಸೆಯನ್ನು ಚಾಚು ತಪ್ಪದೇ ಈಡೇರಿಸಿದ್ದೇವೆ ಮುಂದಿನ 3 ವರ್ಷದಲ್ಲಿ ಉಳಿದ ಭರವಸೆ ಈಡೇರಿಸಲು ಬದ್ದರಾಗಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರರು.
ಪಟ್ಟಣದ ಡಾ.ರಾಜ್ ಕುಮಾರ್ ಬಾನಂಗಳದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ವತಿಯಿಂದ ಹಮ್ಮಿಕೊಂಡಿದ್ದ ರೂ 513 ಕೋಟಿ ವೆಚ್ಚದ ವಿವಿದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಚುನಾವಣಾ ಪೂರ್ವದಲ್ಲಿ ಜನರಿಗೆ ಕೊಟ್ಟ 593 ಭರವಸೆಗಳಲ್ಲಿ 242 ಭರವಸೆಗಳನ್ನು ಈಡೇರಿಸಲಾಗಿದೆ ಇನ್ನೂ ಮೂರು ವರ್ಷ ಸರ್ಕಾರ ನಮ್ಮದೇ ಇರುತ್ತದೆ ಉಳಿದ ಭರವಸೆಯನ್ನು ಈಡೇರಿಸಲಾಗವುದು ಎಂದರಲ್ಲದೆ ಮುಂದಿನ 2028 ರ ವಿಧಾನಸಭಾ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಪ್ರಕಟಿಸಿದರು.
ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಹೊಟ್ಟೆ ಕಿಚ್ಚಿನಿಂದ ರಾಜ್ಯ ಸರ್ಕಾರ ದಿವಾಳಿ ಆಗಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ದಿವಾಳಿ ಆಗಿದ್ದರೆ ಇಷ್ಟೊಂದು ಅಭಿವೃದ್ಧಿ ಕಾರ್ಯಕ್ರಮ ಮಾಡಲು ಸಾದ್ಯವೇ ನಿಮಗೆ ಮಾನ ಮಾರ್ಯಾದೆ ಇದ್ದರೆ ಕೆ.ಆರ್.ನಗರ ಕ್ಷೇತ್ರಕ್ಕೆ ಬಂದು ನೋಡಿ ಎಂದು ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರಿಗೆ ಸವಾಲು ಹಾಕಿದರು.
ಸರ್ಕಾರ ಬಂದು ಎರಡು ವರ್ಷಗಳು ಕಳೆದಿದೆ, ಉತ್ತರ ಕರ್ನಾಟಕದಲ್ಲಿ ನಾಲ್ಕು ಲಕ್ಷ ಜನರು ಕಾರ್ಯಕ್ರಮಕ್ಕೆ ಸೇರಿದ್ದರು,, ಇಲ್ಲಿ ಇಷ್ಟೊಂದು ಜನರು, ಮಹಿಳೆಯರು ಬಂದಿದ್ದೀರಿ ನಾವು ಕೊಟ್ಟ ಪಂಚ ಗ್ಯಾರಂಟಿ ಯೋಜನೆಯಿಂದ ನಿಮ್ಮಗಳ ಕುಟುಂಬದ ನಿರ್ವಹಣೆ ಮಾಡುತ್ತಿದ್ದಿರಿ, ಯಾವುದಾದರೂ ಒಂದೇ ಒಂದು ಯೋಜನೆ ನಿಲ್ಲಿಸಿದ್ದೀವಾ ನೀವೇ ಹೇಳಿ, ಪ್ರಜಾಪ್ರಭುತ್ವದಲ್ಲಿ ಜನರೆ ತೀರ್ಮಾನಿಸುವುದು ಸರ್ಕಾರ ದಿವಾಳಿ ಆಗಿದೆ, ಹಣವಿಲ್ಲ ಎಂದು ಬೊಬ್ಬೆ ಹೊಡೆಯುವ ಬಿಜೆಪಿ ಮತ್ತು ಜೆಡಿಎಸ್ ಪಕ್ಣದವರನ್ನು ಪ್ರಶ್ನೆ ಮಾಡಿ ಎಂದರು.
ಪಂಚ ಗ್ಯಾರಂಟಿ ಯೋಜನೆಗಾಗಿ ಪ್ರತಿ ವರ್ಷ 58 ಸಾವಿರ ಕೋಟಿ ಖರ್ಚಾಗುತ್ತದೆ ಎರಡ ವರ್ಷದಲ್ಲಿ 90 ಸಾವಿರಕ್ಕೂ ಹೆಚ್ಚು ಹಣ ಗ್ಯಾರಂಟಿ ಯೋಜನೆಗೆ ಖರ್ಚು ಮಾಡಲಾಗಿದೆ. ವೃದ್ಯಾಪ, ಆಂಗವೀಕಲರ ಪಿಂಚಣಿ ವೇತನಕ್ಕೆ60 ಸಾವಿರ ಕೋಟಿ, 7 ನೇ ವೇತನ ಆಯೋಗ ಸೇರಿದಂತೆ ವಿವಿದ ಇಲಾಖೆಗಳ ಸಹಾಯಧನ, ವಿದ್ಯುತ್ ಸಹಾಯಧನಕ್ಕೆ 112 ಸಾವಿರ ಕೋಟಿ ಖರ್ಚಾಗಿದೆ ಎಂದು ಮಾಹಿತಿ ನೀಡಿದರು.
ಬಿಜೆಪಿಯವರ ಜನ್ಮ ಜಾಲಾಡಿದ ಸಿ.ಎಂ: ಬಿಜೆಪಿಯವರಿಗೆ ನಾಚಿಕೆ ಮಾನ ಮಾರ್ಯಾದೆ ಯಾವುದೂ ಇಲ್ಲ,, ಇವರು ಮಾಡುತ್ತಿರುವ ಜನಾಕ್ರೋಶ ಯಾತ್ರೆ ಬೆಂಬಲವಿಲ್ಲ, ಜನರು ನಮ್ಮ ಸರ್ಕಾರದ ಮೇಲೆ ಆಕ್ರೋಶ ಇದ್ದಿದ್ದರೆ ಸಾಧನಾ ಸಮಾವೇಶಕ್ಕೆ ನಾಲ್ಕು ಲಕ್ಷ ಜನ ಸೇರುತ್ತಿರಲಿಲ್ಲ, ಇವತ್ತು ಕೂಡ ಇಲ್ಲಿ ಇಷ್ಟೊಂದು ಜನರು ಬರುತ್ತಿರಲಿಲ್ಲ, ಆದ್ದರಿಂದ ಬಿಜೆಪಿಯವರು ಬರಿ ಸುಳ್ಳು ಹೇಳುವುದೇ ಅವರ ಜನಾಕ್ರೋಶ ಯಾತ್ರೆಯ ಉದ್ದೇಶ ಎಂದು ಬಿಜಿಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.
ಹೆಚ್.ಡಿ.ಕುಮಾರಸ್ವಾಮಿ, ಆರ್.ಅಶೋಕ, ಛಲವಾದಿ ನಾರಾಯಣಸ್ವಾಮಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ವಿಜೇಂದ್ರ ಸೇರಿದಂತೆ ಜೆಡಿಎಸ್ ಬಿಜೆಪಿ ಪಕ್ಷದವರು ಬೆಳಗ್ಗೆ ಆದರೆ ಬರಿ ಸುಳ್ಳು ಹೇಳುವುದೇ ಕಾಯಕ ಮಾಡಿ ಕೊಂಡಿದ್ದಾರೆ ಎಂದು ಕಿಡಿ ಕಾರಿದರು.
ಹಾಗಾದರೆ ಗ್ಯಾರಂಟಿ ಯೋಜನೆಯ ಶಕ್ತಿ ಯೋಜೆಯಡಿ 500 ಕೋಟಿ ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡಿದ್ದಾರೆ, ಪ್ರತಿ ನಿತ್ಯ 60 ಲಕ್ಷ ಕೋಟಿ ಮಹಿಳೆಯರು ಬಸ್ ನಲ್ಲಿ ಒಡಾಡುತ್ತಿದ್ದಾರೆ ಯಾವುದೇ ಧರ್ಮ, ಜಾತಿ, ಅಂತಸ್ತಿನ ಬೇದಬಾವವಿಲ್ಲದೆ ಸಂಬಂದಿಕರ ಮನೆ, ದೇವಾಲಯ, ಪ್ದವಾಸಿತಾಣಗಳಿಗೆ ಹೋಗುತ್ತಿದ್ದಾರೆ ಇದು ಸುಳ್ಳಾ ನೀವೆ ಪ್ರಶ್ನೆ ಮಾಡಿ, ಹಾಗಾದರೇ ಉಚಿತವಾಗಿ ಕರೆಂಟ್ ಕೊಡುತ್ತಿರುವುದು, ಅನ್ನಭಾಗ್ಯ ಯೋಜನೆ ಮೂಲಕ ಅಕ್ಕಿ ವಿತರಣೆ ಮಾಡುತ್ತಿರುವುದು ನಿರುದ್ಯೋಗಿಗಳಿಗೆ ಯುವ ನಿಧಿ ಕೊಡುತ್ತಿರುವುದು ಪ್ರತಿ ತಿಂಗಳು ಮಹಿಳೆಯರ ಅಕೌಂಟ್ ಗೆ ಹಣ ಹಾಕುತ್ತಿರುವುದು ಸುಳ್ಳ ಎಷ್ಟು ಚೆನ್ನಾಗಿ ಹೇಳುತ್ತಾರೆ ಬಿಜೆಪಿ ಪಕ್ಷವರು ಇವರಿಗೆ ಹೊಟ್ಟೆ ಉರಿ ಇದಕ್ಕೆ ಜನಾಕ್ರೋಶ ಯಾತ್ರೆ ನಾ ಎಂದು ವಾಗ್ದಾಳಿ ನಡೆಸಿದ ಸಿದ್ದರಾಮಯ್ಯನವರು ಇವರ ಯೋಗ್ಯತೆಗೆ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಏನ್ನನ್ನೂ ಅಭಿವೃದ್ಧಿ ಮಾಡಲಿಲ್ಲ, ಬರಿ ಲೂಟಿ ಮಾಡೋದೆ ಇವರ ಕೆಲಸ ಎಂಸು ಬಿಜೆಪಿ ಪಕ್ಣದ ಮುಖಂಡರ ಜನ್ಮ ಜಾಲಾಡಿದರು ಸಿದ್ದರಾಮಯ್ಯನವರು. ಬಸವರಾಜ ಬೊಮ್ಮಾಯಿ ಸಿ.ಎಂ.ಆಗಿದ್ದಾಗ 2.70 ಲಕ್ಷ ಸಾವಿರ ಕೋಟಿಯನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಮಂಜೂರಾತಿ ಮಾಡದೇ ಶಾಸಕರಿಗೆ ಕೊಟ್ಟು ಲೂಟಿ ಮಾಡಿದ್ದರಲ್ಲ ಇದು ಜನಪರ ಕಾರ್ಯಕ್ರಮ ಎಂದು ಪ್ರಶ್ನೆ ಮಾಡಿದರು.
ನಮ್ಮ ಸರ್ಕಾರದ ಮೇಲೆ ಜನಾಕ್ರೋಶ ಇದ್ದಿದ್ದರೆ ಕಳೆದ ಮೂರು ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳೇ ಗೆಲುವು ಸಾದಿಸುತ್ತಿದ್ದರ, ಅದರಲೂ ಮಾಜಿ ಮುಖ್ಯಮಂತ್ರಿ ಮಕ್ಕಳ ಮೇಲೆ ನಮ್ಮ ಪಕ್ಷದ ಅಭ್ಯರ್ಥಿಗಳು ಅಧಿಕ ಅಂತರದ ಮತಗಳಿಂದ ಗೆದ್ದಿದ್ದಾರೆ. ಚನ್ನಪಟ್ಟಣದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮಗನ ವಿರುದ್ದ, ಶಿಗ್ಗಾವಿಯಲ್ಲಿ ಬಸವರಾಜ ಬೊಮ್ಮಾಯಿ ಮಗನ ವಿರುದ್ದ ಗೆದ್ದಿದ್ದಾರೆ ಎಂದು ಬಿಜೆಪಿಯವರ ಜನಾಕ್ರೋಶ ಯಾತ್ರೆ ವಿರುದ್ದ ವಾಗ್ದಾಳಿ ನಡೆಸಿದರು ಸಿ.ಎಂ. ಸಿದ್ದರಾಮಯ್ಯನವರು.
ಶಕ್ತಿ ಯೋಜನೆ ಬಗ್ಗೆ ಮೆಚ್ಚುಗೆ: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗೆಡೆಯವರು ನನಗೆ ಪತ್ರ ಬರೆದ್ದಿದ್ದಾರೆ, ನಿಮ್ಮ ಶಕ್ತಿ ಯೋಜನೆಯಿಂದ ನಮ್ಮ ಧರ್ಮಸ್ಥಳ ಕ್ಷೇತ್ರಕ್ಕೆ ಹೆಚ್ಚಾಗಿ ಮಹಿಳೆಯರು ಬಂದಿದ್ದರಿಂದ ನಮ್ಮ ದೇವಸ್ಥಾನದ ಆದಾಯ ಜಾಸ್ತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರು ಬಿಜೆಪಿ ಪಕ್ಷದ ರಾಜ್ಯಸಭಾ ಸದಸ್ಯರು ಎಂದರು.
ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ, ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್, ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜ್, ಶಾಸಕ.ಡಿ.ರವಿಶಂಕರ್, ಶಾಸಕರಾದ ಕೆ.ಹರೀಶ್ ಗೌಡ, ಅನೀಲ್ ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ಡಾ.ಡಿ.ತಿಮ್ಮಯ್ಯ, ಕೆಪಿಸಿಸಿ ಕಾರ್ಯಕಾರಣಿ ಸದಸ್ಯ ದೊಡ್ಡಸ್ವಾಮೇಗೌಡ, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯ್ ಕುಮಾರ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿ.ಪಂ.ಸಿಇಓ ಯುಕೇಶ್ ಕುಮಾರ್. ಎಸ್., ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಎನ್, ವಿಷ್ಣುವರ್ಧನ್, ಉಪವಿಭಾಗಾಧಿಕಾರಿ ವಿಜಯ್ ಕುಮಾರ್, ತಹಸೀಲ್ದಾರ್ ಜೆ.ಸುರೇಂದ್ರಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ಹಾರಂಗಿ ವಿಭಾಗದ ಇಇ ಕುಶಕುಮಾರ್, ಚೆಸ್ಕಾಂ ಇಇ ಪ್ರದೀಪ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕುಮಾರಸ್ವಾಮಿ, ರಾಜ್ಯ ಕುರಿ ಮತ್ತು ಉಣ್ಣೆ ಸಹಕಾರ ಮಹಾಮಂಡಲ ಅಧ್ಯಕ್ಷ ಎಂ.ರಮೇಶ್, ಪುರಸಭೆ ಅಧ್ಯಕ್ಷ ಶಿವುನಾಯಕ್, ಉಪಾಧ್ಯಕ್ಷೆ ವಸಂತಮ್ಮ, ಕೆಪಿಸಿಸಿ ಮಾಜಿ ಸದಸ್ಯ ಎಸ್.ಪಿ.ತಮ್ಮಯ್ಯ, ಜಿ.ಪಂ.ಮಾಜಿ ಸದಸ್ಯ ಮಾರ್ಚಹಳ್ಳಿ ಶಿವರಾಮ್, ಸಿದ್ದಪ್ಪ, ಜಿ.ಆರ್.ರಾಮೇಗೌಡ, ಜಯರಾಮೇಗೌಡ, ತಾ.ಶರಣು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಪಿ.ರಮೇಶ್ ಕುಮಾರ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಎಸ್.ಸಿದ್ದೇಗೌಡ, ತಾ.ಪಂ.ಮಾಜಿ ಅಧ್ಯಕ್ಷರಾದ ಹಾಡ್ಯ ಮಹಾದೇವಸ್ವಾಮಿ ಹೆಚ್.ಟಿ.ಮಂಜಪ್ಪ, ಮಲ್ಲಿಕಾ ರವಿ, ಜಯರಾಮೇಗೌಡ, ತಾ.ಕುರುಬರ ಸಂಘದ ಅಧ್ಯಕ್ಷ ಚೀರನಹಳ್ಳಿ ಶಿವಣ್ಣ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್, ನಿರ್ಧೆಶಕರಾದ ಜಾಬೀರ್, ಪ್ರಸನ್ನ, ಸರಿತಾಜವರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯ್ ಶಂಕರ್, ಎಂ.ಜೆ.ರಮೇಶ್, ತಾ.ಮಹಿಳಾ ಕಾಂಗ್ರೆಸ್ ಅಧ್ಯಕ್ಷಾದ ರಾಣಿ, ಲತಾ, ಸಮಾಜ ಸೇವಕಿ ಗಂಧನಹಳ್ಳಿ ಪ್ರೇಮಾಶಿವಣ್ಣ, ತಾ.ಕಾಂಗ್ರೆಸ್ ಪರಿಶಿಷ್ಟ ವರ್ಷಗಳ ಅಧ್ಯಕ್ಷ ತಿಪ್ಪೂರು ಮಹದೇವ್, ಕಾಂಗ್ರೆಸ್ ಪಕ್ಷದ ಮುಖಂಡರಾದ ವೈ.ಎಸ್.ಜಯಂತ್, ಮಿರ್ಲೆ ನಂದೀಶ್, ಗಂಧನಹಳ್ಳಿ ವೆಂಕಟೇಶ್, ಹಂಪಾಪುರ ಪ್ರಶಾಂತ್, ಕೆಂಚಿಮಂಜು, ಪ್ರದೀಪ್, ಹೆಬ್ಬಾಳು ಸ್ವಾಮಿ, ಗುಣಪಾಲ್ ಜೈನ್, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಮಿಕ್ಸರ್ ಶಂಕರ್, ಸದಸ್ಯರಾದ ಶಂಕರ್ ಸ್ವಾಮಿ, ಸುಬ್ರಹ್ಮಣ್ಯ, ನಟರಾಜು, ಜಿಲ್ಲಾ ಕಾಂಗ್ರೆಸ್ ನ ಕಾನೂನು ವಿಭಾಗದ ಅರ್ಜುನಹಳ್ಲಿ.ಆರ್.ಕಾಂತರಾಜ್, ಜಿಲ್ಲಾ ಕುರುಬರ ಸಂಘದ ನಿರ್ದೇಶಕ ಗಂಧನಹಳ್ಳಿ ಹೇಮಂತ್, ಮುಖಂಡ ಅರಸ್ಸು ಮಂಜು, ಸೇರಿದಂತೆ ಮೊದಲಾದವರು ಇದ್ದರು.