Home ಜಿಲ್ಲೆ ಪೌರ ಕಾರ್ಮಿಕರಿಗೆ ದಸರೆಗೆ ಹೊಸ ಬಟ್ಟೆ ವಿತರಿಸಿದ ಮೋತ್ಕರ್

ಪೌರ ಕಾರ್ಮಿಕರಿಗೆ ದಸರೆಗೆ ಹೊಸ ಬಟ್ಟೆ ವಿತರಿಸಿದ ಮೋತ್ಕರ್

(ಸಂಜೆವಾಣಿ ವಾರ್ತೆ)

ಬಳ್ಳಾರಿ, ಅ.15: ನಗರದ ತಾಳೂರು ರಸ್ತೆಯಲ್ಲಿ ದಸರಾ ಹಬ್ಬದ ಪ್ರಯುಕ್ತ, 24ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯ ಹಾಗೂ ಪಾಲಿಕೆಯ ವಿರೋಧ ಪಕ್ಷದ ನಾಯಕ ಟಿ. ಶ್ರೀನಿವಾಸ್ ಮೋತ್ಕರ್ ನೇತೃತ್ವದಲ್ಲಿ ಪೌರಕಾರ್ಮಿಕರಿಗೆ ಬಟ್ಟೆ ವಿತರಣೆ ಕಾರ್ಯಕ್ರಮ ನಡೆಯಿತು.

ಬಟ್ಟೆ ವಿತರಿಸಿ ಮಾತನಾಡಿದ ನಗರದ ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಸೇವೆ ಅತ್ಯಂತ ಮಹತ್ವದ್ದು. ಅವರ ನಿಸ್ವಾರ್ಥ ಸೇವೆಯನ್ನು ಗೌರವಿಸುವ ಇಂತಹ ಮಾನವೀಯ ಕಾರ್ಯಗಳು ನಿಜಕ್ಕೂ ಶ್ಲಾಘನೀಯ ಎಂದರು.

ಶ್ರೀನಿವಾಸ ಮೋತ್ಕರ್ ಮಾತನಾಡಿ, ನಮ್ಮನನಗರದ , ವಾರ್ಡಿನ ಜನ ಆರೋಗ್ಯದಿಂದ ಇರಬೇಕಾದರೆ ಪೌರ ಕಾರ್ಮಿಕರ ಸೇವೆ ಅನನ್ಯವಾದುದು. ಅದಕ್ಕಾಗಿ ದಸರಾ ಹಬ್ಬವನ್ನು ಅವರು ಹೊಸ ಬಟ್ಟೆ ಧರಿಸುವ ಮೂಲಕ ಆಚರಿಸಲಿ ಎಂದು ಹಾರೈಸಿದರು.