ಪೌರಕಾರ್ಮಿಕರೊಂದಿಗೆ ದೀಪಾವಳಿ ಹಬ್ಬ ಆಚರಣೆ


ಸಂಜೆವಾಣಿ ವಾರ್ತೆ
ಸಂಡೂರು :ಅ:21
  ನಮ್ಮ ಅಮ್ಮಾ ಸಂಸ್ಥೆಯ ವತಿಯಿಂದ ತಾಳೂರು ಗ್ರಾಮದಲ್ಲಿ ಮಳೆ ಗಾಳಿ ಬಿಸಿಲಿಗೆ ಕುಗ್ಗದೇ ನಮ್ಮ ದಿನನಿತ್ಯದ ಕಾರ್ಯಕ್ರಮಗಳಿಗೆ ಪೂರಕವಾಗಿ ದುಡಿದು ಕಾರ್ಯನಿರ್ವಹಿಸುತ್ತಿರುವ 05 ಜನ ಮಹಿಳೆಯರು ಮತ್ತು ಒಬ್ಬ ಪುರುಷ ಸೂಪರ್ ವೈಸರ್ ಗುರು ಇವರೆಲ್ಲ ಕಾರ್ಮಿಕರಿಗೆ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರುವುದರೊಂದಿಗೆ ತಮ್ಮ-ತಮ್ಮ ಕಸ್ಟ ಸುಖಗಳನ್ನು ವಿಚಾರಿಸಿ ನಮ್ಮ ಸಂಸ್ಥೆಯಿಂದ ಆಗಲಿ ಅಥವಾ ಸರ್ಕಾರದಿಂದಾಗಲಿ ಆಗಬೇಕಾದ ಕೆಲಸವೇನಿದ್ದರೆ ಅಗತ್ಯವಾಗಿ ತಿಳಿಸಲು ತಿಳಿಹೇಳಿ ಧೈರ್ಯ ತುಂಬಿ ಸಿಹಿ ನೀಡಿ ಶಾಲು/ಹಾರ ಹೊದಿಸಿ ಸಮ್ಮಾನಿಸಿ ತಲಾ ಒಂದೊಂದು ಸೀರೆ ನೀಡಿ ಗೌರವಿಸಿ ಬೆಳಕಿಗೆ ಹಬ್ಬಕ್ಕೆ ಶುಭಕೊರಲಾಯಿತು ಇದರೊಂದಿಗೆ ನಮ್ಮ ಸಂಸ್ಥೆಯ ಪದಾಧಿಕಾರಿಗಳಾದ ಎಂ ಕವಿತಾರುದ್ರಗೌಡ ಅಧ್ಯಕ್ಷರು, ಎಂ ರುದ್ರಗೌಡ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಗಳು ಹಾಗೂ ಸದಸ್ಯರಾದ ಎಸ್ ರುದ್ರಮ್ಮ ಪಂಪಾಪತಿ ಇವರು ಭಾಗವಹಿಸಿ ಸನ್ಮಾನಿಸಿ ಕಾರ್ಯಕ್ರಮವನ್ನು ಸಂತೋಷ ಪೂರ್ವಕವಾಗಿ ಎಶಸ್ವಿಗೊಳಿಸಲಾಯಿತು.