ಪೈರಿಂಗ್ ಪ್ರಕರಣ 4 ಕೇಸು ದಾಖಲು: ಹಿತೇಂದ್ರ

oplus_2097152

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಜ.02: ರಾಜ್ಯದ ಸಹಾಯಕ ಪೊಲೀಸ್ ಮಹಾ ನಿರ್ದೇಶಕ ಹೀತೇಂದ್ರ ಅವರು ನಗರದಲ್ಲಿನ ನಿನ್ನೆಯ ಪೈರಿಂಗ್ ಘಟನೆ ಕುರಿತು ಎಸ್ಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ. ಘಟನೆ ಸಂಬಂಧ ನಾಲ್ಕು ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದಾರೆ.

ಬ್ಯಾನರ್ ವಿಚಾರಕ್ಕೆ ನಿನ್ನೆ ಬಳ್ಳಾರಿಯಲ್ಲಿಸಂಜೆ 6.30 ಕ್ಕೆ ಕಲ್ಲು ತೂರಾಟವಾಗಿದೆ ನಂತರ ಮುಗಿದಿತ್ತು ಅನ್ನೋಷ್ಟರಲ್ಲಿ ಮತ್ತೊಮ್ಮೆ ಒಂಬತ್ತು ಗಂಟೆಗೆ ಗಲಾಟೆ ನಡೆದಿದೆ. ಒಂದು ಗುಂಪಿನಿಂದ ಏರ್ ಪೈರ್ ಮಾಡಿದ್ದಾರೆ. ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ನಂತರ ಪೊಲೀಸರು ಟಿಯರ್ ಗ್ಯಾಸ್ ಹಾರಿಸಿ ಪರಿಸ್ಥಿತಿ ನಿಯಂತ್ರಣ ಮಾಡಿದೆ.

ಘಟನೆ ಸಂಬಂಧ ಈಗಾಗಲೇ ಐದು ಗನ್ ಸೀಜ್ ಮಾಡಿದ್ದೇವೆ. ಇನ್ನಷ್ಟು ಜನರ ಗನ್ ವಶಕ್ಕೆ ಪಡೆದುಕೊಳ್ಳುತ್ತೇವೆ. ಎಫ್ ಎಸ ಎಲ್ ನಲ್ಲಿ ಯಾವ ಗನ್ ನಿಂದ ಬುಲೆಟ್ ಬಂದಿದೆ. ಅದು ಯಾರದ್ದು. ನಿಯಮ ಯಾರು ಉಲ್ಲಂಘನೆ ಮಾಡಿದ್ದಾರೆ ಅನ್ನೋ ಬಗ್ಗೆ ಪರಿಶೀಲನೆ ಮಾಡಲಾಗ್ತಿದೆಂದರು.

.ಮೃತ ವ್ಯಕ್ತಿಯ ಪೋಸ್ಟ್ ಮಾರ್ಟಮ್ ಮುಗಿದಿದೆ. ಈಗಾಗಲೇ ಪ್ರಕರಣ ಸಂಬಂಧಿಸಿದಂತೆ ನಾಲ್ಕು ದೂರು ದಾಖಲಾಗಿದೆ. ಸಹೋದರ ಸತ್ತೊಗಿರೋದು ಎಂದು ರಾಜಶೇಖರ ಸಹೋದರ ಹತ್ಯೆ ಬಗ್ಗೆ ದೂರು ನೀಡಿದ್ದಾರೆ ವಾಲ್ಮೀಕಿ ಅವಮಾನ ಮಾಡಿದ್ದಾರೆ ಎಂದು ಮತ್ತೊಂದು ಪ್ರಕರಣ, ಸೋಮೊಟೋ ಕೇಸ್ ಸಹ ಪೊಲೀಸರು ದಾಖಲಿಸಿಕೊಂಡಿದ್ದಾರೆಂದರು.

ಇನ್ನೆರಡು ಕೇಸ್ ದಾಖಲಾಗೋದಿದೆ.. ಬಿಜೆಪಿಯವರು ದೂರು ಕೊಡೋ ನಿರೀಕ್ಷೆ ಇದೆ ಯಾರನ್ನು ಈವರೆಗೂ ಬಂಧಿಸಿಲ್ಲ. ಯಾರು ದೂರು ಕೊಟ್ಟರೂ ತೆಗೆದು ಕೊಳ್ಳುತ್ತೇವೆಂದರು.

ಪೊಲೀಸರ ಬಗ್ಗೆ ವೈಫಲ್ಯದ ಬಗ್ಗೆಯೂ ತನಿಖೆ ನಡೆಸುತ್ತೇವೆ.

ಪೊಲಿಟಿಷಿಯನ್ ಒತ್ತಡವಿದೆ ಅನ್ನೋ ಬಗ್ಗೆ ಮಾಹಿತಿ ಇಲ್ಲ.ಸಿಸಿ ಟಿವಿ ಮತ್ತು ಮಾಧ್ಯಮ ಕ್ಯಾಮರ ನೋಡಿ ಸೋಮೋಟೋ ಕೇಸನಲ್ಲಿ ಬಂಧಿಸುತ್ರೇವೆಸುಮ್ಮನೆ ಸುಮ್ಮನೆ ಆರೆಸ್ಟ್ ಮಾಡಲ್ಲ.. ದೊಡ್ಡವರ ಹೆಸರು ಇದ್ದಾಗ ನಿಧಾನವಾಗಿ ತನಿಖೆ ಮಾಡಿಬಂಧಿಸುತ್ತೇವೆಂದರು.