ಸಂಜೆವಾಣಿ ವಾರ್ತೆ
ತಿ.ನರಸೀಪುರ.ಸೆ.26- ಅಮಾಯಕ ಯುವಕರ ಮೇಲೆ ಪೆÇಲೀಸ್ ಠಾಣೆಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಿ, ಸುಳ್ಳು ಸುಮೊಟೊ ಮೊಕದ್ದಮೆ ದಾಖಲಿಸಿರುವ ಪೆÇಲೀಸರ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿಸಿ ಹಾಗೂ ಪೆÇಲೀಸ್ ಇನ್ಸ್ಪೆಕ್ಟರ್ ಧನಂಜಯ ಅವರ ಸೇವಾ ಅವಧಿಯ ಪ್ರಕರಣಗಳ ಸಮಗ್ರ ತನಿಖೆಗೆ ಆಗ್ರಹಿಸಿ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಗುರುವಾರ ದಲಿತ ಸಂಘರ್ಷ ಸಮಿತಿಯ ಮುಖಂಡರು ಹಾಗೂ ಕಾರ್ಯಕರ್ತರು ಬೃಹತ್ ಪ್ರತಿಭಟನಾ ಧರಣಿಯನ್ನು ನಡೆಸಿದರು.
ಪಟ್ಟಣದ ತಾಲೂಕು ಕಚೇರಿ ಎದುರು ಮೈಸೂರು ಜಿಲ್ಲೆ ಸೇರಿದಂತೆ ನೆರೆಯ ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಗಳ ವಿವಿಧ ತಾಲೂಕಿನಿಂದ ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಜಮಾಯಿಸಿದ್ದ ದಸಂಸ ಕಾರ್ಯಕರ್ತರು ಹಾಗೂ ಮುಖಂಡರು ತಾಲೂಕಿನ ತುಂಬಲ ಗ್ರಾಮದಲ್ಲಿ ಕಳೆದ ಸೆ.5 ರಂದು ಯಾವುದೇ ಗುಂಪು ಗಲಭೆ ನಡೆಯದಿದ್ದರೂ ತುಂಬಲ ಮತ್ತು ಮಳವಳ್ಳಿ ತಾಲೂಕಿನ ಕಲ್ಕುಣಿ ಗ್ರಾಮದ ಹತ್ತು ಮಂದಿ ಯುವಕರನ್ನು ಪಟ್ಟಣದ ಪೆÇಲೀಸ್ ಠಾಣೆಗೆ ಕರೆಯಿಸಿಕೊಂಡು ಮಾರಣಾಂತಿಕ ಹಲ್ಲೆ ನಡೆಸಿ, ನಂತರ ಸುಳ್ಳು ಸುಮೋಟೋ ಪ್ರಕರಣ ದಾಖಲು ಮಾಡಿರುವ ಪೆÇಲೀಸ್ ಇನ್ಸ್ಪೆಕ್ಟರ್ ಧನಂಜಯ, ಸಬ್ ಇನ್ಸ್ಪೆಕ್ಟರ್ ಜಗದೀಶ್ ಧೂಳ್ ಶೆಟ್ಟಿ ಹಾಗೂ ಪೆÇಲೀಸ್ ಸಿಬ್ಬಂದಿಗಳ ದೌರ್ಜನ್ಯದ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆಯನ್ನು ಪ್ರಾರಂಭಿಸಿದರು.
ಪೆÇಲೀಸರು ದೌರ್ಜನ್ಯ ನಡೆಸಿರುವ ಬಗ್ಗೆ ಜವಾಬ್ದಾರಿಯುತ ಸಂಘಟನೆಯೊಂದು ದೂರು ನೀಡಿ 20 ದಿನಗಳಾದರೂ ಕ್ರಮ ಕೈಗೊಳ್ಳದ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ(ಎಸ್ಪಿ) ಹಾಗೂ ನಂಜನಗೂಡು ಉಪ ವಿಭಾಗದ ಡಿವೈಎಸ್ಪಿ ಅವರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಸಂತ್ರಸ್ತ ಯುವಕರಿಗೆ ನ್ಯಾಯ ಒದಗಿಸಲಾಗದ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ಸಿಎಂ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉಭಯ ನಾಯಕರ ಪುತ್ರರ ವಿರುದ್ಧ ದಿಕ್ಕಾರ ಘೋಷಣೆಗಳು ಮೊಳಗಿದವು. ಚಳುವಳಿಯ ಕ್ರಾಂತಿ ಗೀತೆ ಹಾಗೂ ಕಿವಿಗಚ್ಚಿಡುವಂತೆ ಬಾರಿಸುತ್ತಿದ್ದ ತಮಟೆ, ನಗಾರಿಗಳ ಬೋರ್ಗರೆತವೂ ಕೂಡ ಪ್ರತಿಭಟನೆಗೆ ಕಳೆಯನ್ನು ತಂದವು.
ದಲಿತ ಸಂಘರ್ಷ ಸಮಿತಿಯ ಹಿರಿಯ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಮಾತನಾಡಿ, ತುಂಬಲ ಗ್ರಾಮದ ಯುವಕರ ಮೇಲೆ ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳುವ ಬದಲು ಇನ್ಸ್ಪೆಕ್ಟರ್ ಧನಂಜಯ, ಸಬ್ ಇನ್ಸ್ಪೆಕ್ಟರ್ ಜಗದೀಶ ಧೂಳ್ ಶೆಟ್ಟಿ ಹಾಗೂ ಸಿಬ್ಬಂದಿಗಳು ಮನಸೋಯಿಚ್ಛೆ ಥಳಿಸಿ ಹಲ್ಲೇ ನಡೆಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಸಂತ್ರಸ್ತ ಯುವಕರಿಗೆ ನ್ಯಾಯದ ಭರವಸೆಯನ್ನು ತುಂಬಲು ಹೋರಾಟವನ್ನು ಮಾಡುತ್ತಿದ್ದೇವೆ. ಪ್ರಜ್ಞಾವಂತ ಸಂಘಟನೆಗಳ ಹೋರಾಟಗಾರರು ಇರುವ ನರಸೀಪುರದಲ್ಲಿ ಪೆÇಲೀಸರ ದೌರ್ಜನವನ್ನು ಕೆಲವರು ಸಮರ್ಥಿಸಿಕೊಂಡಿರುವುದು ವಿಪರ್ಯಾಸ. ಯಾರಿಗೆ ಅನ್ಯಾಯವನ್ನು ಯಾರೇ ಮಾಡಿದ್ದರೂ ಅಲ್ಲಿ ಚಳುವಳಿಯನ್ನ ಮಾಡುವುದು ನಮ್ಮೆಲ್ಲರ ಧ್ಯೇಯವಾಗಿದೆ. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳದ ಎಸ್ ಪಿ ಹಾಗೂ ಡಿ ವೈ ಎಸ್ ಪಿ ಅವರ ಬೇಜವಾಬ್ದಾರಿ ಸರಿಯಲ್ಲ. ದೌರ್ಜನ್ಯವನ್ನು ಕಂಡು ಕಾಣದಂತೆ ಇರುವ ಸರ್ಕಾರದ ಜನಪ್ರತಿನಿಧಿಗಳಿಗೆ ಶೋಭೆ ತರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಮಾತನಾಡಿ, ದಲಿತರಿಗೆ ರಕ್ಷಣೆ ನೀಡಿ ನ್ಯಾಯ ಕೊಡಿಸಬೇಕಿದ್ದ ಪೆÇಲೀಸರು ನರಸೀಪುರದಲ್ಲಿ ಭಕ್ಷಕರಾಗಿದ್ದಾರೆ. ಯುವಕರ ಮೇಲೆ ದೌರ್ಜನ್ಯ ನಡೆಸಿದ್ದನ್ನ ಪ್ರಶ್ನಿಸಿದ ದಲಿತ ಸಂಘಟನೆಯ ಮೇಲೆ ಸಮುದಾಯದ ಜನರನ್ನ ಎತ್ತಿ ಕಟ್ಟುವ ಕೃತ್ಯಕ್ಕೆ ಕೈ ಹಾಕಿರುವ ಧನಂಜಯ ಅವರ ವಿರುದ್ಧ ಕಾನೂನು ಕ್ರಮವಾಗುವವರೆಗೂ ಮೂರು ಜಿಲ್ಲೆಯಾದ್ಯಂತ ಹೋರಾಟಗಳು ನಡೆಯಲಿವೆ. ನಮ್ಮ ಹೋರಾಟದ ಕೂಗಿಗೆ ಸರ್ಕಾರದ ಸಿಎಂ, ಸಚಿವ, ಸಂಸದ ಹಾಗೂ ಎಂಎಲ್ಸಿ ಅವರುಗಳು ಕಿವಿಗೊಡದೆ ಬೇಜವಾಬ್ದಾರಿ ಪ್ರದರ್ಶಿಸಿದ್ದಲ್ಲಿ, ಅಧಿಕಾರದ ಕುರ್ಚಿಯಲ್ಲಿ ಕುಳಿತಿರುವಂತೆ ಮಾಡಿರುವ ನಮ್ಗೆ ಅವರನ್ನು ಕೆಳಗಿಳಿಸುವುದು ಗೊತ್ತಿದೆ. ರಾಜ್ಯ ಸರ್ಕಾರ ಹಾಗೂ ಹಿರಿಯ ಪೆÇಲೀಸ್ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸದೀದ್ದಲ್ಲಿ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಂತರ ತಹಶೀಲ್ದಾರ್ ಟಿ.ಜಿ.ಸುರೇಶಾಚಾರ್ ಅವರಿಗೆ ಮನವಿ ಪತ್ರವನ್ನು ಸಸಲ್ಲಿಸಲಾಯಿತು. ಜಿಲ್ಲಾ ಸಂಘಟನಾ ಸಂಚಾಲಕರಾದ ಶಂಭುಲಿಂಗಸ್ವಾಮಿ, ಚೋರನಹಳ್ಳಿ ಶಿವಣ್ಣ, ತಾಲೂಕು ಸಂಚಾಲಕ ಕುಕ್ಕೂರು ರಾಜು ಮಾತನಾಡಿದರು. ಪ್ರತಿಭಟನೆಯಲ್ಲಿ ದಸಂಸ ಮುಖಂಡರುಗಳಾದ ಮಲ್ಲಹಳ್ಳಿ ನಾರಾಯಣ, ಬನ್ನಹಳ್ಳಿ ಸೋಮಣ್ಣ, ಯರಿಯೂರು ರಾಜಣ್ಣ, ಅತ್ತಿಕುಪ್ಪೆ ರಾಮಕೃಷ್ಣ, ಕಲ್ಲಹಳ್ಳಿ ಕುಮಾರ್, ಜಾನಿ ದೊರೆಸ್ವಾಮಿ, ಕುಬೇರಪ್ಪ, ಆರ್.ಮಣಿಕಂಠರಾಜ್ ಗೌಡ, ಮಲಾರ ಮಹೇಶ್, ಮಂಜು ಶಂಕನಪುರ, ಗಟ್ಟವಾಡಿ ಮಹೇಶ್, ದೇವರಸನಹಳ್ಳಿ ಬಸವರಾಜು, ಗುಣಗಲ್ಲಿ ಶಿವಕುಮಾರ್, ಶಾಂತಕುಮಾರ್, ಶಿವಶಂಕರ್, ಮುತ್ತು ಉಯಂಬಳ್ಳಿ, ದೊಡ್ಡ ಸ್ವಾಮಿ, ಚಿಕ್ಕಹುಣಸೂರು ರಾಜಣ್ಣ, ಯಡದೊರೆ ಮಹದೇವಯ್ಯ, ಕಳ್ಳಿಮುದ್ದನಹಳ್ಳಿ ಚಂದ್ರು, ತಲಕಾಡು ಆನಂದ್, ದೊಡ್ಡಪುರ ಚರಣ್, ಗುಂಡ್ಲುಪೇಟೆ ನಂಜುಂಡಸ್ವಾಮಿ, ರಂಗಸ್ವಾಮಿ, ಹೊಮ್ಮರಗಹಳ್ಳಿ ಸಿದ್ದರಾಜು, ಸಣ್ಣ ಕುಮಾರ್, ಅನುಷ, ಹೊಳೆಯಪ್ಪ, ಮರಿಸ್ವಾಮಿ, ಕೃಷ್ಣಮೂರ್ತಿ ಬಸವಟ್ಟಿಗೆ, ವಾಟಾಳು ನಾಗರಾಜ್, ಯರಗನಹಳ್ಳಿ ಸಿದ್ದರಾಜು, ಸೋಸಲೆ ಎಸ್. ನಂಜುಂಡಯ್ಯ, ಬನ್ನಹಳ್ಳಿಹುಂಡಿ ಉಮೇಶ್, ಬಸವರಾಜು, ಎಂ.ಡಿ.ರಾಮು, ಇಂಡವಾಳು ಹೊನ್ನಯ್ಯ, ನಾಗರಾಜು, ಆಲಗೂಡು ನಾಗರಾಜಮೂರ್ತಿ, ಶಾಂತಕುಮಾರ್, ರವಿ ಆಕಳ, ಸೋನಹಳ್ಳಿ ಮಹದೇವಸ್ವಾಮಿ, ಎಂ.ಬಿ. ಲಿಂಗರಾಜು, ಕರೋಹಟ್ಟಿ ನಾಗೇಶ, ತುಂಬಲ ಸಿದ್ದರಾಜು, ರವಿ, ಪ್ರತಾಪ್, ಕೇತಹಳ್ಳಿ ಪ್ರಶಾಂತ್, ಹುಚ್ಚಯ್ಯ, ರಂಗಸಮುದ್ರ ರಂಗಸ್ವಾಮಿ, ಆಟೋ ನಂಜುಂಡ, ಮುಂಡಗದೊರೆ ಮೋಹನ, ಕುಕ್ಕೂರು ಪ್ರಶಾಂತ್, ಶಾಂತಕುಮಾರ್ ಹಾಗೂ ಇತರರು ಇದ್ದರು.




























