Home ಜಿಲ್ಲೆ ಮೈಸೂರು ಪೆÇಲೀಸರಿಂದ ಸ್ನೇಹಮಯಿ ಕೃಷ್ಣ ಮನೆಯಲ್ಲಿ ಪರಿಶೀಲನೆ

ಪೆÇಲೀಸರಿಂದ ಸ್ನೇಹಮಯಿ ಕೃಷ್ಣ ಮನೆಯಲ್ಲಿ ಪರಿಶೀಲನೆ

ಸಂಜೆವಾಣಿ ನ್ಯೂಸ್
ಮೈಸೂರು: ಫೆ.21:-
ಈ ಹಿಂದೆ ಎಂಡಿಎ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಡಿ.ಬಿ.ನಟೇಶ್ ಅವರ ವಿರುದ್ಧ ಲಂಚ ನೀಡಿರುವ ಆರೋಪ ಹೊರಿಸಿದ್ದ ಆರ್‍ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಬೆಂಗಳೂರು ಸಿಸಿಬಿ ಪೆÇಲೀಸರು ಬಂಧಿಸಿದ್ದು. ಇದೀಗ ಪೆÇಲೀಸರು ಕೃಷ್ಣ ಅವರ ಮೈಸೂರು ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.


ಬೆಂಗಳೂರಿನ ನ್ಯಾಯಾಲಯದ ಬಳಿ ಕೃಷ್ಣ ಅವರನ್ನು ವಶಕ್ಕೆ ಪಡೆದ ಸಿಸಿಬಿ ಪೆÇಲೀಸರ ತಂಡ ಮದ್ಯಾಹ್ನ 3 ಗಂಟೆ ವೇಳೆಗೆ ಸರ್ಚ್ ವಾರೆಂಟ್ ಪಡೆದು ಮೈಸೂರಿಗೆ ಆಗಮಿಸಿದ್ದಾರೆ. ನಂತರ ನಗರದ ಗುಂಡುರಾವ್‍ನಗರದಲ್ಲಿರುವ ಅವರ ನಿವಾಸಕ್ಕೆ ತೆರಳಿದ ಅವರು ಮೊದಲಿಗೆ ಸ್ನೇಹಮಯಿ ಕೃಷ್ಣ ಅವರಿಗೆ ಸೇರಿದ್ದು ಎನ್ನಲಾದ ಶಿವ ಫೈನಾನ್ಸ್ ಕಚೇರಿಗೆ ತೆರಳಿ ಅಲ್ಲಿರುವ ಕಡತಗಳ ಪರಿಶೀಲನೆ ನಡೆಸಿದ್ದಾರೆ.
ನಂತರ ಕಚೇರಿಯ ಹಿಂಬಾಗವಿರುವ ಕೃಷ್ಣ ಅವರ ಮನೆಗೆ ತೆರಳಿ ಕುಟುಂಬದವರಿಗೆ ಸರ್ಚ್ ವಾರೆಂಟ್ ತೋರಿಸಿದ ಪೆÇಲೀಸರು, ನಂತರ ಮನೆಯಲ್ಲಿ ಸಂಪೂರ್ಣ ಪರಿಶೀಲನೆ ನಡೆಸಿದ್ದಾರೆ. ಈ ವಳೆ ಮನೆ ಹಾಗೂ ಕಚೇರಿಯಲ್ಲಿ ಇದ್ದ ಕೆಲ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.ಸುಮಾರು 2 ಗಂಟೆಗಳ ಕಾಲ ಪರಿಶೀಲನೆ ನಡೆಸಿದ ಸಿಸಿಬಿಯ 6 ಪೆÇಲೀಸರ ತಂಡ ನಂತರ ಸ್ನೇಹಮಯಿ ಕೃಷ್ಣ ಅವರ ಬಂಡೀಪಾಳ್ಯದ ಮನೆಗೆ ತೆರಳಿ ಅಲ್ಲಿಯೂ ಕೂಡ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಕೆಲ ಮಹತ್ವದ ದಾಖಲೆಗಳು ಲಭ್ಯವಾಗಿವೆ ಎನ್ನಲಾಗಿದೆ.